Қуръони Карим маъноларининг таржимаси - Каннадача таржима - Башир Майсури

Бет рақами:close

external-link copy
114 : 4

لَا خَیْرَ فِیْ كَثِیْرٍ مِّنْ نَّجْوٰىهُمْ اِلَّا مَنْ اَمَرَ بِصَدَقَةٍ اَوْ مَعْرُوْفٍ اَوْ اِصْلَاحٍ بَیْنَ النَّاسِ ؕ— وَمَنْ یَّفْعَلْ ذٰلِكَ ابْتِغَآءَ مَرْضَاتِ اللّٰهِ فَسَوْفَ نُؤْتِیْهِ اَجْرًا عَظِیْمًا ۟

ಅವರ ಹೆಚ್ಚಿನ ಗೂಢಾಲೋಚನೆಗಳಲ್ಲಿ ಯಾವುದೇ ಒಳಿತಿರುವುದಿಲ್ಲ. ಆದರೆ! ದಾನಧರ್ಮ ಮಾಡುವುದಕ್ಕಾಗಲೀ, ಸದಾಚಾರ ಕೈಗೊಳ್ಳುವುದಕ್ಕಾಗಲೀ, ಅಥವಾ ಜನರ ಮಧ್ಯೆ ಸಾಮರಸ್ಯ ಉಂಟು ಮಾಡಲಿಕ್ಕಾಗಿ ನಡೆಸಲಾಗುವ ಗೂಢಾಲೋಚನೆಗಳ ಹೊರತು ಯಾರು ಅಲ್ಲಾಹನ ಸಂತೃಪ್ತಿಯನ್ನು ಪಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಾನೋ ಅವನಿಗೆ ನಾವು ಮಹಾ ಪ್ರತಿಫಲವನ್ನು ನೀಡುವೆವು. info
التفاسير:

external-link copy
115 : 4

وَمَنْ یُّشَاقِقِ الرَّسُوْلَ مِنْ بَعْدِ مَا تَبَیَّنَ لَهُ الْهُدٰی وَیَتَّبِعْ غَیْرَ سَبِیْلِ الْمُؤْمِنِیْنَ نُوَلِّهٖ مَا تَوَلّٰی وَنُصْلِهٖ جَهَنَّمَ ؕ— وَسَآءَتْ مَصِیْرًا ۟۠

ಯಾವ ವ್ಯಕ್ತಿಯು ತನಗೆ ಸನ್ಮಾರ್ಗವು ಸ್ಪಷ್ಟವಾದ ನಂತರವೂ ಸಂದೇಶವಾಹಕ(ಸ)ರನ್ನು ವಿರೋಧಿಸುತ್ತಾನೋ ಮತ್ತು ಸತ್ಯವಿಶ್ವಾಸಿಗಳ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗವನ್ನು ಅನುಸರಿಸುತ್ತಾನೋ ಅವನು ತಿರುಗಿದ ಮಾರ್ಗಕ್ಕೆ ನಾವು ಅವನನ್ನು ತಿರುಗಿಸಿಬಿಡುವೆವು ಮತ್ತು (ಕೊನೆಗೆ ಅವನನ್ನು)ನರಕಾಗ್ನಿಯಲ್ಲಿ ಹಾಕುವೆವು. ಅದು ಅತೀ ನಿಕೃಷ್ಟ ವಾಸಸ್ಥಳವಾಗಿದೆ. info
التفاسير:

external-link copy
116 : 4

اِنَّ اللّٰهَ لَا یَغْفِرُ اَنْ یُّشْرَكَ بِهٖ وَیَغْفِرُ مَا دُوْنَ ذٰلِكَ لِمَنْ یَّشَآءُ ؕ— وَمَنْ یُّشْرِكْ بِاللّٰهِ فَقَدْ ضَلَّ ضَلٰلًا بَعِیْدًا ۟

ಅಲ್ಲಾಹನು ತನ್ನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸಲಾಗುವುದನ್ನು ಖಂಡಿತ ಕ್ಷಮಿಸುವುದಿಲ್ಲ. ಆದರೆ ಅದರ ಹೊರತು ಇತರ ಪಾಪಗಳನ್ನು ತಾನಿಚ್ಛಿಸುವವರೆಗೆ ಅವನು ಕ್ಷಮಿಸುತ್ತಾನೆ. ಯಾರು ಅಲ್ಲಾಹನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸುವನೋ ನಿಸ್ಸಂದೇಹವಾಗಿಯು ಅವನು ಅತೀ ವಿದೂರ ಪಥಭ್ರಷ್ಟತೆಯಲ್ಲಿ ಸಾಗಿಬಿಟ್ಟನು. info
التفاسير:

external-link copy
117 : 4

اِنْ یَّدْعُوْنَ مِنْ دُوْنِهٖۤ اِلَّاۤ اِنٰثًا ۚ— وَاِنْ یَّدْعُوْنَ اِلَّا شَیْطٰنًا مَّرِیْدًا ۟ۙ

ಅವರು (ಬಹುದೇವಾರಾಧಕರು) ಅಲ್ಲಾಹನನ್ನು ಬಿಟ್ಟು ಕೇವಲ ಸ್ತಿçÃಯರನ್ನು ಕರೆದು ಬೇಡುತ್ತಾರೆ ವಾಸ್ತವದಲ್ಲಿ ಅವರು ಕೇವಲ ದುಷ್ಟ ಶೈತಾನನನ್ನು ಆರಾಧಿಸುತ್ತಿದ್ದಾರೆ. info
التفاسير:

external-link copy
118 : 4

لَّعَنَهُ اللّٰهُ ۘ— وَقَالَ لَاَتَّخِذَنَّ مِنْ عِبَادِكَ نَصِیْبًا مَّفْرُوْضًا ۟ۙ

ಅವನನ್ನು ಅಲ್ಲಾಹನು ಶಪಿಸಿದ್ದಾನೆ ಮತ್ತು ಅವನು (ಶೈತಾನನು) ಹೇಳಿದನು. ನಿನ್ನ ದಾಸರ ಪೈಕಿ ನಿಶ್ಚಿತ ಪಾಲನ್ನು ನಾನು ಪಡೆದೇ ತೀರುವೆನು. info
التفاسير:

external-link copy
119 : 4

وَّلَاُضِلَّنَّهُمْ وَلَاُمَنِّیَنَّهُمْ وَلَاٰمُرَنَّهُمْ فَلَیُبَتِّكُنَّ اٰذَانَ الْاَنْعَامِ وَلَاٰمُرَنَّهُمْ فَلَیُغَیِّرُنَّ خَلْقَ اللّٰهِ ؕ— وَمَنْ یَّتَّخِذِ الشَّیْطٰنَ وَلِیًّا مِّنْ دُوْنِ اللّٰهِ فَقَدْ خَسِرَ خُسْرَانًا مُّبِیْنًا ۟ؕ

ನಾನು ಖಂಡಿತ ಅವರನ್ನು ದಾರಿಗೆಡುಸುವೆನು ಮತ್ತು ಅವರಿಗೆ ಅಮಿಷಗಳನ್ನು ಒಡ್ಡಿ ಅವರು ಜಾನುವಾರುಗಳ ಕಿವಿಗಳನ್ನು ಕತ್ತರಿಸಲೆಂದು ಅವರಿಗೆ ಆದೇಶಿಸುವೆನು. ಮತ್ತು ಅವರು ಅಲ್ಲಾಹನ ಸೃಷ್ಟಿಯನ್ನು ವಿಕೃತಗೊಳಿಸಲೆಂದು ನಾನು ಅವರಿಗೆ ಹೇಳುವೆನು. ಯಾರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತನ್ನ ಮಿತ್ರನನ್ನಾಗಿ ಮಾಡುತ್ತಾನೋ ಅವನು ಸ್ಪಷ್ಟವಾದ ನಷ್ಟಕ್ಕೊಳಗಾದನು. info
التفاسير:

external-link copy
120 : 4

یَعِدُهُمْ وَیُمَنِّیْهِمْ ؕ— وَمَا یَعِدُهُمُ الشَّیْطٰنُ اِلَّا غُرُوْرًا ۟

ಅವನು ಅವರಿಗೆ ವಾಗ್ದಾನವನ್ನು ಮಾಡುತ್ತಾನೆ ಮತ್ತು ಅವರಿಗೆ ಅಮಿಷಗಳನ್ನು ಒಡ್ಡುತ್ತಾನೆ. ಶೈತಾನನು ಅವರಿಗೆ ನೀಡುವ ವಾಗ್ದಾನವು ವಂಚನೆಯಲ್ಲದೇ ಇನ್ನೇನೂ ಅಲ್ಲ. info
التفاسير:

external-link copy
121 : 4

اُولٰٓىِٕكَ مَاْوٰىهُمْ جَهَنَّمُ ؗ— وَلَا یَجِدُوْنَ عَنْهَا مَحِیْصًا ۟

ಅಂಥವರ ವಾಸಸ್ಥಳವು ನರಕವಾಗಿದೆ ಅದರಿಂದ ಪಾರಾಗಲು ಅವರು ಯಾವುದೇ ದಾರಿಯನ್ನು ಕಾಣಲಾರರು. info
التفاسير: