Bản dịch ý nghĩa nội dung Qur'an - 卡纳达语翻译:哈姆宰·巴特尔

external-link copy
73 : 22

یٰۤاَیُّهَا النَّاسُ ضُرِبَ مَثَلٌ فَاسْتَمِعُوْا لَهٗ ؕ— اِنَّ الَّذِیْنَ تَدْعُوْنَ مِنْ دُوْنِ اللّٰهِ لَنْ یَّخْلُقُوْا ذُبَابًا وَّلَوِ اجْتَمَعُوْا لَهٗ ؕ— وَاِنْ یَّسْلُبْهُمُ الذُّبَابُ شَیْـًٔا لَّا یَسْتَنْقِذُوْهُ مِنْهُ ؕ— ضَعُفَ الطَّالِبُ وَالْمَطْلُوْبُ ۟

ಓ ಮನುಷ್ಯರೇ! ನಿಮಗೆ ಒಂದು ಉದಾಹರಣೆಯನ್ನು ನೀಡಲಾಗುತ್ತಿದೆ. ಅದನ್ನು ಕಿವಿಗೊಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದೀರೋ ಅವರಿಗೆ ಒಂದು ನೊಣವನ್ನು ಕೂಡ ಸೃಷ್ಟಿಸುವ ಶಕ್ತಿಯಿಲ್ಲ. ಅದಕ್ಕಾಗಿ ಅವರೆಲ್ಲರೂ ಒಟ್ಟುಗೂಡಿದರೂ ಸಹ! ನೊಣವು ಅವರಿಂದ ಏನಾದರೂ ಕಸಿದುಕೊಂಡರೆ, ಅದನ್ನು ಆ ನೊಣದಿಂದ ವಾಪಸು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಪ್ರಾರ್ಥಿಸುವವನು ಎಷ್ಟು ಬಲಹೀನನು! ಪ್ರಾರ್ಥಿಸಲಾಗುವವನು ಕೂಡ ಎಷ್ಟು ಬಲಹೀನನು! info
التفاسير: