[1] ಅಲ್ಲಾಹನ ಹೊರತು ಬೇರೆ ಸೃಷ್ಟಿಕರ್ತರು ಇರುತ್ತಿದ್ದರೆ ಪ್ರತಿಯೊಬ್ಬ ಸೃಷ್ಟಿಕರ್ತನೂ ತಾನು ಸೃಷ್ಟಿಸಿದ್ದನ್ನು ತಾನೇ ನಿಯಂತ್ರಿಸುತ್ತಿದ್ದನು. ಅಷ್ಟೇ ಅಲ್ಲ, ಅವರು ಪರಸ್ಪರ ಮೇಲುಗೈ ಸಾಧಿಸಲು ಹೊಡೆದಾಡುತ್ತಿದ್ದರು. ಇದರಿಂದ ಸಂಪೂರ್ಣ ವಿಶ್ವದ ವ್ಯವಸ್ಥೆಯು ಕುಸಿಯುತ್ತಿತ್ತು.
[1] ಒಮ್ಮೆ ಪರಲೋಕವನ್ನು ಪ್ರವೇಶಿಸಿದರೆ ನಂತರ ಪುನಃ ಭೂಮಿಗೆ ಬರಲು ಯಾರಿಗೂ ಅವಕಾಶವಿಲ್ಲ.
[1] ನರಕದ ಬೆಂಕಿಯು ಅವರ ಮುಖವನ್ನು ಸುಟ್ಟು ಬಿಡುತ್ತದೆ. ಇದರಿಂದ ಅವರ ತುಟಿಗಳು ಬೆಂಕಿಗೆ ಆಹುತಿಯಾಗಿ, ತುಟಿಗಳಿಲ್ಲದ ಕಾರಣ ಅವರ ಹಲ್ಲುಗಳು ವಿಕಾರವಾಗಿ ಕಿರಿಯುವಂತೆ ಕಾಣುವುದು.