Bản dịch ý nghĩa nội dung Qur'an - 卡纳达语翻译:哈姆宰·巴特尔

Số trang:close

external-link copy
80 : 16

وَاللّٰهُ جَعَلَ لَكُمْ مِّنْ بُیُوْتِكُمْ سَكَنًا وَّجَعَلَ لَكُمْ مِّنْ جُلُوْدِ الْاَنْعَامِ بُیُوْتًا تَسْتَخِفُّوْنَهَا یَوْمَ ظَعْنِكُمْ وَیَوْمَ اِقَامَتِكُمْ ۙ— وَمِنْ اَصْوَافِهَا وَاَوْبَارِهَا وَاَشْعَارِهَاۤ اَثَاثًا وَّمَتَاعًا اِلٰی حِیْنٍ ۟

ಅಲ್ಲಾಹು ನಿಮಗೆ ನಿಮ್ಮ ಮನೆಗಳಲ್ಲಿ ವಿಶ್ರಾಂತಿಯ ಸ್ಥಳವನ್ನು ಮಾಡಿಕೊಟ್ಟಿದ್ದಾನೆ. ಜಾನುವಾರುಗಳ ತೊಗಲುಗಳಿಂದಲೂ ಅವನು ನಿಮಗೆ ಮನೆಗಳನ್ನು (ಡೇರೆಗಳನ್ನು) ಮಾಡಿಕೊಟ್ಟಿದ್ದಾನೆ. ನೀವು ಪ್ರಯಾಣ ಮಾಡುವ ದಿನಗಳಲ್ಲೂ ಮತ್ತು ಬಿಡಾರ ಹೂಡುವ ದಿನಗಳಲ್ಲೂ ಅವುಗಳನ್ನು ಅನಾಯಾಸವಾಗಿ ಒಯ್ಯುತ್ತೀರಿ. ಅವುಗಳ ಉಣ್ಣೆ, ತುಪ್ಪಳ ಮತ್ತು ಕೇಶಗಳಿಂದ ನೀವು ನಿಗದಿತ ಕಾಲದವರೆಗೆ ಉಪಯೋಗಗಳನ್ನು ಮತ್ತು ಆನಂದವನ್ನು ಪಡೆಯುತ್ತೀರಿ. info
التفاسير:

external-link copy
81 : 16

وَاللّٰهُ جَعَلَ لَكُمْ مِّمَّا خَلَقَ ظِلٰلًا وَّجَعَلَ لَكُمْ مِّنَ الْجِبَالِ اَكْنَانًا وَّجَعَلَ لَكُمْ سَرَابِیْلَ تَقِیْكُمُ الْحَرَّ وَسَرَابِیْلَ تَقِیْكُمْ بَاْسَكُمْ ؕ— كَذٰلِكَ یُتِمُّ نِعْمَتَهٗ عَلَیْكُمْ لَعَلَّكُمْ تُسْلِمُوْنَ ۟

ಅಲ್ಲಾಹು ನಿಮಗೆ ಅವನು ಸೃಷ್ಟಿಸಿದ ವಸ್ತುಗಳಿಂದ ನೆರಳನ್ನು ಮಾಡಿಕೊಟ್ಟಿದ್ದಾನೆ. ಪರ್ವತಗಳಲ್ಲಿ ನಿಮಗೆ ಆಶ್ರಯದಾಣಗಳನ್ನು (ಗುಹೆಗಳನ್ನು) ಮಾಡಿಕೊಟ್ಟಿದ್ದಾನೆ. ನಿಮ್ಮನ್ನು ಸೆಕೆಯಿಂದ ರಕ್ಷಿಸುವ ಅಂಗಿಗಳನ್ನು ಮತ್ತು ಯುದ್ಧದಲ್ಲಿ (ವೈರಿಯಿಂದ) ರಕ್ಷಿಸುವ ಅಂಗಿಗಳನ್ನು ಮಾಡಿಕೊಟ್ಟಿದ್ದಾನೆ. ಈ ರೀತಿ ಅವನು ನಿಮಗೆ ತನ್ನ ಎಲ್ಲಾ ಅನುಗ್ರಹವನ್ನು ಪೂರ್ಣವಾಗಿ ಕರುಣಿಸುತ್ತಿದ್ದಾನೆ. ನೀವು ಅವನಿಗೆ ಶರಣಾಗುವುದಕ್ಕಾಗಿ. info
التفاسير:

external-link copy
82 : 16

فَاِنْ تَوَلَّوْا فَاِنَّمَا عَلَیْكَ الْبَلٰغُ الْمُبِیْنُ ۟

(ಪ್ರವಾದಿಯವರೇ) ಅವರೇನಾದರೂ ವಿಮುಖರಾದರೆ—ನಿಮ್ಮ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರ. info
التفاسير:

external-link copy
83 : 16

یَعْرِفُوْنَ نِعْمَتَ اللّٰهِ ثُمَّ یُنْكِرُوْنَهَا وَاَكْثَرُهُمُ الْكٰفِرُوْنَ ۟۠

ಅವರು ಅಲ್ಲಾಹನ ಅನುಗ್ರಹಗಳನ್ನು ಗುರುತಿಸಿದ ಬಳಿಕವೂ ಅವುಗಳನ್ನು ನಿಷೇಧಿಸುತ್ತಾರೆ. ಅವರಲ್ಲಿ ಹೆಚ್ಚಿನವರೂ ಕೃತಘ್ನರಾಗಿದ್ದಾರೆ. info
التفاسير:

external-link copy
84 : 16

وَیَوْمَ نَبْعَثُ مِنْ كُلِّ اُمَّةٍ شَهِیْدًا ثُمَّ لَا یُؤْذَنُ لِلَّذِیْنَ كَفَرُوْا وَلَا هُمْ یُسْتَعْتَبُوْنَ ۟

ನಾವು ಎಲ್ಲಾ ಸಮುದಾಯಗಳಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು ಎಬ್ಬಿಸುವ ದಿನ. ನಂತರ ಸತ್ಯನಿಷೇಧಿಗಳಿಗೆ (ನೆಪ ಹೇಳಿ ತಪ್ಪಿಸಿಕೊಳ್ಳಲು) ಅನುಮತಿ ನೀಡಲಾಗುವುದಿಲ್ಲ. ಅವರಿಗೆ ಪಶ್ಚಾತ್ತಾಪಪಡಲು ಕೂಡ ಅವಕಾಶ ನೀಡಲಾಗುವುದಿಲ್ಲ. info
التفاسير:

external-link copy
85 : 16

وَاِذَا رَاَ الَّذِیْنَ ظَلَمُوا الْعَذَابَ فَلَا یُخَفَّفُ عَنْهُمْ وَلَا هُمْ یُنْظَرُوْنَ ۟

ಅಕ್ರಮಿಗಳು ಶಿಕ್ಷೆಯನ್ನು ನೋಡುವಾಗ—ಅವರಿಗೆ ಅದರಲ್ಲಿ ರಿಯಾಯಿತಿ ನೀಡುವ ಅಥವಾ ಅವರಿಗೆ ಕಾಲಾವಕಾಶ ನೀಡುವ ವಿಷಯವೇ ಇಲ್ಲ. info
التفاسير:

external-link copy
86 : 16

وَاِذَا رَاَ الَّذِیْنَ اَشْرَكُوْا شُرَكَآءَهُمْ قَالُوْا رَبَّنَا هٰۤؤُلَآءِ شُرَكَآؤُنَا الَّذِیْنَ كُنَّا نَدْعُوْا مِنْ دُوْنِكَ ۚ— فَاَلْقَوْا اِلَیْهِمُ الْقَوْلَ اِنَّكُمْ لَكٰذِبُوْنَ ۟ۚ

ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದವರು (ಪರಲೋಕದಲ್ಲಿ) ತಾವು ಸಹಭಾಗಿಗಳನ್ನಾಗಿ ಮಾಡಿದವರನ್ನು ಕಂಡಾಗ ಹೇಳುವರು: “ನಮ್ಮ ಪರಿಪಾಲಕನೇ! ನಾವು ನಿನ್ನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದ ಸಹಭಾಗಿಗಳು ಇವರೇ.” ಆಗ ಅವರು ಉತ್ತರಿಸುವರು: “ನೀವು ಖಂಡಿತ ಸುಳ್ಳು ಹೇಳುತ್ತಿದ್ದೀರಿ.” info
التفاسير:

external-link copy
87 : 16

وَاَلْقَوْا اِلَی اللّٰهِ یَوْمَىِٕذِ ١لسَّلَمَ وَضَلَّ عَنْهُمْ مَّا كَانُوْا یَفْتَرُوْنَ ۟

ಅಂದು ಅವರೆಲ್ಲರೂ ಅಲ್ಲಾಹನ ಮುಂದೆ ಸಂಪೂರ್ಣ ಶರಣಾಗತಿಯನ್ನು ಪ್ರಕಟಿಸುವರು. ಅವರು ಸುಳ್ಳು ಸುಳ್ಳಾಗಿ ಆರೋಪಿಸಿದ್ದೆಲ್ಲವೂ ಅವರಿಂದ ಮರೆಯಾಗುವುವು. info
التفاسير: