Salin ng mga Kahulugan ng Marangal na Qur'an - Salin sa Wikang Kanarese ni Hamza Batur

Numero ng Pahina:close

external-link copy
46 : 11

قَالَ یٰنُوْحُ اِنَّهٗ لَیْسَ مِنْ اَهْلِكَ ۚ— اِنَّهٗ عَمَلٌ غَیْرُ صَالِحٍ ۗ— فَلَا تَسْـَٔلْنِ مَا لَیْسَ لَكَ بِهٖ عِلْمٌ ؕ— اِنِّیْۤ اَعِظُكَ اَنْ تَكُوْنَ مِنَ الْجٰهِلِیْنَ ۟

ಅಲ್ಲಾಹು ಹೇಳಿದನು: “ಓ ನೂಹ್! ನಿಶ್ಚಯವಾಗಿಯೂ ಅವನು ನಿಮ್ಮ ಕುಟುಂಬದವನಲ್ಲ. ಅವನ ಕೆಲಸಗಳಲ್ಲಿ ಯಾವುದೇ ಸತ್ಕರ್ಮಗಳಿಲ್ಲ. ನಿಮಗೆ ತಿಳುವಳಿಕೆಯಿಲ್ಲದ ವಿಷಯಗಳ ಬಗ್ಗೆ ನನ್ನಲ್ಲಿ ಪ್ರಶ್ನಿಸಬೇಡಿ. ನೀವು ಅವಿವೇಕಿಗಳಲ್ಲಿ ಸೇರಬಾರದೆಂದು ನಾನು ನಿಮಗೆ ಉಪದೇಶ ನೀಡುತ್ತಿದ್ದೇನೆ.” info
التفاسير:

external-link copy
47 : 11

قَالَ رَبِّ اِنِّیْۤ اَعُوْذُ بِكَ اَنْ اَسْـَٔلَكَ مَا لَیْسَ لِیْ بِهٖ عِلْمٌ ؕ— وَاِلَّا تَغْفِرْ لِیْ وَتَرْحَمْنِیْۤ اَكُنْ مِّنَ الْخٰسِرِیْنَ ۟

ನೂಹ್ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೆ ತಿಳುವಳಿಕೆಯಿಲ್ಲದ ವಿಷಯಗಳ ಬಗ್ಗೆ ನಿನ್ನಲ್ಲಿ ಪ್ರಶ್ನಿಸುವುದರಿಂದ (ನನ್ನನ್ನು ರಕ್ಷಿಸಬೇಕೆಂದು) ನಾನು ನಿನ್ನಲ್ಲಿ ಅಭಯ ಕೋರುತ್ತೇನೆ. ನೀನು ನನ್ನನ್ನು ಕ್ಷಮಿಸದಿದ್ದರೆ ಮತ್ತು ನನಗೆ ದಯೆ ತೋರದಿದ್ದರೆ ನಾನು ನಷ್ಟಹೊಂದಿದವರಲ್ಲಿ ಸೇರುವುದು ನಿಶ್ಚಿತ.” info
التفاسير:

external-link copy
48 : 11

قِیْلَ یٰنُوْحُ اهْبِطْ بِسَلٰمٍ مِّنَّا وَبَرَكٰتٍ عَلَیْكَ وَعَلٰۤی اُمَمٍ مِّمَّنْ مَّعَكَ ؕ— وَاُمَمٌ سَنُمَتِّعُهُمْ ثُمَّ یَمَسُّهُمْ مِّنَّا عَذَابٌ اَلِیْمٌ ۟

ಅವರೊಡನೆ ಹೇಳಲಾಯಿತು: “ಓ ನೂಹ್! ನಮ್ಮ ಕಡೆಯ ಸುರಕ್ಷೆ ಮತ್ತು ಸಮೃದ್ಧಿಗಳೊಂದಿಗೆ ಇಳಿಯಿರಿ. (ಆ ಸಮೃದ್ಧಿಗಳು) ನಿಮಗೆ ಹಾಗೂ ನಿಮ್ಮ ಜೊತೆಯಲ್ಲಿರುವವರ ಅನೇಕ ಸಮುದಾಯಗಳಿಗೆ ಇದೆ. ಬೇರೆ ಕೆಲವು ಸಮುದಾಯಗಳಿವೆ. ಅವರಿಗೆ ನಾವು (ಇಹಲೋಕದಲ್ಲಿ ) ಸವಲತ್ತುಗಳನ್ನು ನೀಡುವೆವು. ನಂತರ ನಮ್ಮ ಕಡೆಯ ಯಾತನಾಮಯ ಶಿಕ್ಷೆಯು ಅವರನ್ನು ಸ್ಪರ್ಶಿಸುತ್ತದೆ.” info
التفاسير:

external-link copy
49 : 11

تِلْكَ مِنْ اَنْۢبَآءِ الْغَیْبِ نُوْحِیْهَاۤ اِلَیْكَ ۚ— مَا كُنْتَ تَعْلَمُهَاۤ اَنْتَ وَلَا قَوْمُكَ مِنْ قَبْلِ هٰذَا ۛؕ— فَاصْبِرْ ۛؕ— اِنَّ الْعَاقِبَةَ لِلْمُتَّقِیْنَ ۟۠

(ಪ್ರವಾದಿಯವರೇ) ಇವೆಲ್ಲವೂ ಅದೃಶ್ಯ ಸಮಾಚಾರಗಳಾಗಿವೆ. ನಾವು ಇವುಗಳನ್ನು ದೇವವಾಣಿಯ ಮೂಲಕ ನಿಮಗೆ ತಿಳಿಸುತ್ತಿದ್ದೇವೆ. ಇದಕ್ಕೆ ಮೊದಲು ನೀವು ಅಥವಾ ನಿಮ್ಮ ಜನರು ಇದನ್ನು ತಿಳಿದಿರಲಿಲ್ಲ. ಆದ್ದರಿಂದ ನೀವು ತಾಳ್ಮೆ ವಹಿಸಿರಿ. ನಿಶ್ಚಯವಾಗಿಯೂ ಅತ್ಯುತ್ತಮ ಅಂತ್ಯವಿರುವುದು ದೇವಭಯವುಳ್ಳವರಿಗೆ ಮಾತ್ರ. info
التفاسير:

external-link copy
50 : 11

وَاِلٰی عَادٍ اَخَاهُمْ هُوْدًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اِنْ اَنْتُمْ اِلَّا مُفْتَرُوْنَ ۟

ನಾವು ಆದ್ ಗೋತ್ರದವರ ಬಳಿಗೆ ಅವರ ಸಹೋದರ ಹೂದರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅರಾಧಿಸಲು ಅರ್ಹರಾದ ಬೇರೆ ದೇವರಿಲ್ಲ. ನೀವು ಕೇವಲ ಸುಳ್ಳು ಆರೋಪಿಸುವವರಾಗಿದ್ದೀರಿ.” info
التفاسير:

external-link copy
51 : 11

یٰقَوْمِ لَاۤ اَسْـَٔلُكُمْ عَلَیْهِ اَجْرًا ؕ— اِنْ اَجْرِیَ اِلَّا عَلَی الَّذِیْ فَطَرَنِیْ ؕ— اَفَلَا تَعْقِلُوْنَ ۟

ಓ ನನ್ನ ಜನರೇ! ಇದಕ್ಕಾಗಿ ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದ ಹೊಣೆಯಿರುವುದು ನನ್ನ ಸೃಷ್ಟಿಕರ್ತನಿಗೆ ಮಾತ್ರ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ? info
التفاسير:

external-link copy
52 : 11

وَیٰقَوْمِ اسْتَغْفِرُوْا رَبَّكُمْ ثُمَّ تُوْبُوْۤا اِلَیْهِ یُرْسِلِ السَّمَآءَ عَلَیْكُمْ مِّدْرَارًا وَّیَزِدْكُمْ قُوَّةً اِلٰی قُوَّتِكُمْ وَلَا تَتَوَلَّوْا مُجْرِمِیْنَ ۟

ಓ ನನ್ನ ಜನರೇ! ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಂತರ ಅವನ ಕಡೆಗೆ ಪಶ್ಚಾತ್ತಾಪದಿಂದ ತಿರುಗಿರಿ. ಅವನು ನಿಮಗೆ ಧಾರಾಕಾರವಾಗಿ ಮಳೆಯನ್ನು ಸುರಿಸುವನು. ನಿಮ್ಮ ಶಕ್ತಿಗೆ ಅವನು ಇನ್ನಷ್ಟು ಶಕ್ತಿಯನ್ನು ಹೆಚ್ಚಿಸುವನು. ನೀವು ಅಪರಾಧಿಗಳಾಗಿ ವಿಮುಖರಾಗಬೇಡಿ.” info
التفاسير:

external-link copy
53 : 11

قَالُوْا یٰهُوْدُ مَا جِئْتَنَا بِبَیِّنَةٍ وَّمَا نَحْنُ بِتَارِكِیْۤ اٰلِهَتِنَا عَنْ قَوْلِكَ وَمَا نَحْنُ لَكَ بِمُؤْمِنِیْنَ ۟

ಜನರು ಹೇಳಿದರು: “ಓ ಹೂದ್! ನೀನು ಯಾವುದೇ ಸ್ಪಷ್ಟ ಸಾಕ್ಷ್ಯವನ್ನು ತಂದು ತೋರಿಸಿಲ್ಲ. ನಿನ್ನ ಮಾತನ್ನು ಕೇಳಿ ನಾವು ನಮ್ಮ ದೇವರುಗಳನ್ನು ತೊರೆಯುವುದಿಲ್ಲ. ನಾವು ನಿನ್ನಲ್ಲಿ ವಿಶ್ವಾಸವಿಡುವುದೂ ಇಲ್ಲ. info
التفاسير: