ترجمة معاني القرآن الكريم - الترجمة الكنادية - بشير ميسوري

رقم الصفحة: 12:2 close

external-link copy
84 : 2

وَاِذْ اَخَذْنَا مِیْثَاقَكُمْ لَا تَسْفِكُوْنَ دِمَآءَكُمْ وَلَا تُخْرِجُوْنَ اَنْفُسَكُمْ مِّنْ دِیَارِكُمْ ثُمَّ اَقْرَرْتُمْ وَاَنْتُمْ تَشْهَدُوْنَ ۟

ನೀವು ಪರಸ್ಪರ ರಕ್ತಪಾತ ಮಾಡಬಾರದು ಮತ್ತು ಪರಸ್ಪರರನ್ನು ಗಡಿಪಾರು ಮಾಡಬಾರದೆಂದು ನಾವು ನಿಮ್ಮಿಂದ ಸದೃಢ ಕರಾರನ್ನು ಪಡೆದ ಸಂಧರ್ಭವನ್ನು ಸ್ಮರಿಸಿರಿ, ನೀವು ಅದನ್ನು ಅಂಗೀಕರಿಸಿದಿರಿ ಹಾಗೂ ಸ್ವತಃ ನೀವು ಅದರ ಸಾಕ್ಷಿಗಳಾಗಿದ್ದೀರಿ. info
التفاسير:

external-link copy
85 : 2

ثُمَّ اَنْتُمْ هٰۤؤُلَآءِ تَقْتُلُوْنَ اَنْفُسَكُمْ وَتُخْرِجُوْنَ فَرِیْقًا مِّنْكُمْ مِّنْ دِیَارِهِمْ ؗ— تَظٰهَرُوْنَ عَلَیْهِمْ بِالْاِثْمِ وَالْعُدْوَانِ ؕ— وَاِنْ یَّاْتُوْكُمْ اُسٰرٰی تُفٰدُوْهُمْ وَهُوَ مُحَرَّمٌ عَلَیْكُمْ اِخْرَاجُهُمْ ؕ— اَفَتُؤْمِنُوْنَ بِبَعْضِ الْكِتٰبِ وَتَكْفُرُوْنَ بِبَعْضٍ ۚ— فَمَا جَزَآءُ مَنْ یَّفْعَلُ ذٰلِكَ مِنْكُمْ اِلَّا خِزْیٌ فِی الْحَیٰوةِ الدُّنْیَا ۚ— وَیَوْمَ الْقِیٰمَةِ یُرَدُّوْنَ اِلٰۤی اَشَدِّ الْعَذَابِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟

ಅದಾಗ್ಯೂ ನೀವು ಪರಸ್ಪರರನ್ನು ಕೊಂದಿರಿ ಮತ್ತು ನಿಮ್ಮಲ್ಲಿನ ಒಂದು ವರ್ಗವನ್ನು ಗಡಿಪಾರು ಮಾಡಿದಿರಿ ಮತ್ತು ಪಾಪ ಹಾಗೂ ಅತಿಕ್ರಮದ ಕೃತ್ಯಗಳಲ್ಲಿ ಅವರ ವಿರುದ್ಧ ಇನ್ನೊಬ್ಬರ ಪಕ್ಷವಹಿಸಿಕೊಂಡಿರಿ. ಅವರು ನಿಮ್ಮ ಬಳಿಗೆ ಯುದ್ಧ ಕೈದಿಗಳಾಗಿ ಬಂದಾಗ ನೀವು ಫಿದ್‌ಯ (ಪರಿಹಾರ ಧನ) ಕೊಟ್ಟು ಸ್ವತಂತ್ರಗೊಳಿಸಿದಿರಿ. ಆದರೆ ಅವರನ್ನು ಹೊರ ಹಾಕುವುದು ನಿಮ್ಮ ಮೇಲೆ ನಿಷಿದ್ದಗೊಳಿಸಲಾಗಿತ್ತು. ಏನು ನೀವು ಕೆಲವು ನಿಯಮಗಳ ಮೇಲೆ ವಿಶ್ವಾಸವಿಟ್ಟು ಮತ್ತು ಇನ್ನು ಕೆಲವನ್ನು ನಿಷೇಧಿಸುತ್ತಿರುವಿರಾ? ನಿಮ್ಮ ಪೈಕಿ ಹೀಗೆ ಮಾಡುವವರು ಯಾರೇ ಇರಲಿ ಅವರ ಪ್ರತಿಫÀಲವು ಇಹಲೋಕ ಜೀವನದಲ್ಲಿ ನಿಂದ್ಯತೆಯೇ ಇದೆ ಮತ್ತು ಪ್ರಳಯ ದಿನದಂದು ಅವರನ್ನು ಅತ್ಯುಗ್ರ ಯಾತನೆಯೆಡೆಗೆ ತಳ್ಳಲಾಗುವುದು. ಮತ್ತು ನಿಮ್ಮ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷ್ಯನಲ್ಲ. info
التفاسير:

external-link copy
86 : 2

اُولٰٓىِٕكَ الَّذِیْنَ اشْتَرَوُا الْحَیٰوةَ الدُّنْیَا بِالْاٰخِرَةِ ؗ— فَلَا یُخَفَّفُ عَنْهُمُ الْعَذَابُ وَلَا هُمْ یُنْصَرُوْنَ ۟۠

ಅವರೇ ಪರಲೋಕದ ಬದಲಿಗೆ ಇಹಲೋಕ ಜೀವನವನ್ನು ಖರೀದಿಸಿಕೊಂಡವರು. ಅವರ ಯಾತನೆಯಲ್ಲಿ ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಅವರಿಗೆ ಯಾವ ಸಹಾಯವೂ ದೊರಕಲಾರದು. info
التفاسير:

external-link copy
87 : 2

وَلَقَدْ اٰتَیْنَا مُوْسَی الْكِتٰبَ وَقَفَّیْنَا مِنْ بَعْدِهٖ بِالرُّسُلِ ؗ— وَاٰتَیْنَا عِیْسَی ابْنَ مَرْیَمَ الْبَیِّنٰتِ وَاَیَّدْنٰهُ بِرُوْحِ الْقُدُسِ ؕ— اَفَكُلَّمَا جَآءَكُمْ رَسُوْلٌۢ بِمَا لَا تَهْوٰۤی اَنْفُسُكُمُ اسْتَكْبَرْتُمْ ۚ— فَفَرِیْقًا كَذَّبْتُمْ ؗ— وَفَرِیْقًا تَقْتُلُوْنَ ۟

ನಾವು (ಪೈಗಂಬರ್) ಮೂಸಾರಿಗೆ(ಅ) ಗ್ರಂಥವನ್ನು (ತೌರಾತ್) ದಯಪಾಲಿಸಿದೆವು ಹಾಗೂ ಅವರ ನಂತರ ಅನೇಕ ಸಂದೇಶವಾಹಕರನ್ನು ಕಳುಹಿಸಿದೆವು. ಮರ್ಯಮಳ ಪುತ್ರ ಈಸಾರವರಿಗೆ ಸುಸ್ಪಷ್ಟ ಪುರಾವೆಗಳನ್ನು ದಯಪಾಲಿಸಿದೆವು ಹಾಗೂ ಅವರನ್ನು ನಾವು ಪವಿತ್ರಾತ್ಮನ ಮೂಲಕ ಬಲಪಡಿಸಿದೆವು. ಆದರೆ ನಿಮ್ಮ ಇಚ್ಛೆಗಳಿಗೆ ವಿರುದ್ಧವಾದುದ್ದನ್ನು ಸಂದೇಶವಾಹಕರು ನಿಮ್ಮ ಬಳಿ ತಂದಾಗ ನೀವು ಕೂಡಲೇ ದರ್ಪತೋರಿದಿರಿ. ಹಾಗೆಯೇ ಅವರಲ್ಲಿ ಕೆಲವರನ್ನು ನೀವು ಸುಳ್ಳಾಗಿಸಿದಿರಿ. ಇನ್ನು ಕೆಲವರನ್ನು ವಧಿಸಿದಿರಿ. info
التفاسير:

external-link copy
88 : 2

وَقَالُوْا قُلُوْبُنَا غُلْفٌ ؕ— بَلْ لَّعَنَهُمُ اللّٰهُ بِكُفْرِهِمْ فَقَلِیْلًا مَّا یُؤْمِنُوْنَ ۟

ಮತ್ತು (ಯಹೂದರಿಗೆ ಮುಹಮ್ಮದ್(ಸ)ರವರಲ್ಲಿ) ವಿಶ್ವಾಸವಿಡಿರಿ ಎನ್ನಲಾದಾಗ ಅವರು ಹೇಳುತ್ತಾರೆ; ನಮ್ಮ ಹೃದಯಗಳು ಮುಚ್ಚಲಾಗಿವೆ (ಹಾಗಾಗಿ ನಮಗೆ ಅರ್ಥವಾಗುತ್ತಿಲ್ಲ) ಹಾಗಲ್ಲ ಅವರ ಸತ್ಯನಿಷೇಧದ ನಿಮಿತ್ತ ಅಲ್ಲಾಹನು ಅವರನ್ನು ಶಪಿಸಿದ್ದಾನೆ. ಅವರ ವಿಶ್ವಾಸವು ಅತ್ಯಲ್ಪವೇ ಆಗಿದೆ. info
التفاسير: