Қуръони Карим маъноларининг таржимаси - Каннадача таржима - Башир Майсури

Бет рақами:close

external-link copy
122 : 4

وَالَّذِیْنَ اٰمَنُوْا وَعَمِلُوا الصّٰلِحٰتِ سَنُدْخِلُهُمْ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— وَعْدَ اللّٰهِ حَقًّا ؕ— وَمَنْ اَصْدَقُ مِنَ اللّٰهِ قِیْلًا ۟

ಸತ್ಯವಿಶ್ವಾಸವಿಟ್ಟು ಮತ್ತು ಸತ್ಕರ್ಮ ಮಾಡುವವರಿಗೆ ನಾವು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವೆವು. ಅವರು ಅದರಲ್ಲಿ ಶಾಶ್ವತವಾಗಿರುವರು. ಇದು ಅಲ್ಲಾಹನ ಸತ್ಯವಾದ ವಾಗ್ದಾನವಾಗಿದೆ. ಮತ್ತು ಅಲ್ಲಾಹನಿಗಿಂತ ಅಧಿಕ ಸತ್ಯವಂತನು ಇನ್ನಾರಿದ್ದಾನೆ? info
التفاسير:

external-link copy
123 : 4

لَیْسَ بِاَمَانِیِّكُمْ وَلَاۤ اَمَانِیِّ اَهْلِ الْكِتٰبِ ؕ— مَنْ یَّعْمَلْ سُوْٓءًا یُّجْزَ بِهٖ ۙ— وَلَا یَجِدْ لَهٗ مِنْ دُوْنِ اللّٰهِ وَلِیًّا وَّلَا نَصِیْرًا ۟

ಶ್ರೇಷ್ಠತೆಯು ನಿಮ್ಮ ಇಚ್ಛೆಗನುಸಾರವಾಗಿರುವುದಿಲ್ಲ ಮತ್ತು ಗ್ರಂಥದವರ ಇಚ್ಛೆಗನುಸಾರವಾಗಿರುವುದೂ ಇಲ್ಲ. ಯಾರು ಪಾಪ ಮಾಡುತ್ತಾನೋ ಅವನು ಅದರ ಶಿಕ್ಷೆಯನ್ನು ಪಡೆಯುವನು. ಅವನು ಅಲ್ಲಾಹನ ಎದುರು ತನಗೆ ರಕ್ಷಣೆ ಮಾಡುವ ಮತ್ತು ಸಹಾಯ ಮಾಡುವ ಯಾವೊಬ್ಬನನ್ನೂ ಕಾಣಲಾರನು. info
التفاسير:

external-link copy
124 : 4

وَمَنْ یَّعْمَلْ مِنَ الصّٰلِحٰتِ مِنْ ذَكَرٍ اَوْ اُ وَهُوَ مُؤْمِنٌ فَاُولٰٓىِٕكَ یَدْخُلُوْنَ الْجَنَّةَ وَلَا یُظْلَمُوْنَ نَقِیْرًا ۟

ಗಂಡಾಗಿರಲೀ, ಹೆಣ್ಣಾಗಿರಲೀ ಸತ್ಯವಿಶ್ವಾಸಿಗಳಾಗಿ ಸತ್ಕರ್ಮಗಳನ್ನು ಮಾಡಿದರೆ ಖಂಡಿತ ಅಂತಹವರು ಸ್ವರ್ಗಕ್ಕೆ ಹೋಗುವರು. ಅವರಿಗೆ ಎಳ್ಳಷ್ಟೂ ಅನ್ಯಾಯ ಮಾಡಲಾಗದು. info
التفاسير:

external-link copy
125 : 4

وَمَنْ اَحْسَنُ دِیْنًا مِّمَّنْ اَسْلَمَ وَجْهَهٗ لِلّٰهِ وَهُوَ مُحْسِنٌ وَّاتَّبَعَ مِلَّةَ اِبْرٰهِیْمَ حَنِیْفًا ؕ— وَاتَّخَذَ اللّٰهُ اِبْرٰهِیْمَ خَلِیْلًا ۟

