แปล​ความหมาย​อัลกุรอาน​ - คำแปลภาษากันนาดา - โดยหัมซะฮ์ บะตูร

หมายเลข​หน้า​:close

external-link copy
14 : 5

وَمِنَ الَّذِیْنَ قَالُوْۤا اِنَّا نَصٰرٰۤی اَخَذْنَا مِیْثَاقَهُمْ فَنَسُوْا حَظًّا مِّمَّا ذُكِّرُوْا بِهٖ ۪— فَاَغْرَیْنَا بَیْنَهُمُ الْعَدَاوَةَ وَالْبَغْضَآءَ اِلٰی یَوْمِ الْقِیٰمَةِ ؕ— وَسَوْفَ یُنَبِّئُهُمُ اللّٰهُ بِمَا كَانُوْا یَصْنَعُوْنَ ۟

“ನಾವು ಕ್ರೈಸ್ತರು” ಎಂದು ಹೇಳಿದವರಿಂದಲೂ ನಾವು ಕರಾರನ್ನು ಪಡೆದಿದ್ದೇವೆ. ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತುಬಿಟ್ಟರು. ಆದ್ದರಿಂದ ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟುಮಾಡಿದೆವು. ಅವರು ಮಾಡಿದ ದುಷ್ಕರ್ಮಗಳ ಬಗ್ಗೆ ಅಲ್ಲಾಹು ಸದ್ಯವೇ ಅವರಿಗೆ ತಿಳಿಸಿಕೊಡುವನು. info
التفاسير:

external-link copy
15 : 5

یٰۤاَهْلَ الْكِتٰبِ قَدْ جَآءَكُمْ رَسُوْلُنَا یُبَیِّنُ لَكُمْ كَثِیْرًا مِّمَّا كُنْتُمْ تُخْفُوْنَ مِنَ الْكِتٰبِ وَیَعْفُوْا عَنْ كَثِیْرٍ ؕ۬— قَدْ جَآءَكُمْ مِّنَ اللّٰهِ نُوْرٌ وَّكِتٰبٌ مُّبِیْنٌ ۟ۙ

ಓ ಗ್ರಂಥದವರೇ! ನೀವು ಗ್ರಂಥದಿಂದ ಮುಚ್ಚಿಡುವ ಅನೇಕ ವಿಷಯಗಳನ್ನು ಬಹಿರಂಗಪಡಿಸುತ್ತಾ ಮತ್ತು ಹೆಚ್ಚಿನದ್ದನ್ನೂ ಕ್ಷಮಿಸುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. ನಿಮಗೆ ಅಲ್ಲಾಹನಿಂದ ಒಂದು ಬೆಳಕು ಮತ್ತು ಸ್ಪಷ್ಟ ಗ್ರಂಥವು ಬಂದಿದೆ. info
التفاسير:

external-link copy
16 : 5

یَّهْدِیْ بِهِ اللّٰهُ مَنِ اتَّبَعَ رِضْوَانَهٗ سُبُلَ السَّلٰمِ وَیُخْرِجُهُمْ مِّنَ الظُّلُمٰتِ اِلَی النُّوْرِ بِاِذْنِهٖ وَیَهْدِیْهِمْ اِلٰی صِرَاطٍ مُّسْتَقِیْمٍ ۟

ತನ್ನ ಸಂಪ್ರೀತಿಯನ್ನು ಹಿಂಬಾಲಿಸುವವರಿಗೆ ಅಲ್ಲಾಹು ಅದರ ಮೂಲಕ ಶಾಂತಿಯ ಮಾರ್ಗಗಳನ್ನು ತೋರಿಸಿಕೊಡುವನು. ಅವನು ತನ್ನ ಅಪ್ಪಣೆಯಿಂದ ಅವರನ್ನು ಅಂಧಕಾರಗಳಿಂದ ಬೆಳಕಿಗೆ ಹೊರತರುವನು ಮತ್ತು ಅವರನ್ನು ನೇರಮಾರ್ಗಕ್ಕೆ ಮುನ್ನಡೆಸುವನು. info
التفاسير:

external-link copy
17 : 5

لَقَدْ كَفَرَ الَّذِیْنَ قَالُوْۤا اِنَّ اللّٰهَ هُوَ الْمَسِیْحُ ابْنُ مَرْیَمَ ؕ— قُلْ فَمَنْ یَّمْلِكُ مِنَ اللّٰهِ شَیْـًٔا اِنْ اَرَادَ اَنْ یُّهْلِكَ الْمَسِیْحَ ابْنَ مَرْیَمَ وَاُمَّهٗ وَمَنْ فِی الْاَرْضِ جَمِیْعًا ؕ— وَلِلّٰهِ مُلْكُ السَّمٰوٰتِ وَالْاَرْضِ وَمَا بَیْنَهُمَا ؕ— یَخْلُقُ مَا یَشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟

“ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಹೇಳಿರಿ: “ಅಲ್ಲಾಹು ಮರ್ಯಮರ ಮಗ ಮಸೀಹರನ್ನು, ಅವರ ತಾಯಿಯನ್ನು ಮತ್ತು ಭೂಮಿಯಲ್ಲಿರುವ ಸರ್ವ ಮಾನವರನ್ನು ನಾಶ ಮಾಡಲು ಬಯಸಿದರೆ ಅವನನ್ನು ತಡೆಯಲು ಯಾರಿಗೆ ಸಾಧ್ಯವಿದೆ?” ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير: