Salin ng mga Kahulugan ng Marangal na Qur'an - Salin sa Wikang Kanarese ni Hamza Batur

Numero ng Pahina:close

external-link copy
109 : 11

فَلَا تَكُ فِیْ مِرْیَةٍ مِّمَّا یَعْبُدُ هٰۤؤُلَآءِ ؕ— مَا یَعْبُدُوْنَ اِلَّا كَمَا یَعْبُدُ اٰبَآؤُهُمْ مِّنْ قَبْلُ ؕ— وَاِنَّا لَمُوَفُّوْهُمْ نَصِیْبَهُمْ غَیْرَ مَنْقُوْصٍ ۟۠

ಇವರು ಆರಾಧಿಸುತ್ತಿರುವ ದೇವರುಗಳ ಬಗ್ಗೆ (ಅವು ಸುಳ್ಳು ಎಂಬ ವಿಷಯದಲ್ಲಿ) ನಿಮಗೆ ಯಾವುದೇ ಸಂಶಯುಂಟಾಗದಿರಲಿ. ಇವರ ಪೂರ್ವಜರು ಹಿಂದೆ ಆರಾಧಿಸುತ್ತಿದ್ದ ರೀತಿಯಲ್ಲೇ ಇವರೂ ಆರಾಧಿಸುತ್ತಿದ್ದಾರೆ. ನಿಶ್ಚಯವಾಗಿಯೂ ನಾವು ಅವರ ಪಾಲನ್ನು ಯಾವುದೇ ಕಡಿತ ಮಾಡದೆ ಅವರಿಗೆ ಪೂರ್ಣವಾಗಿ ನೀಡುವೆವು. info
التفاسير:

external-link copy
110 : 11

وَلَقَدْ اٰتَیْنَا مُوْسَی الْكِتٰبَ فَاخْتُلِفَ فِیْهِ ؕ— وَلَوْلَا كَلِمَةٌ سَبَقَتْ مِنْ رَّبِّكَ لَقُضِیَ بَیْنَهُمْ ؕ— وَاِنَّهُمْ لَفِیْ شَكٍّ مِّنْهُ مُرِیْبٍ ۟

ನಿಶ್ಚಯವಾಗಿಯೂ ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಆದರೆ ಅವರು ಅದರಲ್ಲಿ ಭಿನ್ನಮತ ತಳೆದರು. ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಮಾತು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು. ನಿಶ್ಚಯವಾಗಿಯೂ ಅವರಿಗೆ ಇದರ (ಕುರ್‌ಆನಿನ) ವಿಷಯದಲ್ಲಿ ಗೊಂದಲಪೂರ್ಣ ಸಂಶಯಗಳಿವೆ. info
التفاسير:

external-link copy
111 : 11

وَاِنَّ كُلًّا لَّمَّا لَیُوَفِّیَنَّهُمْ رَبُّكَ اَعْمَالَهُمْ ؕ— اِنَّهٗ بِمَا یَعْمَلُوْنَ خَبِیْرٌ ۟

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವರಲ್ಲಿ ಪ್ರತಿಯೊಬ್ಬರಿಗೂ ಅವರ ಕರ್ಮಗಳ ಪೂರ್ಣ ಪ್ರತಿಫಲವನ್ನು ನೀಡುವನು. ನಿಶ್ಚಯವಾಗಿಯೂ ಅವರು ಮಾಡುವ ಕರ್ಮಗಳ ಬಗ್ಗೆ ಅವನು ಸೂಕ್ಷ್ಮವಾಗಿ ತಿಳಿದವನಾಗಿದ್ದಾನೆ. info
التفاسير:

external-link copy
112 : 11

فَاسْتَقِمْ كَمَاۤ اُمِرْتَ وَمَنْ تَابَ مَعَكَ وَلَا تَطْغَوْا ؕ— اِنَّهٗ بِمَا تَعْمَلُوْنَ بَصِیْرٌ ۟

ಆದ್ದರಿಂದ ನಿಮಗೆ ಆದೇಶಿಸಲಾದಂತೆ ನೀವು ಮತ್ತು ನಿಮ್ಮ ಜೊತೆಗೆ (ಅಲ್ಲಾಹನ ಕಡೆಗೆ) ತಿರುಗಿದವರು ನೇರವಾಗಿ ನಿಲ್ಲಿರಿ. ನೀವು ಎಲ್ಲೆ ಮೀರಬೇಡಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ಅವನು ನೋಡುತ್ತಿದ್ದಾನೆ. info
التفاسير:

external-link copy
113 : 11

وَلَا تَرْكَنُوْۤا اِلَی الَّذِیْنَ ظَلَمُوْا فَتَمَسَّكُمُ النَّارُ ۙ— وَمَا لَكُمْ مِّنْ دُوْنِ اللّٰهِ مِنْ اَوْلِیَآءَ ثُمَّ لَا تُنْصَرُوْنَ ۟

ನೀವು ಅಕ್ರಮಿಗಳ ಕಡೆಗೆ ವಾಲಬೇಡಿ. ಹಾಗೇನಾದರೂ ಆದರೆ ನರಕಾಗ್ನಿಯು ನಿಮ್ಮನ್ನು ಸ್ಪರ್ಶಿಸಬಹುದು ಮತ್ತು ಅಲ್ಲಾಹನ ಹೊರತು ನಿಮಗೆ ಯಾವುದೇ ರಕ್ಷಕರೂ ಇರಲಾರರು. ನಂತರ ನಿಮಗೆ ಯಾವುದೇ ಸಹಾಯ ಕೂಡ ದೊರೆಯಲಾರದು. info
التفاسير:

external-link copy
114 : 11

وَاَقِمِ الصَّلٰوةَ طَرَفَیِ النَّهَارِ وَزُلَفًا مِّنَ الَّیْلِ ؕ— اِنَّ الْحَسَنٰتِ یُذْهِبْنَ السَّیِّاٰتِ ؕ— ذٰلِكَ ذِكْرٰی لِلذّٰكِرِیْنَ ۟ۚ

ಹಗಲಿನ ಎರಡು ತುದಿಗಳಲ್ಲಿ ಮತ್ತು ರಾತ್ರಿಯ ಕೆಲವು ಸಮಯಗಳಲ್ಲಿ ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ಸತ್ಕರ್ಮಗಳು ದುಷ್ಕರ್ಮಗಳನ್ನು ಅಳಿಸುತ್ತವೆ. ಇದು ಉಪದೇಶ ಸ್ವೀಕರಿಸುವವರಿಗೆ ಒಂದು ಉಪದೇಶವಾಗಿದೆ. info
التفاسير:

external-link copy
115 : 11

وَاصْبِرْ فَاِنَّ اللّٰهَ لَا یُضِیْعُ اَجْرَ الْمُحْسِنِیْنَ ۟

ತಾಳ್ಮೆ ವಹಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮಾಡುವವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ. info
التفاسير:

external-link copy
116 : 11

فَلَوْلَا كَانَ مِنَ الْقُرُوْنِ مِنْ قَبْلِكُمْ اُولُوْا بَقِیَّةٍ یَّنْهَوْنَ عَنِ الْفَسَادِ فِی الْاَرْضِ اِلَّا قَلِیْلًا مِّمَّنْ اَنْجَیْنَا مِنْهُمْ ۚ— وَاتَّبَعَ الَّذِیْنَ ظَلَمُوْا مَاۤ اُتْرِفُوْا فِیْهِ وَكَانُوْا مُجْرِمِیْنَ ۟

ನಿಮಗಿಂತ ಮೊದಲಿನ ತಲೆಮಾರುಗಳಲ್ಲಿ ಭೂಮಿಯಲ್ಲಿ ಕಿಡಿಗೇಡಿತನ ಮಾಡುವುದನ್ನು ವಿರೋಧಿಸುವ ಒಳಿತಿನ ಜನರೇಕೆ ಇರಲಿಲ್ಲ? ಅವರ ಪೈಕಿ ನಾವು ಪಾರು ಮಾಡಿದ ಕೆಲವರ ಹೊರತು. ಅಕ್ರಮಿಗಳು ನಾವು ಅವರಿಗೆ ಒದಗಿಸಿದ ಸುಖಭೋಗಗಳನ್ನು ಹಿಂಬಾಲಿಸಿದರು. ಅವರು ಅಪರಾಧಿಗಳಾಗಿದ್ದರು. info
التفاسير:

external-link copy
117 : 11

وَمَا كَانَ رَبُّكَ لِیُهْلِكَ الْقُرٰی بِظُلْمٍ وَّاَهْلُهَا مُصْلِحُوْنَ ۟

ನಿಮ್ಮ ಪರಿಪಾಲಕನು (ಅಲ್ಲಾಹು) ಯಾವುದೇ ಊರುಗಳನ್ನು—ಅವುಗಳ ನಿವಾಸಿಗಳು ಸತ್ಕರ್ಮ ಮಾಡುವವರಾಗಿದ್ದರೆ ಅನ್ಯಾಯವಾಗಿ ನಾಶ ಮಾಡುವುದಿಲ್ಲ. info
التفاسير: