Қуръони Карим маъноларининг таржимаси - Каннада тили таржимаси - Ҳамза Бетур

Бет рақами: 5:2 close

external-link copy
30 : 2

وَاِذْ قَالَ رَبُّكَ لِلْمَلٰٓىِٕكَةِ اِنِّیْ جَاعِلٌ فِی الْاَرْضِ خَلِیْفَةً ؕ— قَالُوْۤا اَتَجْعَلُ فِیْهَا مَنْ یُّفْسِدُ فِیْهَا وَیَسْفِكُ الدِّمَآءَ ۚ— وَنَحْنُ نُسَبِّحُ بِحَمْدِكَ وَنُقَدِّسُ لَكَ ؕ— قَالَ اِنِّیْۤ اَعْلَمُ مَا لَا تَعْلَمُوْنَ ۟

ನಿಮ್ಮ ಪರಿಪಾಲಕನು (ಅಲ್ಲಾಹು) ದೇವದೂತರೊಡನೆ, “ನಾನು ಭೂಮಿಯಲ್ಲಿ ಒಬ್ಬ ಉತ್ತರಾಧಿಕಾರಿಯನ್ನು[1] (ಮನುಷ್ಯನನ್ನು) ಮಾಡುತ್ತೇನೆ” ಎಂದು ಹೇಳಿದ ಸಂದರ್ಭ. ಅವರು ಕೇಳಿದರು: “ಅಲ್ಲಿ ಕಿಡಿಗೇಡಿತನ ಮಾಡುವವನನ್ನು ಮತ್ತು ರಕ್ತ ಹರಿಸುವವನನ್ನು ಮಾಡುವೆಯಾ? ನಾವಂತೂ ನಿನ್ನನ್ನು ಸ್ತುತಿಸುತ್ತಾ ನಿನ್ನ ಪರಿಶುದ್ಧಿಯನ್ನು ಕೊಂಡಾಡುತ್ತೇವೆ ಮತ್ತು ನಿನ್ನ ಪವಿತ್ರತೆಯನ್ನು ಹೊಗಳುತ್ತೇವೆ.” ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ, ನಿಮಗೆ ತಿಳಿಯದೇ ಇರುವುದು ನನಗೆ ತಿಳಿದಿದೆ.” info

[1] ಉತ್ತರಾಧಿಕಾರಿ ಎಂದರೆ ಅಲ್ಲಾಹನ ಉತ್ತರಾಧಿಕಾರಿಯಲ್ಲ. ಬದಲಿಗೆ, ಭೂಮಿಯಲ್ಲಿ ತಲೆಮಾರಿನ ನಂತರ ತಲೆಮಾರುಗಳಾಗಿ ಬರುವ ಮನುಷ್ಯರು.

التفاسير:

external-link copy
31 : 2

وَعَلَّمَ اٰدَمَ الْاَسْمَآءَ كُلَّهَا ثُمَّ عَرَضَهُمْ عَلَی الْمَلٰٓىِٕكَةِ فَقَالَ اَنْۢبِـُٔوْنِیْ بِاَسْمَآءِ هٰۤؤُلَآءِ اِنْ كُنْتُمْ صٰدِقِیْنَ ۟

ಅಲ್ಲಾಹು ಆದಮರಿಗೆ ಎಲ್ಲಾ ಹೆಸರುಗಳನ್ನು ಕಲಿಸಿದನು. ನಂತರ ಅವುಗಳನ್ನು ದೇವದೂತರುಗಳಿಗೆ ತೋರಿಸಿ ಹೇಳಿದನು: “ನೀವು ಸತ್ಯವಂತರಾಗಿದ್ದರೆ ಇವುಗಳ ಹೆಸರುಗಳನ್ನು ಹೇಳಿರಿ.” info
التفاسير:

external-link copy
32 : 2

قَالُوْا سُبْحٰنَكَ لَا عِلْمَ لَنَاۤ اِلَّا مَا عَلَّمْتَنَا ؕ— اِنَّكَ اَنْتَ الْعَلِیْمُ الْحَكِیْمُ ۟

ಅವರು ಹೇಳಿದರು: “ನಿನ್ನ ಪರಿಶುದ್ಧಿಯನ್ನು ನಾವು ಕೊಂಡಾಡುತ್ತೇವೆ. ನೀನು ನಮಗೆ ಕಲಿಸಿಕೊಟ್ಟದ್ದರ ಹೊರತು ಬೇರೇನೂ ನಮಗೆ ತಿಳಿದಿಲ್ಲ; ನಿಶ್ಚಯವಾಗಿಯೂ ನೀನು ಸರ್ವಜ್ಞನು ಮತ್ತು ವಿವೇಕವಂತನಾಗಿರುವೆ.” info
التفاسير:

external-link copy
33 : 2

قَالَ یٰۤاٰدَمُ اَنْۢبِئْهُمْ بِاَسْمَآىِٕهِمْ ۚ— فَلَمَّاۤ اَنْۢبَاَهُمْ بِاَسْمَآىِٕهِمْ ۙ— قَالَ اَلَمْ اَقُلْ لَّكُمْ اِنِّیْۤ اَعْلَمُ غَیْبَ السَّمٰوٰتِ وَالْاَرْضِ ۙ— وَاَعْلَمُ مَا تُبْدُوْنَ وَمَا كُنْتُمْ تَكْتُمُوْنَ ۟

ಅಲ್ಲಾಹು ಹೇಳಿದನು: “ಓ ಆದಮರೇ! ಅವರಿಗೆ ಅವುಗಳ ಹೆಸರುಗಳನ್ನು ಹೇಳಿಕೊಡಿ.” ಆದಮ್ ಅವರಿಗೆ ಅವುಗಳ ಹೆಸರುಗಳನ್ನು ಹೇಳಿಕೊಟ್ಟಾಗ ಅಲ್ಲಾಹು ಹೇಳಿದನು: “ನಾನು ನಿಮಗೆ ಹೇಳಿರಲಿಲ್ಲವೇ? ನಿಶ್ಚಯವಾಗಿಯೂ, ಭೂಮ್ಯಾಕಾಶಗಳ ಅದೃಶ್ಯ ವಿಷಯಗಳನ್ನು ನಾನು ತಿಳಿದಿದ್ದೇನೆಂದು; ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ನಾನು ತಿಳಿದಿದ್ದೇನೆಂದು.” info
التفاسير:

external-link copy
34 : 2

وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— اَبٰی وَاسْتَكْبَرَ وَكَانَ مِنَ الْكٰفِرِیْنَ ۟

ನಾವು ದೇವದೂತರೊಡನೆ ಹೇಳಿದ ಸಂದರ್ಭ: “ನೀವೆಲ್ಲರೂ ಆದಮರಿಗೆ ಸಾಷ್ಟಾಂಗ ಮಾಡಿರಿ.”[1] ಅವರು ಸಾಷ್ಟಾಂಗ ಮಾಡಿದರು; ಇಬ್ಲೀಸನ ಹೊರತು.[2] ಅವನು (ಸಾಷ್ಟಾಂಗ ಮಾಡಲು) ನಿರಾಕರಿಸಿದನು ಮತ್ತು ಅಹಂಕಾರ ತೋರಿದನು. ಅವನು ಸತ್ಯನಿಷೇಧಿಗಳಲ್ಲಿ ಸೇರಿದವನಾದನು. info

[1] ಸುಜೂದ್ ಎಂದರೆ ವಿನಯ ಮತ್ತು ವಿನಮ್ರತೆಯನ್ನು ವ್ಯಕ್ತಪಡಿಸುವುದು. ನೆಲದ ಮೇಲೆ ಹಣೆಯಿಟ್ಟು ಸಾಷ್ಟಾಂಗ ಮಾಡುವುದು ಇದರ ಪರಮೋಚ್ಛ ರೂಪವಾಗಿದೆ. ಪ್ರವಾದಿ ಮುಹಮ್ಮದ್ (ಅವರ ಮೇಲೆ ಶಾಂತಿಯಿರಲಿ) ರವರ ಶರಿಯತ್ (ಧರ್ಮಸಂಹಿತೆ) ನ ಪ್ರಕಾರ ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಸಾಷ್ಟಾಂಗ ಮಾಡಬಾರದು. [2] ಇಬ್ಲೀಸ್ ಜಿನ್ನ್ (ಯಕ್ಷ) ಗಳಲ್ಲಿ ಸೇರಿದವನು. ಅಲ್ಲಾಹು ಅವನಿಗೆ ಶ್ರೇಷ್ಠತೆ ನೀಡಿ ದೇವದೂತರೊಡನೆ ಸೇರಿಸಿದ್ದನು. ಆದ್ದರಿಂದ ಅಲ್ಲಾಹನ ಆದೇಶ ಪ್ರಕಾರ ಸಾಷ್ಟಾಂಗ ಮಾಡುವುದು ಅವನಿಗೂ ಕಡ್ಡಾಯವಾಗಿತ್ತು. ಆದರೆ ಅವನು ಆದಮರ ಮೇಲಿದ್ದ ಅಸೂಯೆ ಮತ್ತು ಅಹಂಕಾರದಿಂದ ಸಾಷ್ಟಾಂಗ ಮಾಡಲು ನಿರಾಕರಿಸಿದನು.

التفاسير:

external-link copy
35 : 2

وَقُلْنَا یٰۤاٰدَمُ اسْكُنْ اَنْتَ وَزَوْجُكَ الْجَنَّةَ وَكُلَا مِنْهَا رَغَدًا حَیْثُ شِئْتُمَا ۪— وَلَا تَقْرَبَا هٰذِهِ الشَّجَرَةَ فَتَكُوْنَا مِنَ الظّٰلِمِیْنَ ۟

ನಾವು ಹೇಳಿದೆವು: “ಓ ಆದಮರೇ! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ; ಅಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಗಳಿಂದ ಯಥೇಷ್ಟವಾಗಿ ತಿನ್ನಿರಿ. ಆದರೆ ಈ ಮರದ ಹತ್ತಿರ ಹೋಗಬೇಡಿ. ಹಾಗೇನಾದರೂ ಹೋದರೆ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ.” info
التفاسير:

external-link copy
36 : 2

فَاَزَلَّهُمَا الشَّیْطٰنُ عَنْهَا فَاَخْرَجَهُمَا مِمَّا كَانَا فِیْهِ ۪— وَقُلْنَا اهْبِطُوْا بَعْضُكُمْ لِبَعْضٍ عَدُوٌّ ۚ— وَلَكُمْ فِی الْاَرْضِ مُسْتَقَرٌّ وَّمَتَاعٌ اِلٰی حِیْنٍ ۟

ಆದರೆ ಶೈತಾನನು ಅವರನ್ನು ತಪ್ಪುದಾರಿಗೆಳೆದು, ಅವರಿಬ್ಬರೂ ವಾಸವಾಗಿದ್ದಲ್ಲಿಂದ ಹೊರಹೋಗುವಂತೆ ಮಾಡಿದನು. ನಾವು ಹೇಳಿದೆವು: “ನೀವೆಲ್ಲರೂ ಇಳಿಯಿರಿ. ನೀವು ಪರಸ್ಪರ ವೈರಿಗಳಾಗಿದ್ದೀರಿ. ನಿಮಗೆ ಭೂಮಿಯಲ್ಲಿ ಒಂದು ಅವಧಿಯವರೆಗೆ ವಾಸಸ್ಥಳ ಹಾಗೂ ಜೀವನ ಸವಲತ್ತುಗಳಿವೆ.” info
التفاسير:

external-link copy
37 : 2

فَتَلَقّٰۤی اٰدَمُ مِنْ رَّبِّهٖ كَلِمٰتٍ فَتَابَ عَلَیْهِ ؕ— اِنَّهٗ هُوَ التَّوَّابُ الرَّحِیْمُ ۟

ಆದಮ್ ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಕೆಲವು ವಚನಗಳನ್ನು ಕಲಿತುಕೊಂಡರು.[1] ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ. info

[1] ಈ ವಚನಗಳು ಏನೆಂದು ಸೂರ ಅಅ್‌ರಾಫ್ (7:23) ರಲ್ಲಿ ಉಲ್ಲೇಖಿಸಲಾಗಿದೆ.

التفاسير: