قرآن کریم کے معانی کا ترجمہ - کنڑ ترجمہ - بشیر ميسوری

صفحہ نمبر:close

external-link copy
38 : 2

قُلْنَا اهْبِطُوْا مِنْهَا جَمِیْعًا ۚ— فَاِمَّا یَاْتِیَنَّكُمْ مِّنِّیْ هُدًی فَمَنْ تَبِعَ هُدَایَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟

ನಾವು ಹೇಳಿದೆವು; ನೀವೆಲ್ಲರು ಇಲ್ಲಿಂದ ಇಳಿದು ಹೋಗಿರಿ. ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನ ಬಂದಾಗ ಅದನ್ನು ಯಾರು ಅನುಸರಿಸುತ್ತಾರೋ, ಅವರಿಗೆ ಯಾವುದೇ ಭಯ ಮತ್ತು ವ್ಯಥೆ ಇರಲಾರದು. info
التفاسير:

external-link copy
39 : 2

وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟۠

ಮತ್ತು ಯಾರು ಸತ್ಯ ನಿಷೇಧಿಸಿ ನಮ್ಮ “ಆಯತ್ (ದುಷ್ಟಾಂತಗಳನ್ನು) ಗಳನ್ನು ಸುಳ್ಳಾಗಿಸಿದರೋ, ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು info
التفاسير:

external-link copy
40 : 2

یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَوْفُوْا بِعَهْدِیْۤ اُوْفِ بِعَهْدِكُمْ ۚ— وَاِیَّایَ فَارْهَبُوْنِ ۟

ಓ ಇಸ್ರಾಯೀಲ್ ಸಂತತಿಗಳೇ, ನಾನು (ಅಲ್ಲಾಹ್) ನಿಮ್ಮ ಮೇಲೆ ಅನುಗ್ರಹಿಸಿರುವಂತಹ ನನ್ನ ಅನುಗ್ರಹವನ್ನು ನೀವು ಸ್ಮರಿಸಿರಿ ಹಾಗೂ ನನ್ನೊಂದಿಗೆ ಮಾಡಿರುವ ಒಪ್ಪಂದವನ್ನು ಪೂರೈಸಿರಿ. ನಿಮ್ಮ ಜೊತೆ ಮಾಡಿರುವ ಒಪ್ಪಂದವನ್ನು ನಾನು ಪೂರೈಸುವೆನು ಮತ್ತು ನನ್ನನ್ನು ಮಾತ್ರ ನೀವು ಭಯಪಡಿರಿ. info
التفاسير:

external-link copy
41 : 2

وَاٰمِنُوْا بِمَاۤ اَنْزَلْتُ مُصَدِّقًا لِّمَا مَعَكُمْ وَلَا تَكُوْنُوْۤا اَوَّلَ كَافِرٍ بِهٖ ۪— وَلَا تَشْتَرُوْا بِاٰیٰتِیْ ثَمَنًا قَلِیْلًا ؗ— وَّاِیَّایَ فَاتَّقُوْنِ ۟

ನಾನು ನಿಮ್ಮ ಬಳಿ ಇರುವ ಗ್ರಂಥಗಳನ್ನು ದೃಢೀಕರಿಸುವಂತದ್ದಾಗಿ (ಮಹಮ್ಮದ್(ಸ) ಪೈಗಂಬರರಿಗೆ) ಅವತೀರ್ಣಗೊಳಿಸಿರುವ ಈ ಗ್ರಂಥದಲ್ಲಿ (ಕುರ್‌ಆನಿನಲ್ಲಿ) ನೀವು ವಿಶ್ವಾಸವಿಡಿರಿ. ನೀವು ಅದನ್ನು ಧಿಕ್ಕರಿಸುವವರಲ್ಲಿ ಮೊದಲಿಗರಾಗಬೇಡಿರಿ. ಮತ್ತು ನನ್ನ ಸೂಕ್ತಿಗಳನ್ನು ತುಚ್ಛ ಬೆಲೆಗೆ ಮಾರಬೇಡಿರಿ ಮತ್ತು ನನ್ನನ್ನು (ಅಲ್ಲಾಹನನ್ನು) ಮಾತ್ರ ಭಯಪಡಿರಿ. info
التفاسير:

external-link copy
42 : 2

وَلَا تَلْبِسُوا الْحَقَّ بِالْبَاطِلِ وَتَكْتُمُوا الْحَقَّ وَاَنْتُمْ تَعْلَمُوْنَ ۟

ನೀವು ಸತ್ಯವನ್ನು ಮಿಥ್ಯದೊಂದಿಗೆ ಬೆರಸದಿರಿ ಮತ್ತು ಅರಿತವರಾಗಿದ್ದೂ ಸತ್ಯವನ್ನು (ವಾಸ್ತವಿಕತೆಯನ್ನು) ಮರೆಮಾಚದಿರಿ. info
التفاسير:

external-link copy
43 : 2

وَاَقِیْمُوا الصَّلٰوةَ وَاٰتُوا الزَّكٰوةَ وَارْكَعُوْا مَعَ الرّٰكِعِیْنَ ۟

ನೀವು ನಮಾಜನ್ನು ಸಂಸ್ಥಾಪಿಸಿರಿ ಹಾಗೂ ಝಕಾತ್ (ಕಡ್ಡಾಯ ಧನ) ಪಾವತಿಸಿರಿ ಮತ್ತು ಬಾಗುವವರೊಂದಿಗೆ ನೀವೂ ಬಾಗಿರಿ. info
التفاسير:

external-link copy
44 : 2

اَتَاْمُرُوْنَ النَّاسَ بِالْبِرِّ وَتَنْسَوْنَ اَنْفُسَكُمْ وَاَنْتُمْ تَتْلُوْنَ الْكِتٰبَ ؕ— اَفَلَا تَعْقِلُوْنَ ۟

ನೀವು ಜನರಿಗೆ ಒಳಿತನ್ನು ಆದೇಶಿಸುತ್ತಾ ಸ್ವತಃ ನಿಮ್ಮನ್ನೇ ಮರೆತು ಬಿಡುತ್ತೀರಾ? ನೀವು ಗ್ರಂಥವನ್ನು ಪಠಿಸುವವರಾಗಿದ್ದೂ ಯೋಚಿಸುವುದಿಲ್ಲವೇ?. info
التفاسير:

external-link copy
45 : 2

وَاسْتَعِیْنُوْا بِالصَّبْرِ وَالصَّلٰوةِ ؕ— وَاِنَّهَا لَكَبِیْرَةٌ اِلَّا عَلَی الْخٰشِعِیْنَ ۟ۙ

ಸಹನೆ ಮತ್ತು ನಮಾಜ್‌ನ ಮೂಲಕ (ಅಲ್ಲಾಹ ನೊಂದಿಗೆ) ಸಹಾಯ ಯಾಚಿಸಿರಿ. ಇದು ಭಯಭಕ್ತಿ ಹೊಂದಿದವರ ಹೊರತು ಇತರರಿಗೆ ಪ್ರಯಾಸಕರ ವಾಗಿರುತ್ತದೆ. info
التفاسير:

external-link copy
46 : 2

الَّذِیْنَ یَظُنُّوْنَ اَنَّهُمْ مُّلٰقُوْا رَبِّهِمْ وَاَنَّهُمْ اِلَیْهِ رٰجِعُوْنَ ۟۠

ಅವರು ತಮ್ಮ ಪ್ರಭುವನ್ನು ಭೇಟಿಯಾಗಲಿರುವೆವೆಂದೂ ಮತ್ತು ಖಂಡಿತವಾಗಿ ಅವನೆಡೆಗೆ ಮರಳಿ ಹೋಗುವವರೆಂದೂ ಅರಿತವರಾಗಿದ್ದಾರೆ. info
التفاسير:

external-link copy
47 : 2

یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَنِّیْ فَضَّلْتُكُمْ عَلَی الْعٰلَمِیْنَ ۟

ಓ ಇಸ್ರಾಯೀಲ್ ಸಂತತಿಗಳೇ, ನಾನು (ಅಲ್ಲಾಹ್) ನಿಮ್ಮ ಮೇಲೆ ಅನುಗ್ರಹಿಸಿದ್ದ ನನ್ನ ಅನುಗ್ರಹವನ್ನು ಮತ್ತು ನಾನು ನಿಮ್ಮನ್ನು ಸರ್ವಲೋಕದವರ ಮೇಲೆ ಶ್ರೇಷ್ಠತೆ ದಯಪಾಲಿಸಿದುದನ್ನು ಸ್ಮರಿಸಿರಿ. info
التفاسير:

external-link copy
48 : 2

وَاتَّقُوْا یَوْمًا لَّا تَجْزِیْ نَفْسٌ عَنْ نَّفْسٍ شَیْـًٔا وَّلَا یُقْبَلُ مِنْهَا شَفَاعَةٌ وَّلَا یُؤْخَذُ مِنْهَا عَدْلٌ وَّلَا هُمْ یُنْصَرُوْنَ ۟

ಮತ್ತು ಯಾವೊಬ್ಬ ವ್ಯಕ್ತಿಯು ಇನ್ನಾವುದೇ ವ್ಯಕ್ತಿಗೆ ಯಾವ ಪ್ರಯೋಜನಕ್ಕೂ ಬಾರದ, ಯಾವೊಬ್ಬನಿಂದ ಶಿಫಾರಸ್ಸು ಸ್ವೀರಿಸಲಾಗದ, ಯಾವೊಬ್ಬನಿಂದ (ಮುಕ್ತಿ ಪಡೆಯಲು) ಪರಿಹಾರಧನವನ್ನು ಪಡೆಯಲಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಸಹಾಯ ನೀಡಲಾಗದ ಆ ಒಂದು ದಿನವನ್ನು ಭಯಪಡಿರಿ. info
التفاسير: