Қуръони Карим маъноларининг таржимаси - Каннада тили таржимаси - Ҳамза Бетур

Бет рақами:close

external-link copy
128 : 4

وَاِنِ امْرَاَةٌ خَافَتْ مِنْ بَعْلِهَا نُشُوْزًا اَوْ اِعْرَاضًا فَلَا جُنَاحَ عَلَیْهِمَاۤ اَنْ یُّصْلِحَا بَیْنَهُمَا صُلْحًا ؕ— وَالصُّلْحُ خَیْرٌ ؕ— وَاُحْضِرَتِ الْاَنْفُسُ الشُّحَّ ؕ— وَاِنْ تُحْسِنُوْا وَتَتَّقُوْا فَاِنَّ اللّٰهَ كَانَ بِمَا تَعْمَلُوْنَ خَبِیْرًا ۟

ಒಬ್ಬ ಮಹಿಳೆ ತನ್ನ ಗಂಡನಿಂದ ಕೆಟ್ಟ ವರ್ತನೆ ಅಥವಾ ಅವಗಣನೆಯನ್ನು ಭಯಪಟ್ಟರೆ, ಅವರಿಬ್ಬರು ಸೇರಿ ಅದನ್ನು ಇತ್ಯರ್ಥ ಮಾಡಿಕೊಳ್ಳುವುದರಲ್ಲಿ ಅವರಿಬ್ಬರಿಗೂ ದೋಷವಿಲ್ಲ. ಇತ್ಯರ್ಥ ಮಾಡುವುದು ಉತ್ತಮವಾಗಿದೆ. ಮನಸ್ಸುಗಳಲ್ಲಿ ಜಿಪುಣತನವು ಇದ್ದೇ ಇದೆ. ನೀವು ಒಳಿತು ಮಾಡುವವರು ಮತ್ತು ದೇವಭಯವುಳ್ಳವರಾಗಿದ್ದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ. info
التفاسير:

external-link copy
129 : 4

وَلَنْ تَسْتَطِیْعُوْۤا اَنْ تَعْدِلُوْا بَیْنَ النِّسَآءِ وَلَوْ حَرَصْتُمْ فَلَا تَمِیْلُوْا كُلَّ الْمَیْلِ فَتَذَرُوْهَا كَالْمُعَلَّقَةِ ؕ— وَاِنْ تُصْلِحُوْا وَتَتَّقُوْا فَاِنَّ اللّٰهَ كَانَ غَفُوْرًا رَّحِیْمًا ۟

ನೀವು ಎಷ್ಟೇ ಆಸಕ್ತಿ ವಹಿಸಿದರೂ ಪತ್ನಿಯರ ನಡುವೆ ನ್ಯಾಯನಿಷ್ಠೆಯಿಂದ ವರ್ತಿಸಲು ನಿಮಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ನೀವು ಒಬ್ಬಳ ಕಡೆಗೆ ಸಂಪೂರ್ಣ ಆಕರ್ಷಿತರಾಗಿ ಇನ್ನೊಬ್ಬಳನ್ನು ತೂಗು ಹಾಕಲಾದವಳಂತೆ ಬಿಟ್ಟುಬಿಡಬೇಡಿ. ನೀವು (ನಿಮ್ಮ ವರ್ತನೆಯನ್ನು) ಸುಧಾರಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟರೆ, ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
130 : 4

وَاِنْ یَّتَفَرَّقَا یُغْنِ اللّٰهُ كُلًّا مِّنْ سَعَتِهٖ ؕ— وَكَانَ اللّٰهُ وَاسِعًا حَكِیْمًا ۟

ಆದರೆ ಅವರಿಬ್ಬರು ಬೇರ್ಪಡುವುದಾದರೆ, ಅಲ್ಲಾಹು ತನ್ನ ವಿಶಾಲ ಸಾಮರ್ಥ್ಯದಿಂದ ಅವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯನ್ನು ನೀಡುವನು. ಅಲ್ಲಾಹು ವಿಶಾಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
131 : 4

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— وَلَقَدْ وَصَّیْنَا الَّذِیْنَ اُوْتُوا الْكِتٰبَ مِنْ قَبْلِكُمْ وَاِیَّاكُمْ اَنِ اتَّقُوا اللّٰهَ ؕ— وَاِنْ تَكْفُرُوْا فَاِنَّ لِلّٰهِ مَا فِی السَّمٰوٰتِ وَمَا فِی الْاَرْضِ ؕ— وَكَانَ اللّٰهُ غَنِیًّا حَمِیْدًا ۟

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. “ಅಲ್ಲಾಹನನ್ನು ಭಯಪಡಿರಿ” ಎಂದು ನಾವು ನಿಮಗೂ ನಿಮಗಿಂತ ಮೊದಲು ಗ್ರಂಥ ನೀಡಲಾದವರಿಗೂ ಆದೇಶಿಸಿದ್ದೇವೆ. ನೀವು ನಿಷೇಧಿಸಿದರೆ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ. info
التفاسير:

external-link copy
132 : 4

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— وَكَفٰی بِاللّٰهِ وَكِیْلًا ۟

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು. info
التفاسير:

external-link copy
133 : 4

اِنْ یَّشَاْ یُذْهِبْكُمْ اَیُّهَا النَّاسُ وَیَاْتِ بِاٰخَرِیْنَ ؕ— وَكَانَ اللّٰهُ عَلٰی ذٰلِكَ قَدِیْرًا ۟

ಓ ಜನರೇ! ಅಲ್ಲಾಹು ಇಚ್ಛಿಸಿದರೆ ಅವನು ನಿಮ್ಮನ್ನು ತೊಲಗಿಸಿ ಬೇರೆ ಜನರನ್ನು ತರುವನು. ಅಲ್ಲಾಹನಿಗೆ ಅದರಲ್ಲಿ ಸಂಪೂರ್ಣ ಸಾಮರ್ಥ್ಯವಿದೆ. info
التفاسير:

external-link copy
134 : 4

مَنْ كَانَ یُرِیْدُ ثَوَابَ الدُّنْیَا فَعِنْدَ اللّٰهِ ثَوَابُ الدُّنْیَا وَالْاٰخِرَةِ ؕ— وَكَانَ اللّٰهُ سَمِیْعًا بَصِیْرًا ۟۠

ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ—ಅಲ್ಲಾಹನ ಬಳಿ ಇಹಲೋಕ ಮತ್ತು ಪರಲೋಕಗಳ ಪ್ರತಿಫಲವಿದೆ (ಎಂದು ಅವನಿಗೆ ತಿಳಿದಿರಲಿ). ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. info
التفاسير: