قرآن کریم کے معانی کا ترجمہ - کنڑ ترجمہ - حمزہ بتور

صفحہ نمبر:close

external-link copy
60 : 6

وَهُوَ الَّذِیْ یَتَوَفّٰىكُمْ بِالَّیْلِ وَیَعْلَمُ مَا جَرَحْتُمْ بِالنَّهَارِ ثُمَّ یَبْعَثُكُمْ فِیْهِ لِیُقْضٰۤی اَجَلٌ مُّسَمًّی ۚ— ثُمَّ اِلَیْهِ مَرْجِعُكُمْ ثُمَّ یُنَبِّئُكُمْ بِمَا كُنْتُمْ تَعْمَلُوْنَ ۟۠

ರಾತ್ರಿಯಲ್ಲಿ (ನಿದ್ರಿಸುವಾಗ) ಅವನು ನಿಮ್ಮ ಆತ್ಮಗಳನ್ನು ವಶಪಡಿಸುತ್ತಾನೆ ಮತ್ತು ನೀವು ಹಗಲಿನಲ್ಲಿ ಮಾಡಿದ ಕರ್ಮಗಳನ್ನು ತಿಳಿಯುತ್ತಾನೆ. ನಂತರ ನಿಶ್ಚಿತ ಜೀವಿತಾವಧಿಯನ್ನು ಪೂರ್ಣಗೊಳಿಸಲು ಅವನು ನಿಮ್ಮನ್ನು ಹಗಲಿನಲ್ಲಿ (ನಿದ್ದೆಯಿಂದ) ಎಬ್ಬಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೆ ಮರಳಿಸಲಾಗುತ್ತದೆ. ನಂತರ ನೀವು ಮಾಡಿದ ಕರ್ಮಗಳನ್ನು ಅವನು ನಿಮಗೆ ತಿಳಿಸುತ್ತಾನೆ. info
التفاسير:

external-link copy
61 : 6

وَهُوَ الْقَاهِرُ فَوْقَ عِبَادِهٖ وَیُرْسِلُ عَلَیْكُمْ حَفَظَةً ؕ— حَتّٰۤی اِذَا جَآءَ اَحَدَكُمُ الْمَوْتُ تَوَفَّتْهُ رُسُلُنَا وَهُمْ لَا یُفَرِّطُوْنَ ۟

ಅವನಿಗೆ ಅವನ ದಾಸರ ಮೇಲೆ ಪರಮಾಧಿಕಾರವಿದೆ. ನಿಮ್ಮ ಮೇಲ್ನೋಟಕ್ಕೆ ಅವನು ಕಾವಲುಗಾರರನ್ನು (ದೇವದೂತರನ್ನು) ಕಳುಹಿಸುತ್ತಾನೆ. ಎಲ್ಲಿಯವರೆಗೆಂದರೆ, ನಿಮ್ಮಲ್ಲಿ ಒಬ್ಬನಿಗೆ ಮರಣವು ಸನ್ನಿಹಿತವಾದಾಗ, ನಮ್ಮ ದೂತರು ಅವನ ಆತ್ಮವನ್ನು ವಶಪಡಿಸುತ್ತಾರೆ. ಅವರು (ಕರ್ತವ್ಯ ನಿರ್ವಹಣೆಯಲ್ಲಿ) ಲೋಪವೆಸಗುವುದಿಲ್ಲ. info
التفاسير:

external-link copy
62 : 6

ثُمَّ رُدُّوْۤا اِلَی اللّٰهِ مَوْلٰىهُمُ الْحَقِّ ؕ— اَلَا لَهُ الْحُكْمُ ۫— وَهُوَ اَسْرَعُ الْحٰسِبِیْنَ ۟

ನಂತರ ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುತ್ತದೆ. ತಿಳಿಯಿರಿ! ಆಜ್ಞಾಧಿಕಾರವಿರುವುದು ಅವನಿಗೆ ಮಾತ್ರ. ಅವನು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ. info
التفاسير:

external-link copy
63 : 6

قُلْ مَنْ یُّنَجِّیْكُمْ مِّنْ ظُلُمٰتِ الْبَرِّ وَالْبَحْرِ تَدْعُوْنَهٗ تَضَرُّعًا وَّخُفْیَةً ۚ— لَىِٕنْ اَنْجٰىنَا مِنْ هٰذِهٖ لَنَكُوْنَنَّ مِنَ الشّٰكِرِیْنَ ۟

ಹೇಳಿರಿ: “ಅಲ್ಲಾಹು ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿದರೆ ಖಂಡಿತವಾಗಿಯೂ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳುತ್ತಾ ನೀವು ವಿನಮ್ರತೆಯಿಂದ ಮತ್ತು ರಹಸ್ಯವಾಗಿ ಅವನನ್ನು ಕರೆದು ಪ್ರಾರ್ಥಿಸುವಾಗ, ನೆಲ ಮತ್ತು ಕಡಲಿನ ಗಾಢಾಂಧಕಾರಗಳಿಂದ ನಿಮ್ಮನ್ನು ಕಾಪಾಡುವುದು ಯಾರು? info
التفاسير:

external-link copy
64 : 6

قُلِ اللّٰهُ یُنَجِّیْكُمْ مِّنْهَا وَمِنْ كُلِّ كَرْبٍ ثُمَّ اَنْتُمْ تُشْرِكُوْنَ ۟

ಹೇಳಿರಿ: “ಅದರಿಂದ ಮತ್ತು ಇತರೆಲ್ಲಾ ಅನಾಹುತಗಳಿಂದ ಅಲ್ಲಾಹನೇ ನಿಮ್ಮನ್ನು ಪಾರು ಮಾಡುತ್ತಾನೆ. ಅದರ ಬಳಿಕವೂ ನೀವು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತೀರಿ.” info
التفاسير:

external-link copy
65 : 6

قُلْ هُوَ الْقَادِرُ عَلٰۤی اَنْ یَّبْعَثَ عَلَیْكُمْ عَذَابًا مِّنْ فَوْقِكُمْ اَوْ مِنْ تَحْتِ اَرْجُلِكُمْ اَوْ یَلْبِسَكُمْ شِیَعًا وَّیُذِیْقَ بَعْضَكُمْ بَاْسَ بَعْضٍ ؕ— اُنْظُرْ كَیْفَ نُصَرِّفُ الْاٰیٰتِ لَعَلَّهُمْ یَفْقَهُوْنَ ۟

ಹೇಳಿರಿ: “ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲುಗಳ ಅಡಿಭಾಗದಿಂದ ನಿಮಗೆ ಶಿಕ್ಷೆಯನ್ನು ಕಳುಹಿಸಲು, ಅಥವಾ ನಿಮ್ಮನ್ನು ವಿಭಿನ್ನ ಪಂಗಡಗಳನ್ನಾಗಿ ಮಾಡಿ ಗೊಂದಲಗೊಳಿಸಿ, ನೀವು ಪರಸ್ಪರ ಹಿಂಸೆ ಅನುಭವಿಸುವಂತೆ ಮಾಡಲು ಅವನಿಗೆ ಸಾಮರ್ಥ್ಯವಿದೆ.” ನಾವು ಹೇಗೆ ವಚನಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ಅವರು ಅರ್ಥಮಾಡಿಕೊಳ್ಳುವುದಕ್ಕಾಗಿ. info
التفاسير:

external-link copy
66 : 6

وَكَذَّبَ بِهٖ قَوْمُكَ وَهُوَ الْحَقُّ ؕ— قُلْ لَّسْتُ عَلَیْكُمْ بِوَكِیْلٍ ۟ؕ

ಇದು ಸತ್ಯವಾಗಿದ್ದೂ ಸಹ ನಿಮ್ಮ ಜನರು ಇದನ್ನು ನಿಷೇಧಿಸಿದ್ದಾರೆ. ಹೇಳಿರಿ: “ನಾನು ನಿಮ್ಮ ಮೇಲ್ನೋಟ ವಹಿಸುವವನಲ್ಲ.” info
التفاسير:

external-link copy
67 : 6

لِكُلِّ نَبَاٍ مُّسْتَقَرٌّ ؗ— وَّسَوْفَ تَعْلَمُوْنَ ۟

ಪ್ರತಿಯೊಂದು ಘಟನೆಗೂ ಒಂದು ನಿಶ್ಚಿತ ಸಮಯವಿದೆ. ನೀವು ಸದ್ಯವೇ ತಿಳಿಯುವಿರಿ. info
التفاسير:

external-link copy
68 : 6

وَاِذَا رَاَیْتَ الَّذِیْنَ یَخُوْضُوْنَ فِیْۤ اٰیٰتِنَا فَاَعْرِضْ عَنْهُمْ حَتّٰی یَخُوْضُوْا فِیْ حَدِیْثٍ غَیْرِهٖ ؕ— وَاِمَّا یُنْسِیَنَّكَ الشَّیْطٰنُ فَلَا تَقْعُدْ بَعْدَ الذِّكْرٰی مَعَ الْقَوْمِ الظّٰلِمِیْنَ ۟

ಜನರು ಅಲ್ಲಾಹನ ವಚನಗಳ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುವುದನ್ನು ಕಂಡರೆ, ಅವರು ಬೇರೆ ವಿಷಯಕ್ಕೆ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ. ಶೈತಾನನು ನಿಮಗೆ ಮರೆಯುವಂತೆ ಮಾಡಿದರೆ ನೆನಪಾದ ನಂತರ ಅಕ್ರಮವೆಸಗುವ ಆ ಜನರೊಡನೆ ಕುಳಿತುಕೊಳ್ಳಬೇಡಿ. info
التفاسير: