የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

የገፅ ቁጥር:close

external-link copy
11 : 14

قَالَتْ لَهُمْ رُسُلُهُمْ اِنْ نَّحْنُ اِلَّا بَشَرٌ مِّثْلُكُمْ وَلٰكِنَّ اللّٰهَ یَمُنُّ عَلٰی مَنْ یَّشَآءُ مِنْ عِبَادِهٖ ؕ— وَمَا كَانَ لَنَاۤ اَنْ نَّاْتِیَكُمْ بِسُلْطٰنٍ اِلَّا بِاِذْنِ اللّٰهِ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟

ಅವರ ಸಂದೇಶವಾಹಕರುಗಳು ಕೇಳಿದರು: “ನಾವು ನಿಮ್ಮಂತಿರುವ ಮನುಷ್ಯರೇ ಆಗಿದ್ದೇವೆ. ಆದರೆ ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರನ್ನು ಆಶೀರ್ವದಿಸುತ್ತಾನೆ. ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ಸಾಕ್ಷ್ಯಾಧಾರವನ್ನು ತರಲು ನಮಗೆ ಸಾಧ್ಯವಿಲ್ಲ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ. info
التفاسير:

external-link copy
12 : 14

وَمَا لَنَاۤ اَلَّا نَتَوَكَّلَ عَلَی اللّٰهِ وَقَدْ هَدٰىنَا سُبُلَنَا ؕ— وَلَنَصْبِرَنَّ عَلٰی مَاۤ اٰذَیْتُمُوْنَا ؕ— وَعَلَی اللّٰهِ فَلْیَتَوَكَّلِ الْمُتَوَكِّلُوْنَ ۟۠

ಅಲ್ಲಾಹು ನಮಗೆ ನಮ್ಮ ಮಾರ್ಗಗಳನ್ನು ಸ್ಪಷ್ಟವಾಗಿ ತೋರಿಸಿರುವಾಗ ಅವನಲ್ಲಿ ಭರವಸೆಯಿಡದಿರಲು ನಮಗೇನು ಹಕ್ಕಿದೆ? ನೀವು ನೀಡುವ ಕಿರುಕುಳಗಳನ್ನು ನಾವು ಖಂಡಿತ ಸಹಿಸಿಕೊಳ್ಳುತ್ತೇವೆ. ಭರವಸೆಯಿಡುವವರು ಅಲ್ಲಾಹನಲ್ಲಿಯೇ ಭರವಸೆಯಿಡಲಿ.” info
التفاسير:

external-link copy
13 : 14

وَقَالَ الَّذِیْنَ كَفَرُوْا لِرُسُلِهِمْ لَنُخْرِجَنَّكُمْ مِّنْ اَرْضِنَاۤ اَوْ لَتَعُوْدُنَّ فِیْ مِلَّتِنَا ؕ— فَاَوْحٰۤی اِلَیْهِمْ رَبُّهُمْ لَنُهْلِكَنَّ الظّٰلِمِیْنَ ۟ۙ

ಸತ್ಯನಿಷೇಧಿಗಳು ಅವರ ಸಂದೇಶವಾಹಕರುಗಳೊಡನೆ ಹೇಳಿದರು: “ನಾವು ನಿಮ್ಮನ್ನು ನಮ್ಮ ಊರಿನಿಂದ ಖಂಡಿತ ಓಡಿಸುತ್ತೇವೆ. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಲೇಬೇಕು. ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ದೇವವಾಣಿಯನ್ನು ನೀಡಿದನು: “ಆ ಅಕ್ರಮಿಗಳನ್ನು ನಾವು ಖಂಡಿತ ಸರ್ವನಾಶ ಮಾಡುತ್ತೇವೆ. info
التفاسير:

external-link copy
14 : 14

وَلَنُسْكِنَنَّكُمُ الْاَرْضَ مِنْ بَعْدِهِمْ ؕ— ذٰلِكَ لِمَنْ خَافَ مَقَامِیْ وَخَافَ وَعِیْدِ ۟

ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ವಾಸ ಮಾಡಿಸುತ್ತೇವೆ. ಇದು ನನ್ನ ಮುಂದೆ ನಿಲ್ಲುವುದನ್ನು ಭಯಪಡುವವರಿಗೆ ಮತ್ತು ನನ್ನ ಎಚ್ಚರಿಕೆಗಳನ್ನು ಭಯಪಡುವವರಿಗಾಗಿದೆ.” info
التفاسير:

external-link copy
15 : 14

وَاسْتَفْتَحُوْا وَخَابَ كُلُّ جَبَّارٍ عَنِیْدٍ ۟ۙ

ಅವರು (ಪ್ರವಾದಿಗಳು) ತೀರ್ಪು ನೀಡಬೇಕೆಂದು ಅಂಗಲಾಚಿದರು. ಪ್ರತಿಯೊಬ್ಬ ಹಠಮಾರಿ ಪೀಡಕನು ನೆಲಕಚ್ಚಿದನು. info
التفاسير:

external-link copy
16 : 14

مِّنْ وَّرَآىِٕهٖ جَهَنَّمُ وَیُسْقٰی مِنْ مَّآءٍ صَدِیْدٍ ۟ۙ

ನರಕಾಗ್ನಿ ಅವನ ಮುಂಭಾಗದಲ್ಲೇ ಇದೆ. ಅವನಿಗೆ ಕೀವು ತುಂಬಿದ ನೀರನ್ನು ಕುಡಿಸಲಾಗುವುದು. info
التفاسير:

external-link copy
17 : 14

یَّتَجَرَّعُهٗ وَلَا یَكَادُ یُسِیْغُهٗ وَیَاْتِیْهِ الْمَوْتُ مِنْ كُلِّ مَكَانٍ وَّمَا هُوَ بِمَیِّتٍ ؕ— وَمِنْ وَّرَآىِٕهٖ عَذَابٌ غَلِیْظٌ ۟

ಅವನು ಅದನ್ನು ಅತೀವ ತ್ರಾಸದಿಂದ ಗುಟುಕರಿಸುವನು. ಆದರೂ ಅದನ್ನು ಗಂಟಲ ಕೆಳಗಿಳಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಸಾವು ಎಲ್ಲಾ ಕಡೆಗಳಿಂದಲೂ ಅವನ ಬಳಿಗೆ ಬರುವುದು. ಆದರೂ ಅವನು ಸಾಯುವುದಿಲ್ಲ. ಅವನಿಗೆ ಅದರ ಹಿಂದೆಯೇ ಅತಿಕಠೋರ ಶಿಕ್ಷೆಯೂ ಇದೆ. info
التفاسير:

external-link copy
18 : 14

مَثَلُ الَّذِیْنَ كَفَرُوْا بِرَبِّهِمْ اَعْمَالُهُمْ كَرَمَادِ ١شْتَدَّتْ بِهِ الرِّیْحُ فِیْ یَوْمٍ عَاصِفٍ ؕ— لَا یَقْدِرُوْنَ مِمَّا كَسَبُوْا عَلٰی شَیْءٍ ؕ— ذٰلِكَ هُوَ الضَّلٰلُ الْبَعِیْدُ ۟

ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು ಯಾರೋ—ಅವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಬಿರುಗಾಳಿಯ ದಿನ ಅದಕ್ಕೆ ಬಲವಾದ ಗಾಳಿ ಬೀಸಿತು. ಅವರು ಮಾಡಿದ ಕರ್ಮಗಳಲ್ಲಿ ಯಾವುದರ ಮೇಲೂ (ಅದನ್ನು ಹಿಡಿದಿಟ್ಟುಕೊಳ್ಳಲು) ಅವರಿಗೆ ಸಾಮರ್ಥ್ಯವಿಲ್ಲ. ಅತಿವಿದೂರವಾದ ದುರ್ಮಾರ್ಗವೆಂದರೆ ಇದೇ.[1] info

[1] ಬಿರುಗಾಳಿ ಬೀಸಿದರೆ ಬೂದಿಯ ಸ್ಥಿತಿ ಏನಾಗುವುದೋ ಪರಲೋಕಕ್ಕೆ ಬರುವಾಗ ಸತ್ಯನಿಷೇಧಿಗಳ ಕರ್ಮಗಳು ಸ್ಥಿತಿಯೂ ಆದೇ ಆಗುತ್ತದೆ. ಅವರು ಮಾಡಿದ ಯಾವುದೇ ಸತ್ಕರ್ಮಕ್ಕೂ ಅಲ್ಲಿ ಪ್ರತಿಫಲವಿಲ್ಲ. ಎಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುತ್ತವೆ.

التفاسير: