قرآن کریم کے معانی کا ترجمہ - کنڑ ترجمہ - بشیر ميسوری

صفحہ نمبر:close

external-link copy
29 : 11

وَیٰقَوْمِ لَاۤ اَسْـَٔلُكُمْ عَلَیْهِ مَالًا ؕ— اِنْ اَجْرِیَ اِلَّا عَلَی اللّٰهِ وَمَاۤ اَنَا بِطَارِدِ الَّذِیْنَ اٰمَنُوْا ؕ— اِنَّهُمْ مُّلٰقُوْا رَبِّهِمْ وَلٰكِنِّیْۤ اَرٰىكُمْ قَوْمًا تَجْهَلُوْنَ ۟

ಓ ನನ್ನ ಜನಾಂಗದವರೇ ನಾನು ಇದಕ್ಕಾಗಿ ನಿಮ್ಮಿಂದ ಧನವನ್ನೇನೂ ಬೇಡುತ್ತಿಲ್ಲ, ನನ್ನ ಪ್ರತಿಫಲವಂತೂ ಕೇವಲ ಅಲ್ಲಾಹನ ಬಳಿಯಲ್ಲಿದೆ ಮತ್ತು ನಾನು ಸತ್ಯ ವಿಶ್ವಾಸಿಗಳನ್ನು ನನ್ನ ಬಳಿಯಿಂದ ದೂರಕ್ಕಟ್ಟುವುದೂ ಇಲ್ಲ. ಅವರಿಗೆ ತಮ್ಮ ಪ್ರಭುವನ್ನು ಭೇಟಿಯಾಗಲಿಕ್ಕಿದೆ, ಆದರೆ ನಾನು ನಿಮ್ಮನ್ನು ಅವಿವೇಕ ತೋರುತ್ತಿರುವುದಾಗಿ ಕಾಣುತ್ತಿದ್ದೇನೆ. info
التفاسير:

external-link copy
30 : 11

وَیٰقَوْمِ مَنْ یَّنْصُرُنِیْ مِنَ اللّٰهِ اِنْ طَرَدْتُّهُمْ ؕ— اَفَلَا تَذَكَّرُوْنَ ۟

ಓ ನನ್ನ ಜನಾಂಗದವರೇ ನಾನವರನ್ನು (ಸತ್ಯವಿಶ್ವಾಸಿಗಳನ್ನು) ನನ್ನ ಬಳಿಯಿಂದ ದೂರಕ್ಕಟ್ಟಿದರೆ ಅಲ್ಲಾಹನ ಎದುರು ನನಗೆ ಸಹಾಯ ಮಾಡುವವರಾರು ? ಹಾಗಿದ್ದೂ ನೀವು ಯೋಚಿಸುವುದಿಲ್ಲವೇ? info
التفاسير:

external-link copy
31 : 11

وَلَاۤ اَقُوْلُ لَكُمْ عِنْدِیْ خَزَآىِٕنُ اللّٰهِ وَلَاۤ اَعْلَمُ الْغَیْبَ وَلَاۤ اَقُوْلُ اِنِّیْ مَلَكٌ وَّلَاۤ اَقُوْلُ لِلَّذِیْنَ تَزْدَرِیْۤ اَعْیُنُكُمْ لَنْ یُّؤْتِیَهُمُ اللّٰهُ خَیْرًا ؕ— اَللّٰهُ اَعْلَمُ بِمَا فِیْۤ اَنْفُسِهِمْ ۖۚ— اِنِّیْۤ اِذًا لَّمِنَ الظّٰلِمِیْنَ ۟

ನಾನು ನನ್ನ ಬಳಿ ಅಲ್ಲಾಹನ ಭಂಡಾರಗಳಿವೆಯೆAದು, ನಾನು ಅಗೋಚರ ಜ್ಞಾನವನ್ನು ಹೊಂದಿದ್ದೇನೆAದು ಹೇಳುತ್ತಿಲ್ಲ. ನಾನೊಬ್ಬ ದೇವಚರನೆಂದೂ ಹೇಳುತ್ತಿಲ್ಲ, ಮತ್ತು ನಿಮ್ಮ ದೃಷ್ಟಿಗೆ ಕೀಳಾಗಿ ಕಾಣುತ್ತಿರುವವರಿಗೆ ಅಲ್ಲಾಹನು ಯಾವುದೇ ಒಳಿತನ್ನು ನೀಡಲಾರೆನೆಂದೂ ನಾನು ಹೇಳುತ್ತಿಲ್ಲ. ಅವರ ಮನಸ್ಸಿನಲ್ಲಿರುವುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು ನಾನೇನಾದರೂ ಅಂತಹ ಮಾತನ್ನು ಹೇಳಿದರೆ ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಾಗುವೆನು. info
التفاسير:

external-link copy
32 : 11

قَالُوْا یٰنُوْحُ قَدْ جَادَلْتَنَا فَاَكْثَرْتَ جِدَالَنَا فَاْتِنَا بِمَا تَعِدُنَاۤ اِنْ كُنْتَ مِنَ الصّٰدِقِیْنَ ۟

ಅವರ ಜನಾಂಗದವರು ಹೇಳಿದರು : " ಓ ನೂಹ್ ನೀನು ನಮ್ಮೊಂದಿಗೆ ವಾಗ್ವಾದವನ್ನು ಮಾಡಿರುವೆ ಮತ್ತು ತುಂಬಾ ವಾಗ್ವಾದ ಮಾಡಿರುವೆ. ಇನ್ನು ನಮಗೆ ಹೆದರಿಸುತ್ತಿರುವ ಯಾತನೆಯನ್ನು ನಮ್ಮಲ್ಲಿಗೆ ತಾ, ನೀನು ಸತ್ಯವಂತರಲ್ಲಾಗಿದ್ದರೆ, info
التفاسير:

external-link copy
33 : 11

قَالَ اِنَّمَا یَاْتِیْكُمْ بِهِ اللّٰهُ اِنْ شَآءَ وَمَاۤ اَنْتُمْ بِمُعْجِزِیْنَ ۟

ನೂಹ್‌ರವರು ಉತ್ತರಿಸಿದರು : ಅಲ್ಲಾಹನಿಚ್ಛಿಸಿದರೆ ಅದನ್ನು ನಿಮ್ಮ ಮೇಲೆ ಎರಗಿಸುವನು. ಮತ್ತು ನೀವು ಅವನನ್ನು ಸೋಲಿಸಲಾರಿರಿ. info
التفاسير:

external-link copy
34 : 11

وَلَا یَنْفَعُكُمْ نُصْحِیْۤ اِنْ اَرَدْتُّ اَنْ اَنْصَحَ لَكُمْ اِنْ كَانَ اللّٰهُ یُرِیْدُ اَنْ یُّغْوِیَكُمْ ؕ— هُوَ رَبُّكُمْ ۫— وَاِلَیْهِ تُرْجَعُوْنَ ۟ؕ

ಅಲ್ಲಾಹನು ನಿಮ್ಮ ಸತ್ಯ ನಿಷೇಧದಿಂದಾಗಿ ದಾರಿ ತಪ್ಪಿಸಲಿಚ್ಛಿಸಿರುವಾಗ ನಾನು ನಿಮ್ಮ ಹಿತಚಿಂತನೆ ಮಾಡಿದರು ನಿಮಗೆ ನನ್ನ ಹಿತೋಪದೇಶವು ಒಂದಿಷ್ಟೂ ಫಲ ನೀಡದು, ಅವನೇ ನಿಮ್ಮ ಪ್ರಭು ಆಗಿದ್ದಾನೆ ಮತ್ತು ಅವನೆಡೆಗೆ ಮರಳಿಸಲಾಗುವಿರಿ. info
التفاسير:

external-link copy
35 : 11

اَمْ یَقُوْلُوْنَ افْتَرٰىهُ ؕ— قُلْ اِنِ افْتَرَیْتُهٗ فَعَلَیَّ اِجْرَامِیْ وَاَنَا بَرِیْٓءٌ مِّمَّا تُجْرِمُوْنَ ۟۠

ಇದನ್ನು ಸ್ವಯಂ ಮುಹಮ್ಮದ್‌ರವರೇ ರಚಿಸಿದ್ದಾರೆಂದು ಅವರು ಆರೋಪಿಸುತ್ತಿದ್ದಾರೆಯೇ ? ಹೇಳಿರಿ ನಾನದನ್ನು ರಚಿಸಿದ್ದಾದರೆ ನನ್ನ ಅಪರಾಧವು ನನ್ನ ಮೇಲಿರುತ್ತದೆ, ಮತ್ತು ನೀವು ಎಸಗುತ್ತಿರುವ ಅಪರಾಧಗಳ ವಿಚಾರದಲ್ಲಿ ನಾನು ಹೊಣೆ ಮುಕ್ತನಾಗಿದ್ದೇನೆ. info
التفاسير:

external-link copy
36 : 11

وَاُوْحِیَ اِلٰی نُوْحٍ اَنَّهٗ لَنْ یُّؤْمِنَ مِنْ قَوْمِكَ اِلَّا مَنْ قَدْ اٰمَنَ فَلَا تَبْتَىِٕسْ بِمَا كَانُوْا یَفْعَلُوْنَ ۟ۚ

ಮತ್ತು ನೂಹ್‌ರೆಡೆಗೆ ದಿವ್ಯವಾಣಿ ಮಾಡಲಾಯಿತು; ನಿಮ್ಮ ಜನಾಂಗದಿAದ ಈಗಾಗಲೇ ವಿಶ್ವಾಸ ಸ್ವೀಕರಿಸಿದವರ ಹೊರತು ಇನ್ನಾರೂ ಎಂದಿಗೂ ವಿಶ್ವಾಸವಿರಿಸುವುದಿಲ್ಲ. ಆದ್ದರಿಂದ ನೀವು ಅವರ ಕರ್ಮಗಳ ಕುರಿತು ದುಃಖಿಸಬೇಡಿ. info
التفاسير:

external-link copy
37 : 11

وَاصْنَعِ الْفُلْكَ بِاَعْیُنِنَا وَوَحْیِنَا وَلَا تُخَاطِبْنِیْ فِی الَّذِیْنَ ظَلَمُوْا ۚ— اِنَّهُمْ مُّغْرَقُوْنَ ۟

ಮತ್ತು ನಮ್ಮ ಕಣ್ಣೆದುರು ನಮ್ಮ ಮಾರ್ಗದರ್ಶನದ ಪ್ರಕಾರ ನೀವು ಹಡಗೊಂದನ್ನು ನಿರ್ಮಿಸಿರಿ. ಅಕ್ರಮವೆಸಗಿದವರ ಪರವಾಗಿ ನನ್ನೊಂದಿಗೆ ಮಾತನಾಡಬೇಡಿರಿ ಖಂಡಿತವಾಗಿಯೂ ಅವರು ಮುಳುಗಿಸಲ್ಪಡುವರು. info
التفاسير: