قرآن کریم کے معانی کا ترجمہ - کنڑ ترجمہ - بشیر ميسوری

صفحہ نمبر:close

external-link copy
89 : 2

وَلَمَّا جَآءَهُمْ كِتٰبٌ مِّنْ عِنْدِ اللّٰهِ مُصَدِّقٌ لِّمَا مَعَهُمْ ۙ— وَكَانُوْا مِنْ قَبْلُ یَسْتَفْتِحُوْنَ عَلَی الَّذِیْنَ كَفَرُوْا ۚ— فَلَمَّا جَآءَهُمْ مَّا عَرَفُوْا كَفَرُوْا بِهٖ ؗ— فَلَعْنَةُ اللّٰهِ عَلَی الْكٰفِرِیْنَ ۟

ಅವರ ಬಳಿಯಿರುವ ಗ್ರಂಥವನ್ನು (ತೌರಾತ್) ಸತ್ಯವೆಂದು ದೃಢೀಕರಿಸುವ ಗ್ರಂಥವು (ಕುರ್‌ಆನ್) ಅಲ್ಲಾಹನ ವತಿಯಿಂದ ಅವರ ಬಳಿಗೆ ಬಂದಾಗ, (ಅವರು ಅದನ್ನು ನಿರಾಕರಿಸಿಬಿಟ್ಟರು) ಅವರಾದರೂ ಇದಕ್ಕೆ ಮೊದಲು (ಈ ಗ್ರಂಥದ ಮೂಲಕ) ಸತ್ಯನಿಷೇಧಿಸಿದವರ ವಿರುದ್ಧ ವಿಜಯಕ್ಕಾಗಿ ಹಾತೊರೆಯುತ್ತಿದ್ದರು. ಹಾಗೆÀಯೇ ಅವರು ಅರಿತುಕೊಂಡಿದ್ದ ಗ್ರಂಥವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿ ಬಿಟ್ಟರು. ಸತ್ಯನಿಷೇಧಿಗಳ ಮೇಲೆ ಅಲ್ಲಾಹನ ಶಾಪವಿರಲಿ. info
التفاسير:

external-link copy
90 : 2

بِئْسَمَا اشْتَرَوْا بِهٖۤ اَنْفُسَهُمْ اَنْ یَّكْفُرُوْا بِمَاۤ اَنْزَلَ اللّٰهُ بَغْیًا اَنْ یُّنَزِّلَ اللّٰهُ مِنْ فَضْلِهٖ عَلٰی مَنْ یَّشَآءُ مِنْ عِبَادِهٖ ۚ— فَبَآءُوْ بِغَضَبٍ عَلٰی غَضَبٍ ؕ— وَلِلْكٰفِرِیْنَ عَذَابٌ مُّهِیْنٌ ۟

ಎಷ್ಟೊಂದು ಕೆಟ್ಟವಸ್ತುವಿಗಾಗಿ ಅವರು ತಮ್ಮನ್ನು ಮಾರಿಕೊಂಡಿದ್ದಾರೆ. ಅಲ್ಲಾಹನು ತನ್ನ ಅನುಗ್ರಹವನ್ನು ತಾನಿಚ್ಚಿಸಿದ ದಾಸನ ಮೇಲೆ ಅವತೀರ್ಣಗೊಳಿಸಿದನು ಎಂಬ ಅಸೂಯೆಯಿಂದ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನು ಧಿಕ್ಕರಿಸಿಬಿಟ್ಟಿದ್ದಾರೆ. ಆದುದರಿಂದ ಅವರು (ಯಹೂದಿಗಳು)ಕ್ರೋಧದ ಮೇಲೆ ಇನ್ನಷ್ಟು ಕ್ರೋಧಕ್ಕೆ ಪಾತ್ರರಾದರು ಮತ್ತು ಸತ್ಯನಿಷೇಧಿಗಳಿಗೆ ಅಪಮಾನಕರ ಯಾತನೆಯಿದೆ. info
التفاسير:

external-link copy
91 : 2

وَاِذَا قِیْلَ لَهُمْ اٰمِنُوْا بِمَاۤ اَنْزَلَ اللّٰهُ قَالُوْا نُؤْمِنُ بِمَاۤ اُنْزِلَ عَلَیْنَا وَیَكْفُرُوْنَ بِمَا وَرَآءَهٗ ۗ— وَهُوَ الْحَقُّ مُصَدِّقًا لِّمَا مَعَهُمْ ؕ— قُلْ فَلِمَ تَقْتُلُوْنَ اَنْۢبِیَآءَ اللّٰهِ مِنْ قَبْلُ اِنْ كُنْتُمْ مُّؤْمِنِیْنَ ۟