ಸ್ವತಃ ಸದಾಚಾರಿಯಾಗಿದ್ದು ತನ್ನನ್ನು ಅಲ್ಲಾಹನಿಗೆ ವಿಧೇಯಗೊಳಿಸಿ ನೇರ ಮಾರ್ಗದಲ್ಲಿದ್ದ ಇಬ್ರಾಹೀಮರ ಮಾರ್ಗವನ್ನು ಅನುಸರಿಸುವವನಿಗಿಂತ ಉತ್ತಮ ಧರ್ಮನಿಷ್ಠನು ಇನ್ನಾರಿದ್ದಾನೆ. ಮತ್ತು ಅಲ್ಲಾಹನು ಇಬ್ರಾಹೀಮರನ್ನು ತನ್ನ ಆಪ್ತ ಮಿತ್ರನಾಗಿ ಮಾಡಿಕೊಂಡಿದ್ದಾನೆ. info
التفاسير:

external-link copy
126 : 4

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— وَكَانَ اللّٰهُ بِكُلِّ شَیْءٍ مُّحِیْطًا ۟۠

ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ ಮತ್ತು ಅಲ್ಲಾಹನು ಸಕಲ ವಿಷಯಗಳನ್ನು ಆವರಿಸುವವನಾಗಿದ್ದಾನೆ. info
التفاسير:

external-link copy
127 : 4

وَیَسْتَفْتُوْنَكَ فِی النِّسَآءِ ؕ— قُلِ اللّٰهُ یُفْتِیْكُمْ فِیْهِنَّ ۙ— وَمَا یُتْلٰی عَلَیْكُمْ فِی الْكِتٰبِ فِیْ یَتٰمَی النِّسَآءِ الّٰتِیْ لَا تُؤْتُوْنَهُنَّ مَا كُتِبَ لَهُنَّ وَتَرْغَبُوْنَ اَنْ تَنْكِحُوْهُنَّ وَالْمُسْتَضْعَفِیْنَ مِنَ الْوِلْدَانِ ۙ— وَاَنْ تَقُوْمُوْا لِلْیَتٰمٰی بِالْقِسْطِ ؕ— وَمَا تَفْعَلُوْا مِنْ خَیْرٍ فَاِنَّ اللّٰهَ كَانَ بِهٖ عَلِیْمًا ۟

(ಓ ಪೈಗಂಗರರೇ) ಅವರು ನಿಮ್ಮೊಂದಿಗೆ ಸ್ತಿçÃಯರ ಕುರಿತು ಧರ್ಮವಿಧಿ ಕೇಳುತ್ತಾರೆ. ನೀವು ಹೇಳಿರಿ: ಅಲ್ಲಾಹನು ಅವರ ಕುರಿತು ನಿಮಗೆ ವಿಧಿ ನೀಡುತ್ತಾನೆ. ಹಾಗೂ ಜೊತೆಗೆ ನಿಮಗೆ ಈ ಗ್ರಂಥದಲ್ಲಿ ಜನರಿಗೆ ಅನಾಥ ಸ್ತಿçÃಯರ ಬಗ್ಗೆ ತಿಳಿಸಲಾಗುತ್ತಿದೆ. ಆ ಅನಾಥ ಯುವತಿಯರ ವಧು ಧನವನ್ನು ನೀಡದೇ ಅವರೊಡನೆ ವಿವಾಹವಾಗಲು ಬಯಸುತ್ತೀರಿ. ಇದೇ ಪ್ರಕಾರ ಆಶ್ರಯ ರಹಿತ ಯುವತಿಯರ ಕುರಿತು ನೀಡಲಾಗಿರುವ ಆಜ್ಞೆಗಳು (ಅವುಗಳನ್ನು ಸಹ ನೆನಪಿಸುತ್ತಾನೆ) ಹಾಗೂ ಆ ಆಜ್ಞೆಯಲ್ಲೂ ಅನಾಥರೊಡನೆ ನ್ಯಾಯವನ್ನು ಪಾಲಿಸಿರಿ ನೀವು ಮಾಡುವ ಕಾರ್ಯಗಳನ್ನು ಅಲ್ಲಾಹನು ಬಲ್ಲವನಾಗಿದ್ದಾನೆ. info
التفاسير: