ಅವರ ಉಪಮೆಯು ಒಬ್ಬ ಬೆಂಕಿಯುರಿಸಿದವನAತಿದೆ. ಅದು ಅವನ ಸುತ್ತಮುತ್ತಲಿರುವುದನ್ನು ಬೆಳಗಿದಾಗ, ಅಲ್ಲಾಹನು ಅವರ ಪ್ರಕಾಶವನ್ನು ಕಸಿದುಕೊಂಡನು. ಹಾಗೂ ಅವರನ್ನು ಅಂಧಕಾರಗಳಲ್ಲಿ ಬಿಟ್ಟುಬಿಟ್ಟನು. ಅವರು ದೃಷ್ಟಿ ಹೊಂದಿದವರಾಗಿರಲಿಲ್ಲ.
التفاسير:
18:2
صُمٌّۢ بُكْمٌ عُمْیٌ فَهُمْ لَا یَرْجِعُوْنَ ۟ۙ
ಅವರು ಕಿವುಡರು, ಮೂಕರು, ಅಂಧರಾಗಿದ್ದಾರೆ. ಆದ್ದರಿಂದ ಅವರು (ಸತ್ಯದೆಡೆಗೆ) ಮರಳಲಾರರು.
ಅಥವಾ ಅವರ ಇನ್ನೊಂದು ಉಪಮೆಯು ಆಕಾಶದಿಂದ ಸುರಿಯುವ ಭಾರೀ ಮಳೆಯಂತಿದೆ. ಅದರಲ್ಲಿ ಅಂಧಕಾರಗಳೂ, ಗುಡುಗೂ, ಮಿಂಚೂ ಇವೆ. ಸಿಡಿಲಿನ ಆರ್ಭಟದ ನಿಮಿತ್ತ ಮರಣವನ್ನು ಭಯಗೊಂಡು ಅವರು ತಮ್ಮ ಬೆರಳುಗಳನ್ನು ಕಿವಿಯೊಳಗೆ ತೂರಿಸಿಕೊಳ್ಳುತ್ತಾರೆ. ಮತ್ತು ಅಲ್ಲಾಹನು ಸತ್ಯ ನಿಷೇಧಿಗಳನ್ನು ಆವರಿಸಿರುತ್ತಾನೆ.
ಸದ್ಯದಲ್ಲೇ ಮಿಂಚು ಅವರ ಕಣ್ಣುಗಳನ್ನು ಕಸಿದುಕೊಳ್ಳುವಂತಿದೆ. ಅವರಿಗೆ ಬೆಳಕಾದಾಗಲೆಲ್ಲಾ ಅದರಲ್ಲಿ ನಡೆಯುತ್ತಾರೆ. ಹಾಗೂ ಅವರ ಮೇಲೆ ಕತ್ತಲಾವರಿಸಿದಾಗ ನಿಂತುಬಿಡುತ್ತಾರೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ. ಅವರ ಕಿವಿಯನ್ನು ಮತ್ತು ಅವರ ಕಣ್ಣುಗಳನ್ನು ವ್ಯರ್ಥಗೊಳಿಸುತ್ತಿದ್ದನು. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅವನೆ ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯು, ಆಕಾಶವನ್ನು ಮೇಲ್ಛಾವಣಿಯನ್ನಾಗಿಯು ಮಾಡಿರುವನು ಮತ್ತು ಆಕಾಶದಿಂದ ನೀರನ್ನು ಸುರಿಸಿ ಅದರ ಮೂಲಕ ಫಲ ಬೆಳೆಗಳನ್ನು ಹೊರತಂದು ನಿಮಗೆ ಅನ್ನಾಧಾರವನ್ನು ನೀಡಿದನು. ಜಾಗೃತೆ! ನೀವು (ಈ ಸತ್ಯವನ್ನು) ಅರಿತವರಾಗಿದ್ದೂ ಅಲ್ಲಾಹನಿಗೆ ಸರಿಸಮಾನರನ್ನು (ಉಪದೇವರುಗಳನ್ನು) ಮಾಡದಿರಿ.
ನಾವು ನಮ್ಮ ದಾಸನ (ಮುಹಮ್ಮದ್(ಸ) ರವರ) ಮೇಲೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್) ನಿಮಗೆ ಸಂದೇಹವಿದ್ದರೆ ನೀವು ಅದರಂತಹ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ. ಮತ್ತು ಅಲ್ಲಾಹನ ಹೊರತು ನಿಮ್ಮ ಸಹಾಯಕರನ್ನೂ ಕರೆದುಕೊಳ್ಳಿರಿ ನೀವು ಸತ್ಯವಂತರಾಗಿದ್ದರೆ.
ಇನ್ನು ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತ ನೀವು ಹಾಗೆಂದಿಗೂ ಮಾಡಲಾರಿರಿ. ಆದ್ದರಿಂದ ನೀವು ಮನುಷ್ಯರನ್ನು ಮತ್ತು ಶಿಲೆಗಳÀನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗೆ ಸಿದ್ಧsಗೊಳಿಸಲಾಗಿದೆ.