[1] ಪರಿಶುದ್ಧ ವಚನ ಎಂದರೆ ‘ಲಾಇಲಾಹ ಇಲ್ಲಲ್ಲಾಹ್’ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ) ಎಂಬ ವಚನ. ಈ ವಚನವನ್ನು ಸ್ವೀಕರಿಸಿ ಇದರ ಆಧಾರದಲ್ಲಿ ಬದುಕುವ ಸತ್ಯವಿಶ್ವಾಸಿಗೆ ಯಾವುದೇ ಭಯವಿಲ್ಲ. ಅವನು ಸಂಪೂರ್ಣ ಆತ್ಮಶಾಂತಿಯೊಂದಿಗೆ ಬದುಕುತ್ತಾನೆ. ಜೀವನದಲ್ಲಿ ಏರುಪೇರುಗಳನ್ನು ಕಾಣುವಾಗ, ಕಷ್ಟಗಳು ಬರುವಾಗ, ದುರಂತಗಳು ಸಂಭವಿಸುವಾಗ ಅವನು ಧೃತಿಗೆಡುವುದಿಲ್ಲ. ಅವನು ಅಲ್ಲಾಹನಲ್ಲಿ ಸಂಪೂರ್ಣ ಭರವಸೆಯಿಟ್ಟು ಮುಂದುವರಿಯುತ್ತಾನೆ. ಅವನ ಎಲ್ಲಾ ಕರ್ಮಗಳಿಗೂ ಪರಲೋಕದಲ್ಲಿ ಅತ್ಯುತ್ತಮ ಪ್ರತಿಫಲವಿರುತ್ತದೆ.