ಮತ್ತು ಅವರಿಗೆ ನೀವು ಅಲ್ಲಾಹನ ವತಿಯಿಂದ ಅವತೀರ್ಣಗೊಳಿಸಲಾದ ಈ ಗ್ರಂಥದಲ್ಲಿ (ಕುರ್‌ಆನ್‌ನಲ್ಲಿ) ವಿಶ್ವಾಸಿರಿಸಿರಿ ಎಂದು ಹೇಳಲಾದಾಗ ನಮ್ಮ ಮೇಲೆ ಅವತೀರ್ಣಗೊಂಡ ಗ್ರಂಥದಲ್ಲಿ (ತೌರಾತ್‌ನಲ್ಲಿ) ನಾವು ವಿಶ್ವಾಸವಿರಿಸಿರುತ್ತೇವೆ ಎಂದು ಅವರು ಹೇಳುತ್ತಾರೆ. ಅವರು ಅದರ ನಂತರ ಬಂದಿರುವುದನ್ನು ನಿಷೇಧಿಸುತ್ತಾರೆ. ವಸ್ತುತಃ ಅದು (ಕುರ್‌ಆನ್) ಸತ್ಯವಾಗಿದೆ ಅದು ಅವರಬಳಿ ಇರುವ ಗ್ರಂಥವನ್ನು (ತೌರಾತನ್ನು) ದೃಢೀಕರಿಸುತ್ತದೆ. ಅವರಿಗೆ ಕೇಳಿರಿ ನೀವು ತಮ್ಮ ಗ್ರಂಥಗಳ ಮೇಲೆ ವಿಶ್ವಾಸವಿಡುವವರಾಗಿದ್ದರೆ ಅಲ್ಲಾಹನ ಗತ ಪೈಗಂಬರರನ್ನು ಏಕೆ ವಧಿಸುತ್ತಿದ್ದೀರಿ? info
التفاسير:

external-link copy
92 : 2

وَلَقَدْ جَآءَكُمْ مُّوْسٰی بِالْبَیِّنٰتِ ثُمَّ اتَّخَذْتُمُ الْعِجْلَ مِنْ بَعْدِهٖ وَاَنْتُمْ ظٰلِمُوْنَ ۟

ವಸ್ತುತಃ ಸುಸ್ಪಷ್ಟ ಪುರಾವೆಗಳೊಂದಿಗೆ ಮೂಸಾ(ಅ) ನಿಮ್ಮ ಬಳಿಗೆ ಬಂದಿದ್ದರು. ಅದರ ತರುವಾಯ ಕರುವನ್ನು ಆರಾಧಿಸಿ ನೀವೆ ಅಕ್ರಮಿಗಳಾಗಿದ್ದೀರಿ. info
التفاسير:

external-link copy
93 : 2

وَاِذْ اَخَذْنَا مِیْثَاقَكُمْ وَرَفَعْنَا فَوْقَكُمُ الطُّوْرَ ؕ— خُذُوْا مَاۤ اٰتَیْنٰكُمْ بِقُوَّةٍ وَّاسْمَعُوْا ؕ— قَالُوْا سَمِعْنَا وَعَصَیْنَا ۗ— وَاُشْرِبُوْا فِیْ قُلُوْبِهِمُ الْعِجْلَ بِكُفْرِهِمْ ؕ— قُلْ بِئْسَمَا یَاْمُرُكُمْ بِهٖۤ اِیْمَانُكُمْ اِنْ كُنْتُمْ مُّؤْمِنِیْنَ ۟

ನಾವು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿ ಹಿಡಿದು ನಿಮ್ಮಿಂದ ದೃಢ ಕರಾರನ್ನು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಆಗ ನಾವು ನಿಮಗೆ ನೀಡಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಹಾಗೂ ಆಲಿಸಿರಿ ಎಂದು ಹೇಳಿದೆವು. ಅವರು (ಯಹೂದಿಯರು) ಹೇಳಿದರು; ನಾವು ಆಲಿಸಿದೆವು ಹಾಗೂ ಧಿಕ್ಕರಿಸಿದೆವು. ಅವರ ಸತ್ಯ ನಿಷೇಧದ ಫಲವಾಗಿ ಅವರ ಹೃದಯಗಳಲ್ಲಿ ಕರುವಿನ ಪ್ರೇಮವನ್ನು (ಅಕ್ಷರಶಃ)ಕುಡಿಸಲಾಗಿದೆ. ಹೇಳಿರಿ, ನೀವು ವಿಶ್ವಾಸಿಗಳಾಗಿದ್ದರೆ ನಿಮ್ಮ ಆ ವಿಶ್ವಾಸವು ನಿಮಗೆ ಆದೇಶಿಸುತ್ತಿರುವುದು ಎಷ್ಟೋ ನಿಕೃಷ್ಟವಾಗಿದೆ. info
التفاسير: