ترجمة معاني القرآن الكريم - الترجمة الكنادية - بشير ميسوري

رقم الصفحة:close

external-link copy
21 : 10

وَاِذَاۤ اَذَقْنَا النَّاسَ رَحْمَةً مِّنْ بَعْدِ ضَرَّآءَ مَسَّتْهُمْ اِذَا لَهُمْ مَّكْرٌ فِیْۤ اٰیَاتِنَا ؕ— قُلِ اللّٰهُ اَسْرَعُ مَكْرًا ؕ— اِنَّ رُسُلَنَا یَكْتُبُوْنَ مَا تَمْكُرُوْنَ ۟

ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ ಸವಿಯನ್ನುಣಿಸಿದಾಗ ಅವರು ಕೂಡಲೇ ನಮ್ಮ ದೃಷ್ಟಾಂತಗಳ ಬಗ್ಗೆ ಕುತಂತ್ರಗಳನ್ನು ನಡೆಸತೊಡಗುತ್ತಾರೆ. ನೀವು ಹೇಳಿರಿ ಅಲ್ಲಾಹನು ತಂತ್ರದಲ್ಲಿ ಅತೀ ಶೀಘ್ರನಾಗಿರುತ್ತಾನೆ. ನಿಶ್ಚಯವಾಗಿಯೂ ನಮ್ಮ ದೇವಚರರು ನಿಮ್ಮ ಸಕಲ ಕುತಂತ್ರಗಳನ್ನು ದಾಖಲಿಸುತ್ತಿರುತ್ತಾರೆ. info
التفاسير:

external-link copy
22 : 10

هُوَ الَّذِیْ یُسَیِّرُكُمْ فِی الْبَرِّ وَالْبَحْرِ ؕ— حَتّٰۤی اِذَا كُنْتُمْ فِی الْفُلْكِ ۚ— وَجَرَیْنَ بِهِمْ بِرِیْحٍ طَیِّبَةٍ وَّفَرِحُوْا بِهَا جَآءَتْهَا رِیْحٌ عَاصِفٌ وَّجَآءَهُمُ الْمَوْجُ مِنْ كُلِّ مَكَانٍ وَّظَنُّوْۤا اَنَّهُمْ اُحِیْطَ بِهِمْ ۙ— دَعَوُا اللّٰهَ مُخْلِصِیْنَ لَهُ الدِّیْنَ ۚ۬— لَىِٕنْ اَنْجَیْتَنَا مِنْ هٰذِهٖ لَنَكُوْنَنَّ مِنَ الشّٰكِرِیْنَ ۟

ನಿಮ್ಮನ್ನು ನೆಲ ಜಲಗಳಲ್ಲಿ ಸಾಗಿಸುವವನು ಅಲ್ಲಾಹನೇ ಆಗಿರುವನು. ನೀವು ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ಆ ಹಡಗು ಜನರನ್ನು ಹೊತ್ತುಕೊಂಡು ಅನುಕೂಲಕರ ಮಾರುತದ ಮೂಲಕ ಸಂಚರಿಸುತ್ತಿರುವಾಗ ಅವರು ಇದರಿಂದ ಸಂತಸದಿAದಿರುವಾಗ ಹಠಾತ್ತನೆ ಅವರ ಮೇಲೆ ಭಾರಿ ಬಿರುಗಾಳಿಯು ಬಂದು ಎಲ್ಲಾ ಕಡೆಯಿಂದಲೂ ಅಲೆಗಳು ಅಪ್ಪಳಿಸುತ್ತಿರುವಾಗ ಮತ್ತು ನಾವು ಆವರಿಸಲ್ಪಟ್ಟಿವೆಂದು ಅವರು ಮನಗಾಣುತ್ತಾರೆ. (ಆ ಸಂದರ್ಭದಲ್ಲಿ) ಎಲ್ಲರೂ ನಿಷ್ಕಳಂಕ ವಿಶ್ವಾಸದೊಂದಿಗೆ “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ಖಂಡಿತವಾಗಿಯು ನಾವು ಕೃತಜ್ಞರಲ್ಲಾಗಿಬಿಡುವೆವು ಎಂದು ಅಲ್ಲಾಹನನ್ನೇ ಪ್ರಾರ್ಥಿಸುತ್ತಾರೆ” info
التفاسير:

external-link copy
23 : 10

فَلَمَّاۤ اَنْجٰىهُمْ اِذَا هُمْ یَبْغُوْنَ فِی الْاَرْضِ بِغَیْرِ الْحَقِّ ؕ— یٰۤاَیُّهَا النَّاسُ اِنَّمَا بَغْیُكُمْ عَلٰۤی اَنْفُسِكُمْ ۙ— مَّتَاعَ الْحَیٰوةِ الدُّنْیَا ؗ— ثُمَّ اِلَیْنَا مَرْجِعُكُمْ فَنُنَبِّئُكُمْ بِمَا كُنْتُمْ تَعْمَلُوْنَ ۟

ಅನಂತರ ಅಲ್ಲಾಹನು ಅವರನ್ನು ಪಾರುಮಾಡಿದಾಗ ಕೂಡಲೇ ಅವರು ಭೂಮಿಯಲ್ಲಿ ಅನ್ಯಾಯವಾಗಿ ಬಂಡಾಯ ವೆಸಗತೊಡಗುತ್ತಾರೆ. ಓ ಜನರೇ ! ನಿಮ್ಮ ಬಂಡಾಯವು ನಿಮಗೆ ಆಪತ್ತಾಗಿಬಿಡಲಿದೆ. ಇದು ಇಹಲೋಕ ಜೀವನದ ತಾತ್ಕಾಲಿಕ ಸುಖಸೌಕರ್ಯ ಮಾತ್ರ. ಅನಂತರ ನಿಮಗೆ ನಮ್ಮ ಬಳಿಗೆ ಮರಳಲಿಕ್ಕಿರುವುದು. ಆಮೇಲೆ ನಾವು ನಿಮಗೆ ನಿಮ್ಮ ಕೃತ್ಯಗಳನ್ನೆಲ್ಲಾ ತಿಳಿಸಿಕೊಡುವೆವು. info
التفاسير:

external-link copy
24 : 10

اِنَّمَا مَثَلُ الْحَیٰوةِ الدُّنْیَا كَمَآءٍ اَنْزَلْنٰهُ مِنَ السَّمَآءِ فَاخْتَلَطَ بِهٖ نَبَاتُ الْاَرْضِ مِمَّا یَاْكُلُ النَّاسُ وَالْاَنْعَامُ ؕ— حَتّٰۤی اِذَاۤ اَخَذَتِ الْاَرْضُ زُخْرُفَهَا وَازَّیَّنَتْ وَظَنَّ اَهْلُهَاۤ اَنَّهُمْ قٰدِرُوْنَ عَلَیْهَاۤ ۙ— اَتٰىهَاۤ اَمْرُنَا لَیْلًا اَوْ نَهَارًا فَجَعَلْنٰهَا حَصِیْدًا كَاَنْ لَّمْ تَغْنَ بِالْاَمْسِ ؕ— كَذٰلِكَ نُفَصِّلُ الْاٰیٰتِ لِقَوْمٍ یَّتَفَكَّرُوْنَ ۟

ವಾಸ್ತವದಲ್ಲಿ ಐಹಿಕ ಜೀವನದ ಉದಾಹರಣೆಯು ಆಕಾಶದಿಂದ ನಾವು ಸುರಿಸಿರುವಂತಹಾ ಮಳೆಯಂತಿದೆ. ಬಳಿಕ ಅದರೊಂದಿಗೆ ಮನುಷ್ಯರು ಮತ್ತು ಪ್ರಾಣಿಗಳು ತಿನ್ನುವ ಭೂಮಿಯ ಬೆಳೆಗಳು ಮಿಶ್ರಿತಗೊಂಡು ಹುಲುಸಾಗಿ ಬೆಳೆದವು. ಕೊನೆಗೆ ಭೂಮಿಯು ತನ್ನ ಸಂಪೂರ್ಣ ಶೋಭಾಲಂಕಾರವನ್ನು ಪಡೆದಾಗ ಹಾಗು ಸುಂದರವಾಗಿ ಕಂಗೊಳಿಸಿದಾಗ ಮತ್ತು ಅದರ ಮೇಲೆ ನಾವು ಸಾಮರ್ಥ್ಯವುಳ್ಳವರೆಂದು ಅದರ ಮಾಲೀಕರು ಭಾವಿಸಿಕೊಂಡಾಗ ನಮ್ಮ ಕಡೆಯಿಂದ ಒಂದು ಆಜ್ಞೆಯು(ಶಿಕ್ಷೆಯು) ರಾತ್ರಿ ಅಥವ ಹಗಲಿನ ವೇಳೆಯಲ್ಲಿ ಬಂದುಬಿಟ್ಟಿತು. ಕೊನೆಗೆ ನಾವದನ್ನು ನಿನ್ನೆಯ ದಿನ ಇರಲೇ ಇಲ್ಲವೆಂಬAತೆ ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟೆವು, ಇದೇ ಪ್ರಕಾರ ನಾವು ಚಿಂತಿಸುವ ಜನರಿಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ. info
التفاسير:

external-link copy
25 : 10

وَاللّٰهُ یَدْعُوْۤا اِلٰی دَارِ السَّلٰمِ ؕ— وَیَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟

ಅಲ್ಲಾಹನು ಶಾಂತಿಧಾಮದೆಡೆಗೆ ಕರೆಯುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅವನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. info
التفاسير: