पवित्र कुरअानको अर्थको अनुवाद - कन्नड अनुवाद : बशीर माइसुरी ।

رقم الصفحة: 217:208 close

external-link copy
79 : 10

وَقَالَ فِرْعَوْنُ ائْتُوْنِیْ بِكُلِّ سٰحِرٍ عَلِیْمٍ ۟

ಮತ್ತು ಫಿರ್‌ಔನನು ಆಜ್ಞಾಪಿಸಿದನು ನೀವು ನನ್ನ ಬಳಿಗೆ ಪ್ರತಿಯೊಬ್ಬ ನಿಪುಣ ಜಾದೂಗಾರನನ್ನು ಹಾಜರುಪಡಿಸಿರಿ. info
التفاسير:

external-link copy
80 : 10

فَلَمَّا جَآءَ السَّحَرَةُ قَالَ لَهُمْ مُّوْسٰۤی اَلْقُوْا مَاۤ اَنْتُمْ مُّلْقُوْنَ ۟

ಅನಂತರ ಜಾದೂಗಾರರು ಬಂದಾಗ ಮೂಸಾ ಅವರೊಡನೆ ಹೇಳಿದರು; ನಿಮಗೆ ಹಾಕಲಿರುವ ಮೊಡಿಯನ್ನು ಹಾಕಿಬಿಡಿರಿ. info
التفاسير:

external-link copy
81 : 10

فَلَمَّاۤ اَلْقَوْا قَالَ مُوْسٰی مَا جِئْتُمْ بِهِ ۙ— السِّحْرُ ؕ— اِنَّ اللّٰهَ سَیُبْطِلُهٗ ؕ— اِنَّ اللّٰهَ لَا یُصْلِحُ عَمَلَ الْمُفْسِدِیْنَ ۟

ಅವರು ಮೊಡಿ ಹಾಕಿದಾಗ ಮೂಸಾ ಹೇಳಿದರು; ನೀವು ತಂದಿರುವುದು ಜಾದೂವಾಗಿದೆ. ನಿಶ್ಚಯವಾಗಿಯೂ ಅಲ್ಲಾಹನು ಸಧ್ಯದಲ್ಲೇ ಅದನ್ನು ನಿಶ್ಫಲಗೊಳಿಸುವನು. ಅಲ್ಲಾಹನು ಕಿಡಿಗೇಡಿಗಳ ಕಾರ್ಯವನ್ನು ಕೈಗೂಡಿಸುವುದಿಲ್ಲ. info
التفاسير:

external-link copy
82 : 10

وَیُحِقُّ اللّٰهُ الْحَقَّ بِكَلِمٰتِهٖ وَلَوْ كَرِهَ الْمُجْرِمُوْنَ ۟۠

ಮತ್ತು ಅಲ್ಲಾಹನು ತನ್ನ ವಚನಗಳ ಮೂಲಕ ಸತ್ಯವನ್ನು ಸಾಬೀತು ಮಾಡಿ ತೋರಿಸುವನು, ಅದು ಅಪರಾಧಿಗಳಿಗೆ ಇಷ್ಟವಿರದಿದ್ದರೂ ಸರಿಯೇ. info
التفاسير:

external-link copy
83 : 10

فَمَاۤ اٰمَنَ لِمُوْسٰۤی اِلَّا ذُرِّیَّةٌ مِّنْ قَوْمِهٖ عَلٰی خَوْفٍ مِّنْ فِرْعَوْنَ وَمَلَاۡىِٕهِمْ اَنْ یَّفْتِنَهُمْ ؕ— وَاِنَّ فِرْعَوْنَ لَعَالٍ فِی الْاَرْضِ ۚ— وَاِنَّهٗ لَمِنَ الْمُسْرِفِیْنَ ۟

ಫಿರ್‌ಔನ್ ಮತ್ತು ಅವನ ಮುಖಂಡರು ತಮ್ಮನ್ನು ಹಿಂಸೆಗೊಳಪಡಿಸಬಹುದೆAದು ಹೆದರಿ ಮೂಸಾರವರ ಮೇಲೆ ಅವರ ಜನಾಂಗದ ಅತ್ಯಲ್ಪ ಮಂದಿ ಯುವಕರ ಹೊರತು ಇನ್ನಾರು ವಿಶ್ವಾಸವಿರಿಸಲಿಲ್ಲ. ಮತ್ತು ನಿಜವಾಗಿಯೂ ಫಿರ್‌ಔನನು ಭೂಮಿಯಲ್ಲಿ ಪ್ರಾಬಲ್ಯ ಹೊಂದಿದ್ದನು. ಮಾತ್ರವಲ್ಲದೆ ಅವನು ಹದ್ದು ಮೀರಿದವರಲ್ಲಾಗಿದ್ದನು. info
التفاسير:

external-link copy
84 : 10

وَقَالَ مُوْسٰی یٰقَوْمِ اِنْ كُنْتُمْ اٰمَنْتُمْ بِاللّٰهِ فَعَلَیْهِ تَوَكَّلُوْۤا اِنْ كُنْتُمْ مُّسْلِمِیْنَ ۟

ಮತ್ತು ಮೂಸಾ ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸಿದವರಾಗಿದ್ದರೆ ಅವನ ಮೇಲೆಯೇ ಭರವಸೆಯನ್ನಿರಿಸಿರಿ, ನೀವು ಶರಣಾದವರಾಗಿದ್ದರೆ. info
التفاسير:

external-link copy
85 : 10

فَقَالُوْا عَلَی اللّٰهِ تَوَكَّلْنَا ۚ— رَبَّنَا لَا تَجْعَلْنَا فِتْنَةً لِّلْقَوْمِ الظّٰلِمِیْنَ ۟ۙ

ಅವರೆಂದರು; ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಿದೆವು. ಓ ನಮ್ಮ ಪ್ರಭುವೇ ! ನಮ್ಮನ್ನು ಅಕ್ರಮಿ ಜನಾಂಗಕ್ಕೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು. info
التفاسير:

external-link copy
86 : 10

وَنَجِّنَا بِرَحْمَتِكَ مِنَ الْقَوْمِ الْكٰفِرِیْنَ ۟

ಮತ್ತು ನಮ್ಮನ್ನು ನಿನ್ನ ಕೃಪೆಯ ಮೂಲಕ ಸತ್ಯನಿಷೇಧಿ ಜನಾಂಗದಿAದ ರಕ್ಷಿಸು. info
التفاسير:

external-link copy
87 : 10

وَاَوْحَیْنَاۤ اِلٰی مُوْسٰی وَاَخِیْهِ اَنْ تَبَوَّاٰ لِقَوْمِكُمَا بِمِصْرَ بُیُوْتًا وَّاجْعَلُوْا بُیُوْتَكُمْ قِبْلَةً وَّاَقِیْمُوا الصَّلٰوةَ ؕ— وَبَشِّرِ الْمُؤْمِنِیْنَ ۟

ಮತ್ತು ನಾವು ಮೂಸಾ ಹಾಗೂ ಅವರ ಸಹೋದರನೆಡೆಗೆ ಸಂದೇಶ ಕಳುಹಿಸಿದೆವು; “ನೀವಿಬ್ಬರೂ ನಿಮ್ಮ ಜನಾಂಗದವರಿಗೆ ಈಜಿಪ್ಟಿನಲ್ಲಿ ವಸತಿಗಳ ವ್ಯವಸ್ಥೆ ಮಾಡಿರಿ ಮತ್ತು ನೀವೆಲ್ಲರೂ ನಿಮ್ಮ ಅದೇ ವಸತಿಗಳನ್ನು ನಮಾಜಿ಼ನ ಸ್ಥಳವನ್ನಾಗಿ ನಿಶ್ಚಯಿಸಿರಿ ಹಾಗು ನಮಾಜ಼್ ಸಂಸ್ಥಾಪಿಸಿರಿ ಮತ್ತು ನೀವು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ನೀಡಿರಿ. info
التفاسير:

external-link copy
88 : 10

وَقَالَ مُوْسٰی رَبَّنَاۤ اِنَّكَ اٰتَیْتَ فِرْعَوْنَ وَمَلَاَهٗ زِیْنَةً وَّاَمْوَالًا فِی الْحَیٰوةِ الدُّنْیَا ۙ— رَبَّنَا لِیُضِلُّوْا عَنْ سَبِیْلِكَ ۚ— رَبَّنَا اطْمِسْ عَلٰۤی اَمْوَالِهِمْ وَاشْدُدْ عَلٰی قُلُوْبِهِمْ فَلَا یُؤْمِنُوْا حَتّٰی یَرَوُا الْعَذَابَ الْاَلِیْمَ ۟

ಮತ್ತು ಮೂಸಾ ಪ್ರಾರ್ಥಿಸಿದರು, ನಮ್ಮ ಪ್ರಭುವೇ, ನೀನು ಫಿರ್‌ಔನನಿಗೂ, ಅವನ ಮುಖಂಡರಿಗೂ ಈ ಇಹಲೋಕ ಜೀವನದಲ್ಲಿ ವೈಭವ ಹಾಗೂ ವಿವಿಧ ಸಿರಿ ಸಂಪತ್ತನ್ನು ನೀಡಿರುವೆ. ಓ ನಮ್ಮ ಪ್ರಭುವೇ, ಇದು ಅವರು ನಿನ್ನ ಮಾರ್ಗದಿಂದ ಜನರನ್ನು ಭ್ರಷ್ಟಗೊಳಿಸಲಿಕ್ಕಾಗಿಯೇ ? ಓ ನಮ್ಮ ಪ್ರಭುವೇ, ಅವರ ಸಂಪತ್ತನ್ನು ನೀನು ನಾಶಗೊಳಿಸು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಹಾಗೆಯೇ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವ ತನಕ ವಿಶ್ವಾಸವಿಡದಂತಾಗಲಿ. info
التفاسير: