Қуръони Карим маъноларининг таржимаси - Каннада тили таржимаси - Ҳамза Бетур

Бет рақами: 45:2 close

external-link copy
270 : 2

وَمَاۤ اَنْفَقْتُمْ مِّنْ نَّفَقَةٍ اَوْ نَذَرْتُمْ مِّنْ نَّذْرٍ فَاِنَّ اللّٰهَ یَعْلَمُهٗ ؕ— وَمَا لِلظّٰلِمِیْنَ مِنْ اَنْصَارٍ ۟

ನೀವು ಯಾವುದೇ ವಸ್ತುವನ್ನು ಖರ್ಚು (ದಾನ) ಮಾಡಿದರೂ ಅಥವಾ ಹರಕೆ ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅಕ್ರಮಿಗಳಿಗೆ ಸಹಾಯ ಮಾಡುವವರು ಯಾರೂ ಇಲ್ಲ. info
التفاسير:

external-link copy
271 : 2

اِنْ تُبْدُوا الصَّدَقٰتِ فَنِعِمَّا هِیَ ۚ— وَاِنْ تُخْفُوْهَا وَتُؤْتُوْهَا الْفُقَرَآءَ فَهُوَ خَیْرٌ لَّكُمْ ؕ— وَیُكَفِّرُ عَنْكُمْ مِّنْ سَیِّاٰتِكُمْ ؕ— وَاللّٰهُ بِمَا تَعْمَلُوْنَ خَبِیْرٌ ۟

ನೀವು ದಾನ ಮಾಡಿದ್ದನ್ನು ಬಹಿರಂಗಪಡಿಸಿದರೆ ಅದು ಒಳ್ಳೆಯದೇ. ಆದರೆ ನೀವು ಅದನ್ನು ಗೋಪ್ಯವಾಗಿಟ್ಟು ಬಡವರಿಗೆ ನೀಡಿದರೆ ಅದು ನಿಮಗೆ ಶ್ರೇಷ್ಠವಾಗಿದೆ. ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವನು. ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿದಿದ್ದಾನೆ. info
التفاسير:

external-link copy
272 : 2

لَیْسَ عَلَیْكَ هُدٰىهُمْ وَلٰكِنَّ اللّٰهَ یَهْدِیْ مَنْ یَّشَآءُ ؕ— وَمَا تُنْفِقُوْا مِنْ خَیْرٍ فَلِاَنْفُسِكُمْ ؕ— وَمَا تُنْفِقُوْنَ اِلَّا ابْتِغَآءَ وَجْهِ اللّٰهِ ؕ— وَمَا تُنْفِقُوْا مِنْ خَیْرٍ یُّوَفَّ اِلَیْكُمْ وَاَنْتُمْ لَا تُظْلَمُوْنَ ۟

ನಿಮಗೆ ಅವರನ್ನು ಸನ್ಮಾರ್ಗದಲ್ಲಿ ಸೇರಿಸುವ ಹೊಣೆಗಾರಿಕೆಯಿಲ್ಲ. ಬದಲಿಗೆ, ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ. ನೀವು ಏನು ಖರ್ಚು (ದಾನ) ಮಾಡಿದರೂ ಅದರ ಲಾಭವು ನಿಮಗೇ ಆಗಿದೆ. ಅಲ್ಲಾಹನ ಸಂಪ್ರೀತಿಯನ್ನು ಬಯಸಿಯೇ ವಿನಾ ನೀವು ಖರ್ಚು (ದಾನ) ಮಾಡಬಾರದು. ನೀವು ಏನು ಖರ್ಚು (ದಾನ) ಮಾಡಿದರೂ ಅದರ ಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ನಿಮಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. info
التفاسير:

external-link copy
273 : 2

لِلْفُقَرَآءِ الَّذِیْنَ اُحْصِرُوْا فِیْ سَبِیْلِ اللّٰهِ لَا یَسْتَطِیْعُوْنَ ضَرْبًا فِی الْاَرْضِ ؗ— یَحْسَبُهُمُ الْجَاهِلُ اَغْنِیَآءَ مِنَ التَّعَفُّفِ ۚ— تَعْرِفُهُمْ بِسِیْمٰىهُمْ ۚ— لَا یَسْـَٔلُوْنَ النَّاسَ اِلْحَافًا ؕ— وَمَا تُنْفِقُوْا مِنْ خَیْرٍ فَاِنَّ اللّٰهَ بِهٖ عَلِیْمٌ ۟۠

ಭೂಮಿಯಲ್ಲಿ ಓಡಾಡಲು ಸಾಧ್ಯವಾಗದಂತೆ ಅಲ್ಲಾಹನ ಮಾರ್ಗದಲ್ಲಿ ಬಂಧನದಲ್ಲಿರುವ ಬಡವರಿಗೆ (ಖರ್ಚು ಮಾಡಿರಿ).[1] ಅವರಿಗೆ ಆತ್ಮಸಂಯಮವಿರುವ ಕಾರಣ (ಇತರರ ಮುಂದೆ ಕೈ ಚಾಚಿ ಬೇಡದ ಕಾರಣ) ಅವಿವೇಕಿಗಳು ಅವರನ್ನು ಶ್ರೀಮಂತರೆಂದು ಭಾವಿಸುತ್ತಾರೆ. ನಿಮಗೆ ಅವರನ್ನು ಅವರ ಹಾವಭಾವಗಳಿಂದ ಗುರುತಿಸಬಹುದು. ಅವರು ಜನರೊಡನೆ ಕಾಡಿ ಬೇಡುವುದಿಲ್ಲ. ನೀವು (ಅಲ್ಲಾಹನ ಮಾರ್ಗದಲ್ಲಿ) ಯಾವುದೇ ಸಂಪತ್ತನ್ನು ಖರ್ಚು (ದಾನ) ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ. info

[1] ಇಲ್ಲಿ ಉದ್ದೇಶಿಸಿರುವುದು ಮಕ್ಕಾದಿಂದ ಮದೀನಕ್ಕೆ ವಲಸೆ ಬಂದ ಮುಹಾಜಿರ್‌ಗಳನ್ನಾಗಿದೆ. ಅವರು ಅಲ್ಲಾಹನ ಮಾರ್ಗದಲ್ಲಿ ಎಲ್ಲವನ್ನೂ ತ್ಯಜಿಸಿ ಬಂದಿದ್ದರು.

التفاسير:

external-link copy
274 : 2

اَلَّذِیْنَ یُنْفِقُوْنَ اَمْوَالَهُمْ بِالَّیْلِ وَالنَّهَارِ سِرًّا وَّعَلَانِیَةً فَلَهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟ؔ

ರಾತ್ರಿ ಮತ್ತು ಹಗಲು ರಹಸ್ಯವಾಗಿ ಮತ್ತು ಬಹಿರಂಗವಾಗಿ ತಮ್ಮ ಧನವನ್ನು ಖರ್ಚು ಮಾಡುವವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ. info
التفاسير: