Kur'an-ı Kerim meal tercümesi - Kanadaca Tercüme - Hamza Batur

Sayfa numarası:close

external-link copy
80 : 9

اِسْتَغْفِرْ لَهُمْ اَوْ لَا تَسْتَغْفِرْ لَهُمْ ؕ— اِنْ تَسْتَغْفِرْ لَهُمْ سَبْعِیْنَ مَرَّةً فَلَنْ یَّغْفِرَ اللّٰهُ لَهُمْ ؕ— ذٰلِكَ بِاَنَّهُمْ كَفَرُوْا بِاللّٰهِ وَرَسُوْلِهٖ ؕ— وَاللّٰهُ لَا یَهْدِی الْقَوْمَ الْفٰسِقِیْنَ ۟۠

ನೀವು ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿದರೂ ಅಥವಾ ಕ್ಷಮೆಯಾಚನೆ ಮಾಡದಿದ್ದರೂ, ನೀವು ಅವರಿಗೋಸ್ಕರ ಎಪ್ಪತ್ತು ಸಲ ಕ್ಷಮೆಯಾಚನೆ ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುವುದಿಲ್ಲ. ಅದೇಕೆಂದರೆ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير:

external-link copy
81 : 9

فَرِحَ الْمُخَلَّفُوْنَ بِمَقْعَدِهِمْ خِلٰفَ رَسُوْلِ اللّٰهِ وَكَرِهُوْۤا اَنْ یُّجَاهِدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ وَقَالُوْا لَا تَنْفِرُوْا فِی الْحَرِّ ؕ— قُلْ نَارُ جَهَنَّمَ اَشَدُّ حَرًّا ؕ— لَوْ كَانُوْا یَفْقَهُوْنَ ۟

(ಯುದ್ಧದಿಂದ ತಪ್ಪಿಸಿ) ಹಿಂದೆ ಉಳಿದವರು ಅಲ್ಲಾಹನ ಸಂದೇಶವಾಹಕರು ಯುದ್ಧಕ್ಕೆ ಹೊರಟ ನಂತರ ತಾವು ಹಿಂದೆ ಉಳಿದುದರ ಬಗ್ಗೆ ಸಂತೃಪ್ತರಾಗಿದ್ದಾರೆ. ಅವರು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಇಷ್ಟಪಡಲಿಲ್ಲ. ಅವರು ಹೇಳಿದರು: “ಈ ಉರಿಬಿಸಿಲಿನಲ್ಲಿ ಯುದ್ಧಕ್ಕೆ ಹೋಗಬೇಡಿ.” ಹೇಳಿರಿ: “ನರಕದ ಬೆಂಕಿ ಅದಕ್ಕಿಂತಲೂ ತೀಕ್ಷ್ಣ ಉರಿಯನ್ನು ಹೊಂದಿದೆ.” ಅವರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರೆ! info
التفاسير:

external-link copy
82 : 9

فَلْیَضْحَكُوْا قَلِیْلًا وَّلْیَبْكُوْا كَثِیْرًا ۚ— جَزَآءً بِمَا كَانُوْا یَكْسِبُوْنَ ۟

ಆದ್ದರಿಂದ ಅವರು ಮಾಡಿಟ್ಟ ದುಷ್ಕರ್ಮಗಳ ಫಲವಾಗಿ ಅವರು ಕನಿಷ್ಠ ನಗುತ್ತಿರಲಿ ಮತ್ತು ಗರಿಷ್ಠ ಅಳುತ್ತಿರಲಿ. info
التفاسير:

external-link copy
83 : 9

فَاِنْ رَّجَعَكَ اللّٰهُ اِلٰی طَآىِٕفَةٍ مِّنْهُمْ فَاسْتَاْذَنُوْكَ لِلْخُرُوْجِ فَقُلْ لَّنْ تَخْرُجُوْا مَعِیَ اَبَدًا وَّلَنْ تُقَاتِلُوْا مَعِیَ عَدُوًّا ؕ— اِنَّكُمْ رَضِیْتُمْ بِالْقُعُوْدِ اَوَّلَ مَرَّةٍ فَاقْعُدُوْا مَعَ الْخٰلِفِیْنَ ۟

(ಯುದ್ಧಾನಂತರ) ಅಲ್ಲಾಹು ನಿಮ್ಮನ್ನು (ಸುರಕ್ಷಿತವಾಗಿ) ಅವರಲ್ಲಿನ ಒಂದು ಗುಂಪಿನ ಬಳಿಗೆ ಹಿಂದಿರುಗಿಸಿದರೆ, ಇನ್ನೊಂದು ಯುದ್ಧಕ್ಕೆ ಬರುತ್ತೇವೆಂದು ಅವರು ನಿಮ್ಮಲ್ಲಿ ಅನುಮತಿ ಕೇಳುತ್ತಾರೆ. ಹೇಳಿರಿ: “ನೀವು ಯಾವತ್ತೂ ನನ್ನ ಜೊತೆಗೆ ಬರುವಂತಿಲ್ಲ. ನೀವು ಯಾವತ್ತೂ ನನ್ನ ಜೊತೆಗೂಡಿ ವೈರಿಗಳೊಡನೆ ಯುದ್ಧ ಮಾಡುವಂತಿಲ್ಲ. ನಿಶ್ಚಯವಾಗಿಯೂ ಮೊದಲ ಸಂದರ್ಭದಲ್ಲಿ ನೀವು (ಯುದ್ಧಕ್ಕೆ ಹೋಗದೆ) ಹಿಂದೆ ಉಳಿಯಲು ಇಷ್ಟಪಟ್ಟಿರಿ. ಆದ್ದರಿಂದ ನೀವು ಹಿಂದೆ ಉಳಿದವರೊಂದಿಗೇ ಇದ್ದುಕೊಳ್ಳಿ.” info
التفاسير:

external-link copy
84 : 9

وَلَا تُصَلِّ عَلٰۤی اَحَدٍ مِّنْهُمْ مَّاتَ اَبَدًا وَّلَا تَقُمْ عَلٰی قَبْرِهٖ ؕ— اِنَّهُمْ كَفَرُوْا بِاللّٰهِ وَرَسُوْلِهٖ وَمَاتُوْا وَهُمْ فٰسِقُوْنَ ۟

ಅವರಲ್ಲಿ ಯಾರಾದರೂ ಇಹಲೋಕ ತ್ಯಜಿಸಿದರೆ ಅವನಿಗೆ ಅಂತ್ಯಕ್ರಿಯೆಯ ನಮಾಝ್ ಮಾಡಬೇಡಿ. ಅವನ ಸಮಾಧಿಯ ಬಳಿ ನಿಲ್ಲಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ ಮತ್ತು ಅವಿಧೇಯರಾಗಿಯೇ ಪ್ರಾಣಬಿಟ್ಟಿದ್ದಾರೆ. info
التفاسير:

external-link copy
85 : 9

وَلَا تُعْجِبْكَ اَمْوَالُهُمْ وَاَوْلَادُهُمْ ؕ— اِنَّمَا یُرِیْدُ اللّٰهُ اَنْ یُّعَذِّبَهُمْ بِهَا فِی الدُّنْیَا وَتَزْهَقَ اَنْفُسُهُمْ وَهُمْ كٰفِرُوْنَ ۟

ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣಬಿಡುವಂತಾಗಲು ಬಯಸುತ್ತಾನೆ. info
التفاسير:

external-link copy
86 : 9

وَاِذَاۤ اُنْزِلَتْ سُوْرَةٌ اَنْ اٰمِنُوْا بِاللّٰهِ وَجَاهِدُوْا مَعَ رَسُوْلِهِ اسْتَاْذَنَكَ اُولُوا الطَّوْلِ مِنْهُمْ وَقَالُوْا ذَرْنَا نَكُنْ مَّعَ الْقٰعِدِیْنَ ۟

“ಅಲ್ಲಾಹನಲ್ಲಿ ವಿಶ್ವಾಸವಿಡಿ ಮತ್ತು ಅವನ ಸಂದೇಶವಾಹಕರ ಜೊತೆಗೂಡಿ ಯುದ್ಧ ಮಾಡಿ” ಎಂಬ ಆಜ್ಞೆಯಿರುವ ಒಂದು ಅಧ್ಯಾಯವು ಅವತೀರ್ಣವಾದರೆ, ಅವರಲ್ಲಿನ ಧನಿಕರ ಒಂದು ಗುಂಪು ನಿಮ್ಮ ಬಳಿಗೆ ಬಂದು, “ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ; ನಾವು (ನಮ್ಮ ಮನೆಯಲ್ಲೇ) ಉಳಿಯುತ್ತೇವೆ” ಎಂದು ಹೇಳುತ್ತಾ ನಿಮ್ಮಲ್ಲಿ (ಯುದ್ಧದಿಂದ ತಪ್ಪಿಸಿಕೊಳ್ಳಲು) ಅನುಮತಿ ಕೇಳಿದರು. info
التفاسير: