የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

የገፅ ቁጥር:close

external-link copy
9 : 6

وَلَوْ جَعَلْنٰهُ مَلَكًا لَّجَعَلْنٰهُ رَجُلًا وَّلَلَبَسْنَا عَلَیْهِمْ مَّا یَلْبِسُوْنَ ۟

ಇನ್ನು ನಾವು ದೇವಚರರÀನ್ನು ಇಳಿಸುತ್ತಿದ್ದರೂ ಮನುಷ್ಯನನ್ನಾಗಿಯೇ ರೂಪಿಸುತ್ತಿದ್ದೆವು ಮತ್ತು ಈಗವರು ಸಿಲುಕಿರುವಂತಹ ಗೊಂದಲದಲ್ಲಿ ಆಗಲೂ ನಾವು ಅವರನ್ನು ಸಿಲುಕಿಸುತ್ತಿದ್ದೆವು. info
التفاسير:

external-link copy
10 : 6

وَلَقَدِ اسْتُهْزِئَ بِرُسُلٍ مِّنْ قَبْلِكَ فَحَاقَ بِالَّذِیْنَ سَخِرُوْا مِنْهُمْ مَّا كَانُوْا بِهٖ یَسْتَهْزِءُوْنَ ۟۠

ಓ ಪೈಗಂಬರರೇ ವಾಸ್ತವದಲ್ಲಿ ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿದ್ದರು. ನಂತರ ಅವರನ್ನು ಗೇಲಿ ಮಾಡುತ್ತಿದ್ದವರಿಗೆ ಅವರು ಅಪಹಾಸ್ಯ ಮಾಡುತ್ತಿದ್ದಂತಹ ಶಿಕ್ಷೆಯು ಆವರಿಸಿಬಿಟ್ಟಿತು. info
التفاسير:

external-link copy
11 : 6

قُلْ سِیْرُوْا فِی الْاَرْضِ ثُمَّ اَنْظُرُوْا كَیْفَ كَانَ عَاقِبَةُ الْمُكَذِّبِیْنَ ۟

ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿರಿ. ಅನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ. info
التفاسير:

external-link copy
12 : 6

قُلْ لِّمَنْ مَّا فِی السَّمٰوٰتِ وَالْاَرْضِ ؕ— قُلْ لِّلّٰهِ ؕ— كَتَبَ عَلٰی نَفْسِهِ الرَّحْمَةَ ؕ— لَیَجْمَعَنَّكُمْ اِلٰی یَوْمِ الْقِیٰمَةِ لَا رَیْبَ فِیْهِ ؕ— اَلَّذِیْنَ خَسِرُوْۤا اَنْفُسَهُمْ فَهُمْ لَا یُؤْمِنُوْنَ ۟

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಯಾರದ್ದೆಂದು ಕೇಳಿರಿ. ನೀವು ಹೇಳಿರಿ: ಎಲ್ಲವೂ ಅಲ್ಲಾಹನದ್ದಾಗಿದೆ. ಅವನು ಸ್ವತಃ ತನ್ನ (ಸೃಷ್ಟಿಗಳ) ಮೇಲೆ ಕಾರುಣ್ಯ ತೋರುವುದನ್ನು ಕಡ್ಡಾಯವಾಗಿಸಿದ್ದಾನೆ. ಪುನರುತ್ಥಾನದ ದಿನ ಅವನು ನಿಮ್ಮನ್ನು ಖಂಡಿತವಾಗಿಯು ಒಟ್ಟುಗೂಡಿಸುವನು. ಇದರಲ್ಲಿ ಯಾವುದೇ ಸಂದೇಹವಿಲ್ಲ. ಯಾರು ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದ್ದಾರೋ ಅವರು ಸತ್ಯವಿಶ್ವಾಸವಿಡಲಾರರು. info
التفاسير:

external-link copy
13 : 6

وَلَهٗ مَا سَكَنَ فِی الَّیْلِ وَالنَّهَارِ ؕ— وَهُوَ السَّمِیْعُ الْعَلِیْمُ ۟

ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ. info
التفاسير:

external-link copy
14 : 6

قُلْ اَغَیْرَ اللّٰهِ اَتَّخِذُ وَلِیًّا فَاطِرِ السَّمٰوٰتِ وَالْاَرْضِ وَهُوَ یُطْعِمُ وَلَا یُطْعَمُ ؕ— قُلْ اِنِّیْۤ اُمِرْتُ اَنْ اَكُوْنَ اَوَّلَ مَنْ اَسْلَمَ وَلَا تَكُوْنَنَّ مِنَ الْمُشْرِكِیْنَ ۟

ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ. info
التفاسير:

external-link copy
15 : 6

قُلْ اِنِّیْۤ اَخَافُ اِنْ عَصَیْتُ رَبِّیْ عَذَابَ یَوْمٍ عَظِیْمٍ ۟

ಹೇಳಿರಿ: ನಾನು ನನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರೆ ಒಂದು ಭಯಾನಕ ದಿನದ ಶಿಕ್ಷೆಯಿಂದ ಭಯಪಡುತ್ತೇನೆ. info
التفاسير:

external-link copy
16 : 6

مَنْ یُّصْرَفْ عَنْهُ یَوْمَىِٕذٍ فَقَدْ رَحِمَهٗ ؕ— وَذٰلِكَ الْفَوْزُ الْمُبِیْنُ ۟

ಆ ದಿನ ಯಾರನ್ನು ಆ ಶಿಕ್ಷೆಯಿಂದ ಪಾರುಗೊಳಿಸಲಾಗುವುದೋ ಅಲ್ಲಾಹನು ಅವನ ಮೇಲೆ ಮಹಾ ಕರುಣೆಯನ್ನು ತೋರಿಸಿದನು. ಮತ್ತು ಇದು ಸ್ಪಷ್ಟ ಯಶಸ್ಸಾಗಿದೆ. info
التفاسير:

external-link copy
17 : 6

وَاِنْ یَّمْسَسْكَ اللّٰهُ بِضُرٍّ فَلَا كَاشِفَ لَهٗۤ اِلَّا هُوَ ؕ— وَاِنْ یَّمْسَسْكَ بِخَیْرٍ فَهُوَ عَلٰی كُلِّ شَیْءٍ قَدِیْرٌ ۟

ಪೈಗಂಬರರೇ ನಿಮಗೆ ಅಲ್ಲಾಹನು ಯಾವುದಾದರೂ ಹಾನಿಯನ್ನುಂಟು ಮಾಡಿದರೆ ಅದನ್ನು ನೀಗಿಸಲು ಅವನ ಹೊರತು ಬೇರಾರೂ ಇಲ್ಲ ಮತ್ತು ಅಲ್ಲಾಹನು ನಿಮಗೆ ಯಾವುದಾದರೂ ಒಳಿತನ್ನುಂಟು ಮಾಡುವುದಾದರೆ ಅವನು ಸಕಲ ಕಾರ್ಯಗಳ ಮೇಲೂ ಸಂಪೂರ್ಣ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
18 : 6

وَهُوَ الْقَاهِرُ فَوْقَ عِبَادِهٖ ؕ— وَهُوَ الْحَكِیْمُ الْخَبِیْرُ ۟

ಮತ್ತು ಅವನು ತನ್ನ ದಾಸರ ಮೇಲೆ ಪ್ರಾಬಲ್ಯವುಳ್ಳವನೂ, ಉನ್ನತನೂ ಆಗಿದ್ದಾನೆ ಮತ್ತು ಅವನು ಯುಕ್ತಿವಂತನೂ, ಸಂಪೂರ್ಣ ಅರಿವುಳ್ಳವನೂ ಆಗಿದ್ದಾನೆ. info
التفاسير: