قرآن کریم کے معانی کا ترجمہ - کنڑ ترجمہ - حمزہ بتور

صفحہ نمبر:close

external-link copy
19 : 6

قُلْ اَیُّ شَیْءٍ اَكْبَرُ شَهَادَةً ؕ— قُلِ اللّٰهُ ۫— شَهِیْدٌۢ بَیْنِیْ وَبَیْنَكُمْ ۫— وَاُوْحِیَ اِلَیَّ هٰذَا الْقُرْاٰنُ لِاُنْذِرَكُمْ بِهٖ وَمَنْ بَلَغَ ؕ— اَىِٕنَّكُمْ لَتَشْهَدُوْنَ اَنَّ مَعَ اللّٰهِ اٰلِهَةً اُخْرٰی ؕ— قُلْ لَّاۤ اَشْهَدُ ۚ— قُلْ اِنَّمَا هُوَ اِلٰهٌ وَّاحِدٌ وَّاِنَّنِیْ بَرِیْٓءٌ مِّمَّا تُشْرِكُوْنَ ۟ۘ

ಕೇಳಿರಿ: “ಅತಿದೊಡ್ಡ ಸಾಕ್ಷ್ಯ ಯಾವುದು?” ಹೇಳಿರಿ: “ಅಲ್ಲಾಹು ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿದ್ದಾನೆ. ಈ ಕುರ್‌ಆನಿನ ಮೂಲಕ ನಿಮಗೆ ಮತ್ತು ಇದು ತಲುಪುವ ಎಲ್ಲರಿಗೂ ಮುನ್ನೆಚ್ಚರಿಕೆ ನೀಡಲು ನನಗೆ ಈ ಕುರ್‌ಆನನ್ನು ದೇವವಾಣಿಯಾಗಿ ನೀಡಲಾಗಿದೆ. ಅಲ್ಲಾಹನೊಂದಿಗೆ ಬೇರೆ ದೇವರಿದ್ದಾರೆಂದು ನೀವು ನಿಜವಾಗಿಯೂ ಸಾಕ್ಷಿವಹಿಸುತ್ತೀರಾ?” ಹೇಳಿರಿ: “ನಾನು ಸಾಕ್ಷಿವಹಿಸುವುದಿಲ್ಲ.” ಹೇಳಿರಿ: “ಅವನು ಏಕೈಕ ದೇವನು. ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.” info
التفاسير:

external-link copy
20 : 6

اَلَّذِیْنَ اٰتَیْنٰهُمُ الْكِتٰبَ یَعْرِفُوْنَهٗ كَمَا یَعْرِفُوْنَ اَبْنَآءَهُمْ ۘ— اَلَّذِیْنَ خَسِرُوْۤا اَنْفُسَهُمْ فَهُمْ لَا یُؤْمِنُوْنَ ۟۠

ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು (ಯಹೂದಿಗಳು ಮತ್ತು ಕ್ರೈಸ್ತರು) ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅದನ್ನು (ಕುರ್‌ಆನನ್ನು) ಗುರುತಿಸುತ್ತಾರೆ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ. info
التفاسير:

external-link copy
21 : 6

وَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ كَذَّبَ بِاٰیٰتِهٖ ؕ— اِنَّهٗ لَا یُفْلِحُ الظّٰلِمُوْنَ ۟

ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ. info
التفاسير:

external-link copy
22 : 6

وَیَوْمَ نَحْشُرُهُمْ جَمِیْعًا ثُمَّ نَقُوْلُ لِلَّذِیْنَ اَشْرَكُوْۤا اَیْنَ شُرَكَآؤُكُمُ الَّذِیْنَ كُنْتُمْ تَزْعُمُوْنَ ۟

ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಸಹಭಾಗಿತ್ವ (ಶಿರ್ಕ್) ಮಾಡಿದವರೊಡನೆ ಕೇಳುವೆವು: “ನೀವು (ನಿಮ್ಮ ದೇವರುಗಳೆಂದು) ವಾದಿಸುತ್ತಿದ್ದ ಆ ಸಹಭಾಗಿಗಳು ಎಲ್ಲಿದ್ದಾರೆ?” info
التفاسير:

external-link copy
23 : 6

ثُمَّ لَمْ تَكُنْ فِتْنَتُهُمْ اِلَّاۤ اَنْ قَالُوْا وَاللّٰهِ رَبِّنَا مَا كُنَّا مُشْرِكِیْنَ ۟

ನಂತರ ಅವರ ಸಹಭಾಗಿತ್ವದ (ಶಿರ್ಕ್‌ನ) ಪರಿಣಾಮವು, “ನಮ್ಮ ಪರಿಪಾಲಕನಾದ ಅಲ್ಲಾಹನ ಮೇಲಾಣೆ! ನಿಶ್ಚಯವಾಗಿಯೂ ನಾವು ಸಹಭಾಗಿತ್ವ (ಶಿರ್ಕ್) ಮಾಡಿಲ್ಲ” ಎಂದು ಹೇಳುವುದರ ಹೊರತು ಇನ್ನೇನೂ ಆಗಿರುವುದಿಲ್ಲ. info
التفاسير:

external-link copy
24 : 6

اُنْظُرْ كَیْفَ كَذَبُوْا عَلٰۤی اَنْفُسِهِمْ وَضَلَّ عَنْهُمْ مَّا كَانُوْا یَفْتَرُوْنَ ۟

ಅವರು ಅವರ ಬಗ್ಗೆಯೇ ಹೇಗೆ ಸುಳ್ಳು ಹೇಳುತ್ತಿದ್ದಾರೆಂದು ನೋಡಿ. ಅವರು (ಅಲ್ಲಾಹನ ಸಹಭಾಗಿಗಳೆಂದು) ಆರೋಪಿಸುತ್ತಿದ್ದ ದೇವರುಗಳೆಲ್ಲವೂ ಅವರನ್ನು ಬಿಟ್ಟು ಮರೆಯಾಗಿ ಹೋದವು. info
التفاسير:

external-link copy
25 : 6

وَمِنْهُمْ مَّنْ یَّسْتَمِعُ اِلَیْكَ ۚ— وَجَعَلْنَا عَلٰی قُلُوْبِهِمْ اَكِنَّةً اَنْ یَّفْقَهُوْهُ وَفِیْۤ اٰذَانِهِمْ وَقْرًا ؕ— وَاِنْ یَّرَوْا كُلَّ اٰیَةٍ لَّا یُؤْمِنُوْا بِهَا ؕ— حَتّٰۤی اِذَا جَآءُوْكَ یُجَادِلُوْنَكَ یَقُوْلُ الَّذِیْنَ كَفَرُوْۤا اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟

ಅವರಲ್ಲಿ ಕೆಲವರು ನೀವು (ಕುರ್‌ಆನ್ ಪಠಿಸುವುದನ್ನು) ಕಿವಿಗೊಟ್ಟು ಕೇಳುತ್ತಾರೆ. ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳ ಮೇಲೆ ಪರದೆಗಳನ್ನು ಮತ್ತು ಅವರ ಕಿವಿಗಳಿಗೆ ಕಿವುಡುತನವನ್ನು ಹಾಕಿದ್ದೇವೆ. ಅವರು ಎಲ್ಲಾ ರೀತಿಯ ದೃಷ್ಟಾಂತಗಳನ್ನು ನೋಡಿದರೂ ವಿಶ್ವಾಸವಿಡುವುದಿಲ್ಲ. ಎಲ್ಲಿಯವರೆಗೆಂದರೆ ಅವರು ತಮ್ಮ ಬಳಿಗೆ ತರ್ಕಿಸುವುದಕ್ಕಾಗಿ ಬಂದರೆ, ಆ ಸತ್ಯನಿಷೇಧಿಗಳು ಹೇಳುತ್ತಾರೆ: “ಇದು ಪುರಾತನ ಕಾಲದ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.” info
التفاسير:

external-link copy
26 : 6

وَهُمْ یَنْهَوْنَ عَنْهُ وَیَنْـَٔوْنَ عَنْهُ ۚ— وَاِنْ یُّهْلِكُوْنَ اِلَّاۤ اَنْفُسَهُمْ وَمَا یَشْعُرُوْنَ ۟

ಅವರು ಆ ಸತ್ಯದಿಂದ ಜನರನ್ನು ತಡೆಯುವುದಲ್ಲದೆ, ಸ್ವಯಂ ಅದರಿಂದ ದೂರವಾಗುತ್ತಿದ್ದಾರೆ. ಅವರು ಸ್ವಯಂ ಅವರನ್ನೇ ನಾಶ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. info
التفاسير:

external-link copy
27 : 6

وَلَوْ تَرٰۤی اِذْ وُقِفُوْا عَلَی النَّارِ فَقَالُوْا یٰلَیْتَنَا نُرَدُّ وَلَا نُكَذِّبَ بِاٰیٰتِ رَبِّنَا وَنَكُوْنَ مِنَ الْمُؤْمِنِیْنَ ۟

ಅವರನ್ನು ನರಕದ ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡಿದ್ದರೆ! ಅವರು ಹೇಳುವರು: “ನಮ್ಮನ್ನು ಪುನಃ ಭೂಲೋಕಕ್ಕೆ ಕಳುಹಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಹಾಗೇನಾದರೂ ಕಳುಹಿಸಿದರೆ, ನಾವು ನಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಖಂಡಿತ ನಿಷೇಧಿಸುವುದಿಲ್ಲ; ಮತ್ತು ನಾವು ಖಂಡಿತ ಸತ್ಯವಿಶ್ವಾಸಿಗಳೊಡನೆ ಸೇರುವೆವು.” info
التفاسير: