ಅವರು ಮೊಡಿ ಹಾಕಿದಾಗ ಮೂಸಾ ಹೇಳಿದರು; ನೀವು ತಂದಿರುವುದು ಜಾದೂವಾಗಿದೆ. ನಿಶ್ಚಯವಾಗಿಯೂ ಅಲ್ಲಾಹನು ಸಧ್ಯದಲ್ಲೇ ಅದನ್ನು ನಿಶ್ಫಲಗೊಳಿಸುವನು. ಅಲ್ಲಾಹನು ಕಿಡಿಗೇಡಿಗಳ ಕಾರ್ಯವನ್ನು ಕೈಗೂಡಿಸುವುದಿಲ್ಲ.
ಫಿರ್‌ಔನ್ ಮತ್ತು ಅವನ ಮುಖಂಡರು ತಮ್ಮನ್ನು ಹಿಂಸೆಗೊಳಪಡಿಸಬಹುದೆAದು ಹೆದರಿ ಮೂಸಾರವರ ಮೇಲೆ ಅವರ ಜನಾಂಗದ ಅತ್ಯಲ್ಪ ಮಂದಿ ಯುವಕರ ಹೊರತು ಇನ್ನಾರು ವಿಶ್ವಾಸವಿರಿಸಲಿಲ್ಲ. ಮತ್ತು ನಿಜವಾಗಿಯೂ ಫಿರ್‌ಔನನು ಭೂಮಿಯಲ್ಲಿ ಪ್ರಾಬಲ್ಯ ಹೊಂದಿದ್ದನು. ಮಾತ್ರವಲ್ಲದೆ ಅವನು ಹದ್ದು ಮೀರಿದವರಲ್ಲಾಗಿದ್ದನು.
ಮತ್ತು ನಾವು ಮೂಸಾ ಹಾಗೂ ಅವರ ಸಹೋದರನೆಡೆಗೆ ಸಂದೇಶ ಕಳುಹಿಸಿದೆವು; “ನೀವಿಬ್ಬರೂ ನಿಮ್ಮ ಜನಾಂಗದವರಿಗೆ ಈಜಿಪ್ಟಿನಲ್ಲಿ ವಸತಿಗಳ ವ್ಯವಸ್ಥೆ ಮಾಡಿರಿ ಮತ್ತು ನೀವೆಲ್ಲರೂ ನಿಮ್ಮ ಅದೇ ವಸತಿಗಳನ್ನು ನಮಾಜಿ಼ನ ಸ್ಥಳವನ್ನಾಗಿ ನಿಶ್ಚಯಿಸಿರಿ ಹಾಗು ನಮಾಜ಼್ ಸಂಸ್ಥಾಪಿಸಿರಿ ಮತ್ತು ನೀವು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ನೀಡಿರಿ.
ಮತ್ತು ಮೂಸಾ ಪ್ರಾರ್ಥಿಸಿದರು, ನಮ್ಮ ಪ್ರಭುವೇ, ನೀನು ಫಿರ್‌ಔನನಿಗೂ, ಅವನ ಮುಖಂಡರಿಗೂ ಈ ಇಹಲೋಕ ಜೀವನದಲ್ಲಿ ವೈಭವ ಹಾಗೂ ವಿವಿಧ ಸಿರಿ ಸಂಪತ್ತನ್ನು ನೀಡಿರುವೆ. ಓ ನಮ್ಮ ಪ್ರಭುವೇ, ಇದು ಅವರು ನಿನ್ನ ಮಾರ್ಗದಿಂದ ಜನರನ್ನು ಭ್ರಷ್ಟಗೊಳಿಸಲಿಕ್ಕಾಗಿಯೇ ? ಓ ನಮ್ಮ ಪ್ರಭುವೇ, ಅವರ ಸಂಪತ್ತನ್ನು ನೀನು ನಾಶಗೊಳಿಸು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಹಾಗೆಯೇ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವ ತನಕ ವಿಶ್ವಾಸವಿಡದಂತಾಗಲಿ.