የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

የገፅ ቁጥር:close

external-link copy
125 : 6

فَمَنْ یُّرِدِ اللّٰهُ اَنْ یَّهْدِیَهٗ یَشْرَحْ صَدْرَهٗ لِلْاِسْلَامِ ۚ— وَمَنْ یُّرِدْ اَنْ یُّضِلَّهٗ یَجْعَلْ صَدْرَهٗ ضَیِّقًا حَرَجًا كَاَنَّمَا یَصَّعَّدُ فِی السَّمَآءِ ؕ— كَذٰلِكَ یَجْعَلُ اللّٰهُ الرِّجْسَ عَلَی الَّذِیْنَ لَا یُؤْمِنُوْنَ ۟

ಆದರೆ ಯಾರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಅಲ್ಲಾಹನು ಇಚ್ಛಿಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ವಿಶಾಲಗೊಳಿಸುವನು. ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸಲು ಇಚ್ಛಿಸುತ್ತಾನೋ ಅವನ ಹೃದಯವನ್ನು ಇಕ್ಕಟ್ಟುಗೊಳಿಸುತ್ತಾನೆ. ಒಬ್ಬನನ್ನು ಬಲವಂತವಾಗಿ ಆಕಾಶದಲ್ಲಿ ಏರಿ ಹೋಗಲು ವಿವಷಗೊಳಿಸಲಾಗಿರುವಂತೆ. ಇದೇ ರೀತಿ ಅಲ್ಲಾಹನು ವಿಶ್ವಾಸವಿಡದವರ ಮೇಲೆ ಅಶುದ್ಧತೆಯನ್ನು ಹೇರಿ ಬಿಡುತ್ತಾನೆ. info
التفاسير:

external-link copy
126 : 6

وَهٰذَا صِرَاطُ رَبِّكَ مُسْتَقِیْمًا ؕ— قَدْ فَصَّلْنَا الْاٰیٰتِ لِقَوْمٍ یَّذَّكَّرُوْنَ ۟

ಇದು ನಿಮ್ಮ ಪ್ರಭುವಿನ ನೇರ ಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ. info
التفاسير:

external-link copy
127 : 6

لَهُمْ دَارُ السَّلٰمِ عِنْدَ رَبِّهِمْ وَهُوَ وَلِیُّهُمْ بِمَا كَانُوْا یَعْمَلُوْنَ ۟

ಅವರಿಗೆ ಅವರ ಪ್ರಭುವಿನ ಬಳಿ ಶಾಂತಿ ಧಾಮವಿದೆ. ಅವರು ಮಾಡುತ್ತಿದ್ದ ಸತ್ಕರ್ಮಗಳ ನಿಮಿತ್ತ ಅವನು ಅವರ ಮಿತ್ರನಾಗಿದ್ದಾನೆ. info
التفاسير:

external-link copy
128 : 6

وَیَوْمَ یَحْشُرُهُمْ جَمِیْعًا ۚ— یٰمَعْشَرَ الْجِنِّ قَدِ اسْتَكْثَرْتُمْ مِّنَ الْاِنْسِ ۚ— وَقَالَ اَوْلِیٰٓؤُهُمْ مِّنَ الْاِنْسِ رَبَّنَا اسْتَمْتَعَ بَعْضُنَا بِبَعْضٍ وَّبَلَغْنَاۤ اَجَلَنَا الَّذِیْۤ اَجَّلْتَ لَنَا ؕ— قَالَ النَّارُ مَثْوٰىكُمْ خٰلِدِیْنَ فِیْهَاۤ اِلَّا مَا شَآءَ اللّٰهُ ؕ— اِنَّ رَبَّكَ حَكِیْمٌ عَلِیْمٌ ۟

ಮತ್ತು ಅವರೆಲ್ಲರನ್ನು ಅಲ್ಲಾಹನು ಒಟ್ಟುಗೂಡಿಸುವ ದಿನ (ಹೇಳುವನು): ಓ ದುಷ್ಟ ಯಕ್ಷ ಸಮೂಹವೇ, ಮನುಷ್ಯರ ಪೈಕಿ ಅನೇಕ ಜನರನ್ನು ನೀವು ಪಥಭ್ರಷ್ಟಗೊಳಿಸಿ ನಿಮ್ಮ ಅನುಯಾಯಿಗಳನ್ನಾಗಿ ಮಾಡಿಕೊಂಡಿರುವಿರಿ. ಮನುಷ್ಯರ ಪೈಕಿ ಅವರ ಮಿತ್ರರಾಗಿದ್ದವರು ಹೇಳುವರು: ನಮ್ಮ ಪ್ರಭು, ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನವನ್ನು ಪಡೆದಿದ್ದಾರೆ. ನೀನು ನಮಗೆ ನಿಶ್ಚಯಿಸಿದ ಅವಧಿಯನ್ನು ನಾವು ತಲುಪಿದ್ದೇವೆ. ಆಗ ಅವನು ಹೇಳುವನು: ನಿಮ್ಮೆಲ್ಲರ ವಾಸಸ್ಥಳವು ನರಕವಾಗಿದೆ; ಅದರಲ್ಲಿ ನೀವು ಶಾಶ್ವತವಾಗಿರುವಿರಿ. ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು ನಿಸ್ಸಂಶಯವಾಗಿಯು ನಿಮ್ಮ ಪ್ರಭು ಮಹಾ ಯುಕ್ತಿವಂತನೂ, ಸರ್ವಜ್ಞನೂ ಆಗಿದ್ದಾನೆ. info
التفاسير:

external-link copy
129 : 6

وَكَذٰلِكَ نُوَلِّیْ بَعْضَ الظّٰلِمِیْنَ بَعْضًا بِمَا كَانُوْا یَكْسِبُوْنَ ۟۠

ಇದೇ ರೀತಿ ದುಷ್ಕರ್ಮಿಗಳ ಕರ್ಮಗಳ ನಿಮಿತ್ತ ನಾವು ಅವರ ಪೈಕಿ ಕೆಲವರನ್ನು ಕೆಲವರ ಆಪ್ತರನ್ನಾಗಿ ಮಾಡುವೆವು. info
التفاسير:

external-link copy
130 : 6

یٰمَعْشَرَ الْجِنِّ وَالْاِنْسِ اَلَمْ یَاْتِكُمْ رُسُلٌ مِّنْكُمْ یَقُصُّوْنَ عَلَیْكُمْ اٰیٰتِیْ وَیُنْذِرُوْنَكُمْ لِقَآءَ یَوْمِكُمْ هٰذَا ؕ— قَالُوْا شَهِدْنَا عَلٰۤی اَنْفُسِنَا وَغَرَّتْهُمُ الْحَیٰوةُ الدُّنْیَا وَشَهِدُوْا عَلٰۤی اَنْفُسِهِمْ اَنَّهُمْ كَانُوْا كٰفِرِیْنَ ۟

ಓ ಯಕ್ಷ ಮತ್ತು ಮನುಷ್ಯ ಸಮೂಹವೇ, ನಿಮಗೆ ನನ್ನ ನಿಯಮ ಶಾಸನಗಳನ್ನು ವಿವರಿಸಿ ಕೊಡುವ ಮತ್ತು ನಿಮ್ಮ ಈ ದಿನದ ಬೇಟೆಯ ಎಚ್ಚರಿಕೆ ನೀಡುವಂತಹ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರಲಿಲ್ಲವೇ? ಅವರು ಹೇಳುವರು: ನಾವು ನಮ್ಮ ವಿರುದ್ಧವೇ ಸಾಕ್ಷಿಯಾಗಿದ್ದೇವೆ ಮತ್ತು ಐಹಿಕ ಜೀವನವು ಅವರನ್ನು ಮರಳುಗೊಳಿಸಿತು. ಅವರು ತಾವು ಸತ್ಯನಿಷೇಧಿ ಗಳಾಗಿದ್ದೇವೆಂದು ಸ್ವತಃ ತಮ್ಮ ವಿರುದ್ಧವೇ ಸಾಕ್ಷö್ಯವಹಿಸುವರು. info
التفاسير: