Salin ng mga Kahulugan ng Marangal na Qur'an - Salin sa Wikang Kanarese ni Hamza Batur

ಹೂದ್

external-link copy
1 : 11

الٓرٰ ۫— كِتٰبٌ اُحْكِمَتْ اٰیٰتُهٗ ثُمَّ فُصِّلَتْ مِنْ لَّدُنْ حَكِیْمٍ خَبِیْرٍ ۟ۙ

ಅಲಿಫ್, ಲಾಮ್, ರಾ. ಇದೊಂದು ಗ್ರಂಥವಾಗಿದ್ದು, ಇದರ ವಚನಗಳನ್ನು (ಕುಂದು-ಕೊರತೆಗಳು ಮತ್ತು ಪ್ರಮಾದಗಳಿಲ್ಲದ ರೀತಿಯಲ್ಲಿ) ಭದ್ರಗೊಳಿಸಲಾಗಿದೆ. ನಂತರ ಅವುಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಇದು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾದ ಅಲ್ಲಾಹನ ಕಡೆಯಿಂದ (ಅವತೀರ್ಣವಾಗಿದೆ). info
التفاسير:

external-link copy
2 : 11

اَلَّا تَعْبُدُوْۤا اِلَّا اللّٰهَ ؕ— اِنَّنِیْ لَكُمْ مِّنْهُ نَذِیْرٌ وَّبَشِیْرٌ ۟ۙ

ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯಿಂದ ಎಚ್ಚರಿಕೆ ನೀಡುವವನು ಮತ್ತು ಸುವಾರ್ತೆ ತಿಳಿಸುವವನಾಗಿದ್ದೇನೆ. info
التفاسير:

external-link copy
3 : 11

وَّاَنِ اسْتَغْفِرُوْا رَبَّكُمْ ثُمَّ تُوْبُوْۤا اِلَیْهِ یُمَتِّعْكُمْ مَّتَاعًا حَسَنًا اِلٰۤی اَجَلٍ مُّسَمًّی وَّیُؤْتِ كُلَّ ذِیْ فَضْلٍ فَضْلَهٗ ؕ— وَاِنْ تَوَلَّوْا فَاِنِّیْۤ اَخَافُ عَلَیْكُمْ عَذَابَ یَوْمٍ كَبِیْرٍ ۟

ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿರಿ. ನಂತರ ಪಶ್ಚಾತ್ತಾಪದಿಂದ ಅವರ ಕಡೆಗೆ ತಿರುಗಿರಿ. ಅವನು ನಿಮಗೆ ಒಂದು ನಿರ್ದಿಷ್ಟ ಅವಧಿಯ ತನಕ ಉತ್ತಮ ಸವಲತ್ತುಗಳನ್ನು ನೀಡುವನು. ಹೆಚ್ಚು ಸತ್ಕರ್ಮ ಮಾಡುವವರಿಗೆ ಅವನು ಹೆಚ್ಚು ಪ್ರತಿಫಲವನ್ನು ನೀಡುವನು. ನೀವೇನಾದರೂ ಮುಖ ತಿರುಗಿಸಿ ನಡೆಯುವುದಾದರೆ, ನಿಶ್ಚಯವಾಗಿಯೂ ಒಂದು ಮಹಾ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ. info
التفاسير:

external-link copy
4 : 11

اِلَی اللّٰهِ مَرْجِعُكُمْ ۚ— وَهُوَ عَلٰی كُلِّ شَیْءٍ قَدِیْرٌ ۟

ನಿಮ್ಮೆಲ್ಲರನ್ನೂ ಅಲ್ಲಾಹನ ಬಳಿಗೇ ಮರಳಿಸಲಾಗುವುದು. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
5 : 11

اَلَاۤ اِنَّهُمْ یَثْنُوْنَ صُدُوْرَهُمْ لِیَسْتَخْفُوْا مِنْهُ ؕ— اَلَا حِیْنَ یَسْتَغْشُوْنَ ثِیَابَهُمْ ۙ— یَعْلَمُ مَا یُسِرُّوْنَ وَمَا یُعْلِنُوْنَ ۚ— اِنَّهٗ عَلِیْمٌۢ بِذَاتِ الصُّدُوْرِ ۟

ತಿಳಿಯಿರಿ! ಅವರು ತಮ್ಮ ಮಾತುಗಳನ್ನು (ಅಲ್ಲಾಹನಿಂದ) ಮುಚ್ಚಿಡುವುದಕ್ಕಾಗಿ ತಮ್ಮ ಎದೆಗಳನ್ನು ಮಡಚುತ್ತಾರೆ. ತಿಳಿಯಿರಿ! ಅವರು ತಮ್ಮ ಬಟ್ಟೆಗಳನ್ನು ಹೊದ್ದುಕೊಳ್ಳುವಾಗ ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆ. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ. info
التفاسير: