Қуръони Карим маъноларининг таржимаси - Каннада тили таржимаси - Ҳамза Бетур

Бет рақами:close

external-link copy
27 : 4

وَاللّٰهُ یُرِیْدُ اَنْ یَّتُوْبَ عَلَیْكُمْ ۫— وَیُرِیْدُ الَّذِیْنَ یَتَّبِعُوْنَ الشَّهَوٰتِ اَنْ تَمِیْلُوْا مَیْلًا عَظِیْمًا ۟

ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಬಯಸುತ್ತಾನೆ. ಆದರೆ ಸ್ವೇಚ್ಛೆಗಳನ್ನು ಹಿಂಬಾಲಿಸುವವರು ನೀವು ಅತಿದೊಡ್ಡ ದುರ್ಮಾರ್ಗದಲ್ಲಿ ತಪ್ಪಿಹೋಗಬೇಕೆಂದು ಬಯಸುತ್ತಾರೆ. info
التفاسير:

external-link copy
28 : 4

یُرِیْدُ اللّٰهُ اَنْ یُّخَفِّفَ عَنْكُمْ ۚ— وَخُلِقَ الْاِنْسَانُ ضَعِیْفًا ۟

ಅಲ್ಲಾಹು ನಿಮಗೆ ರಿಯಾಯಿತಿ ನೀಡಲು ಬಯಸುತ್ತಾನೆ. (ಏಕೆಂದರೆ) ಮನುಷ್ಯನನ್ನು ದುರ್ಬಲನಾಗಿ ಸೃಷ್ಟಿಸಲಾಗಿದೆ. info
التفاسير:

external-link copy
29 : 4

یٰۤاَیُّهَا الَّذِیْنَ اٰمَنُوْا لَا تَاْكُلُوْۤا اَمْوَالَكُمْ بَیْنَكُمْ بِالْبَاطِلِ اِلَّاۤ اَنْ تَكُوْنَ تِجَارَةً عَنْ تَرَاضٍ مِّنْكُمْ ۫— وَلَا تَقْتُلُوْۤا اَنْفُسَكُمْ ؕ— اِنَّ اللّٰهَ كَانَ بِكُمْ رَحِیْمًا ۟

ಓ ಸತ್ಯವಿಶ್ವಾಸಿಗಳೇ! ನೀವು ಒಬ್ಬರು ಇನ್ನೊಬ್ಬರ ಧನವನ್ನು ಅನ್ಯಾಯವಾಗಿ ತಿನ್ನಬೇಡಿ. ಪರಸ್ಪರ ಸಂತೃಪ್ತಿಯಿಂದ ನಡೆಸುವ ವ್ಯವಹಾರದ ಹೊರತು. ನೀವು ನಿಮ್ಮನ್ನೇ ಕೊಲ್ಲಬೇಡಿ.[1] ನಿಶ್ಚಯವಾಗಿಯೂ ಅಲ್ಲಾಹು ನಿಮ್ಮೊಡನೆ ಅತ್ಯಂತ ದಯೆಯುಳ್ಳವನಾಗಿದ್ದಾನೆ. info

[1] ಮುಸ್ಲಿಂ ಸಮುದಾಯವು ಒಂದು ದೇಹದಂತೆ. ಅದರ ಒಬ್ಬ ಸದಸ್ಯನನ್ನು ಕೊಲ್ಲುವುದು ಸಮುದಾಯವನ್ನು ಕೊಲೆ ಮಾಡುವುದಕ್ಕೆ ಸಮಾನ. ನೀವೇ ನಿಮ್ಮನ್ನು ಕೊಲ್ಲಬೇಡಿ ಎಂದು ಹೇಳಿರುವುದು ಈ ಅರ್ಥದಲ್ಲಾಗಿರಬಹುದು. ಇಲ್ಲಿ ಹೇಳಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಎಂದು ಕೆಲವರು ಹೇಳಿದ್ದಾರೆ.

