ಓ ಸತ್ಯವಿಶ್ವಾಸಿಗಳೇ, ನೀವು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ ಮತ್ತು ಯಾರು ಶೈತಾನನ ಹೆಜ್ಜೆಗಳನ್ನು ಅನುಸರಿಸುತ್ತಾನೋ ಖಂಡಿತವಾಗಿಯೂ ಅವನು ನಿರ್ಲಜ್ಜೆ ಮತ್ತು ದುಷ್ಕೃತ್ಯಗಳ ಆದೇಶವನ್ನೀಡುತ್ತಾನೆ ಮತ್ತು ಅಲ್ಲಾಹನ ಅನುಗ್ರಹವು, ಅವನ ಕಾರುಣ್ಯವು ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ನಿಮ್ಮ ಪೈಕಿ ಯಾವೊಬ್ಬನೂ ಪರಿಶುದ್ಧನಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಪರಿಶುದ್ಧಗೊಳಿಸುತ್ತಾನೆ ಮತ್ತು ಅಲ್ಲಾಹನು ಸರ್ವವನ್ನಾಲಿಸುವವನೂ, ಚನ್ನಾಗಿ ಅರಿಯುವವನೂ ಆಗಿದ್ದಾನೆ.
ನಿಮ್ಮಲ್ಲಿ ಶ್ರೇಷ್ಠರು ಮತ್ತು ಐಶ್ವರ್ಯವಂತರು ತಮ್ಮ ಆಪ್ತಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ ದಾನ ಧರ್ಮ ನೀಡುವುದಿಲ್ಲವೆಂದು ಶಪಥ ಹಾಕದಿರಲಿ. ಅವರು ಕ್ಷಮೆ ನೀಡಲಿ ಹಾಗೂ ಮನ್ನಿಸಲಿ. ನಿಮಗೆ ಅಲ್ಲಾಹನು ಕ್ಷಮೆ ನೀಡಬೇಕೆಂದು ನೀವು ಆಶಿಸುವುದಿಲ್ಲವೇ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
ನಡತೆಗೆಟ್ಟ ಸ್ತಿçÃಯರು ನಡತೆಗೆಟ್ಟ ಪುರುಷರಿಗೆ. ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತಿçÃಯರಿಗೆ ಯೋಗ್ಯವಾಗಿರುವರು ಮತ್ತು ಸುಶೀಲೆ ಸ್ತಿçÃಯರು ಸುಶೀಲ ಪುರುಷರಿಗೆ. ಸುಶೀಲ ಪುರುಷರು ಸುಶೀಲೆ ಸ್ತಿçÃಯರಿಗೆ ಯೋಗ್ಯವಾಗಿರುವರು. ಜನರು ಅವರ ಬಗ್ಗೆ ಆಡುವ ಅಸಂಬದ್ಧ ಆರೋಪಗಳಿಂದ ಅವರು ದೋಷಮುಕ್ತರು. ಅವರಿಗೆ ಕ್ಷಮೆಯು ಹಾಗೂ ಗೌರವಪೂರ್ಣ ಜೀವನಾಧಾರವು ಇರುವುದು.
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಅನುಮತಿ ಪಡೆಯುವ ಹಾಗೂ ಮನೆಯವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿರಿ. ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.ಇದು ನೀವು ಉಪದೇಶ ಪಡೆಯಬಹುದೆಂದಾಗಿದೆ.