التفاسير:

external-link copy
30 : 4

وَمَنْ یَّفْعَلْ ذٰلِكَ عُدْوَانًا وَّظُلْمًا فَسَوْفَ نُصْلِیْهِ نَارًا ؕ— وَكَانَ ذٰلِكَ عَلَی اللّٰهِ یَسِیْرًا ۟

ಯಾರು ಅತಿರೇಕ ಮತ್ತು ಅನ್ಯಾಯದಿಂದ ಅದನ್ನು ಮಾಡುತ್ತಾನೋ—ಅವನನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು. ಅದು ಅಲ್ಲಾಹನಿಗೆ ಅತಿ ಸುಲಭವಾಗಿದೆ. info
التفاسير:

external-link copy
31 : 4

اِنْ تَجْتَنِبُوْا كَبَآىِٕرَ مَا تُنْهَوْنَ عَنْهُ نُكَفِّرْ عَنْكُمْ سَیِّاٰتِكُمْ وَنُدْخِلْكُمْ مُّدْخَلًا كَرِیْمًا ۟

ನಿಮಗೆ ವಿರೋಧಿಸಲಾದ ಮಹಾಪಾಪಗಳಿಂದ ನೀವು ದೂರವಾದರೆ, ನಿಮ್ಮ ಸಣ್ಣ-ಪುಟ್ಟ ತಪ್ಪುಗಳನ್ನು ನಾವು ಅಳಿಸುತ್ತೇವೆ; ಮತ್ತು ಗೌರವಾನ್ವಿತ ಸ್ಥಾನಕ್ಕೆ ನಿಮ್ಮನ್ನು ಪ್ರವೇಶ ಮಾಡಿಸುತ್ತೇವೆ. info
التفاسير:

external-link copy
32 : 4

وَلَا تَتَمَنَّوْا مَا فَضَّلَ اللّٰهُ بِهٖ بَعْضَكُمْ عَلٰی بَعْضٍ ؕ— لِلرِّجَالِ نَصِیْبٌ مِّمَّا اكْتَسَبُوْا ؕ— وَلِلنِّسَآءِ نَصِیْبٌ مِّمَّا اكْتَسَبْنَ ؕ— وَسْـَٔلُوا اللّٰهَ مِنْ فَضْلِهٖ ؕ— اِنَّ اللّٰهَ كَانَ بِكُلِّ شَیْءٍ عَلِیْمًا ۟

ಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರರಿಗಿಂತ ಹೆಚ್ಚು ಔದಾರ್ಯ ತೋರಿದ್ದನ್ನು ನೀವು ಆಸೆಪಡಬೇಡಿ. ಪುರುಷರಿಗೆ ಅವರು ಸಂಪಾದಿಸಿದ ಪಾಲಿದೆ ಮತ್ತು ಮಹಿಳೆಯರಿಗೆ ಅವರು ಸಂಪಾದಿಸಿದ ಪಾಲಿದೆ. ಅಲ್ಲಾಹನ ಔದಾರ್ಯದಿಂದ ಅವನಲ್ಲಿ ಬೇಡಿಕೊಳ್ಳಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ. info
التفاسير:

external-link copy
33 : 4

وَلِكُلٍّ جَعَلْنَا مَوَالِیَ مِمَّا تَرَكَ الْوَالِدٰنِ وَالْاَقْرَبُوْنَ ؕ— وَالَّذِیْنَ عَقَدَتْ اَیْمَانُكُمْ فَاٰتُوْهُمْ نَصِیْبَهُمْ ؕ— اِنَّ اللّٰهَ كَانَ عَلٰی كُلِّ شَیْءٍ شَهِیْدًا ۟۠

ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟು ಹೋದ ಆಸ್ತಿಯಲ್ಲಿ ನಾವು ಪ್ರತಿಯೊಬ್ಬರನ್ನೂ ಹಕ್ಕುದಾರರನ್ನಾಗಿ ಮಾಡಿದ್ದೇವೆ. ನಿಮ್ಮ ಬಲಗೈಗಳ ಮೂಲಕ ಕರಾರು ಮಾಡಿದವರಿಗೆ ಅವರ ಪಾಲನ್ನು ಕೊಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ. info
التفاسير: