แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี

หมายเลข​หน้า​:close

external-link copy
96 : 7

وَلَوْ اَنَّ اَهْلَ الْقُرٰۤی اٰمَنُوْا وَاتَّقَوْا لَفَتَحْنَا عَلَیْهِمْ بَرَكٰتٍ مِّنَ السَّمَآءِ وَالْاَرْضِ وَلٰكِنْ كَذَّبُوْا فَاَخَذْنٰهُمْ بِمَا كَانُوْا یَكْسِبُوْنَ ۟

ಆ ನಾಡಿನವರು ವಿಶ್ವಾಸವಿಡುತ್ತಿದ್ದರೆ ಮತ್ತು ಭಯಭಕ್ತಿ ಪಾಲಿಸುತ್ತಿದ್ದರೆ ನಾವು ಅವರಿಗೆ ಆಕಾಶ ಮತ್ತು ಭೂಮಿಯಿಂದ ಸಮೃದ್ಧಿಯನ್ನು ತೆರೆದು ಕೊಡುತ್ತಿದ್ದೆವು. ಆದರೆ ಅವರು ಧಿಕ್ಕರಿಸಿಬಿಟ್ಟರು. ಆದ್ದರಿಂದ ನಾವು ಅವರ ಕರ್ಮಗಳ ನಿಮಿತ್ತ ಅವರನ್ನು ಹಿಡಿದುಬಿಟ್ಟೆವು. info
التفاسير:

external-link copy
97 : 7

اَفَاَمِنَ اَهْلُ الْقُرٰۤی اَنْ یَّاْتِیَهُمْ بَاْسُنَا بَیَاتًا وَّهُمْ نَآىِٕمُوْنَ ۟ؕ

ಹಾಗಿದ್ದೂ ಈ ನಾಡುಗಳ ನಿವಾಸಿಗಳು ನಿದ್ರಿಸುತ್ತಿರುವಾಗ ರಾತ್ರಿಯ ವೇಳೆ ನಮ್ಮ ಶಿಕ್ಷೆ ಬಂದೆರಗಬಹುದೆAಬ ವಿಚಾರದ ಕುರಿತು ನಿಶ್ಚಿಂತರಾಗಿರುವರೇ? info
التفاسير:

external-link copy
98 : 7

اَوَاَمِنَ اَهْلُ الْقُرٰۤی اَنْ یَّاْتِیَهُمْ بَاْسُنَا ضُحًی وَّهُمْ یَلْعَبُوْنَ ۟

ಅಥವಾ ಈ ನಾಡುಗಳ ನಿವಾಸಿಗಳು ಹಗಲಿನ ವೇಳೆ ವಿನೋದದಲ್ಲಿ ತಲ್ಲೀನರಾಗಿರುವಾಗ ನಮ್ಮ ಶಿಕ್ಷೆ ಬಂದೆರಗುವುದರ ಕುರಿತು ನಿಶ್ಚಿಂತರಾಗಿರುವರೇ? info
التفاسير:

external-link copy
99 : 7

اَفَاَمِنُوْا مَكْرَ اللّٰهِ ۚ— فَلَا یَاْمَنُ مَكْرَ اللّٰهِ اِلَّا الْقَوْمُ الْخٰسِرُوْنَ ۟۠

ಅವರು ಅಲ್ಲಾಹನ ತಂತ್ರದ ಕುರಿತು ನಿರ್ಭಯರಾಗಿರುವರೇ? ವಾಸ್ತವದಲ್ಲಿ ನಷ್ಟಕ್ಕೊಳಗಾದವರ ಹೊರತು ಇನ್ನಾರೂ ಅಲ್ಲಾಹನ ತಂತ್ರದ ಕುರಿತು ನಿರ್ಭಯರಾಗಿರಲಾರರು. info
التفاسير:

external-link copy
100 : 7

اَوَلَمْ یَهْدِ لِلَّذِیْنَ یَرِثُوْنَ الْاَرْضَ مِنْ بَعْدِ اَهْلِهَاۤ اَنْ لَّوْ نَشَآءُ اَصَبْنٰهُمْ بِذُنُوْبِهِمْ ۚ— وَنَطْبَعُ عَلٰی قُلُوْبِهِمْ فَهُمْ لَا یَسْمَعُوْنَ ۟

ಮತ್ತು ಭೂಮಿಯ ಪೂರ್ವನಿವಾಸಿಗಳ ಬಳಿಕ ಅದರ ವಾರೀಸುದಾರರಾದವರಿಗೆ ನಾವು ಇಚ್ಛಿಸಿದರೆ ಅವರ ಅಪರಾಧಗಳ ನಿಮಿತ್ತ ಅವರನ್ನು ನಾಶಮಾಡುತ್ತಿದ್ದೆವು ಎಂಬ ವಿಚಾರವು ಪಾಠಕಲಿಸಿಕೊಡಲಿಲ್ಲವೇ? ಮತ್ತು ನಾವು ಅವರು ಆಲಿಸದಂತೆ ಅವರ ಹೃದಯಗಳಿಗೆ ಮುದ್ರೆಯೊತ್ತಿರುತ್ತೇವೆ. info
التفاسير:

external-link copy
101 : 7

تِلْكَ الْقُرٰی نَقُصُّ عَلَیْكَ مِنْ اَنْۢبَآىِٕهَا ۚ— وَلَقَدْ جَآءَتْهُمْ رُسُلُهُمْ بِالْبَیِّنٰتِ ۚ— فَمَا كَانُوْا لِیُؤْمِنُوْا بِمَا كَذَّبُوْا مِنْ قَبْلُ ؕ— كَذٰلِكَ یَطْبَعُ اللّٰهُ عَلٰی قُلُوْبِ الْكٰفِرِیْنَ ۟

ಆ ನಾಡಿನವರ ಕೆಲವು ವೃತ್ತಾಂತಗಳನ್ನು ನಾವು ನಿಮಗೆ ವಿವರಿಸಿ ಕೊಡುತ್ತಿದ್ದೇವೆ. ಅವರ ಬಳಿಗೆ ಅವರ ಸಂದೇಶವಾಹಕರು ದೃಷ್ಟಾಂತಗಳೊAದಿಗೆ ಬಂದಿದ್ದರು. ಅನಂತರ ಅವರು ಯಾವುದನ್ನು ಮೊದಲು ಸುಳ್ಳೆಂದು ಹೇಳಿದ್ದರೋ ಅದನ್ನು ಸತ್ಯವೆಂದು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಇದೇ ಪ್ರಕಾರ ಅಲ್ಲಾಹನು ಸತ್ಯ ನಿಷೇಧಿಗಳ ಹೃದಯಗಳಿಗೆ ಮುದ್ರೆಯೊತ್ತಿರುತ್ತಾನೆ. info
التفاسير:

external-link copy
102 : 7

وَمَا وَجَدْنَا لِاَكْثَرِهِمْ مِّنْ عَهْدٍ ۚ— وَاِنْ وَّجَدْنَاۤ اَكْثَرَهُمْ لَفٰسِقِیْنَ ۟

ನಾವು ಅವರ ಪೈಕಿ ಹೆಚ್ಚಿನವರನ್ನು ಕರಾರು ಪಾಲಿಸುವವರಾಗಿ ಕಂಡಿಲ್ಲ. ಅವರ ಪೈಕಿ ಹೆಚ್ಚಿನವರನ್ನು ನಾವು ಧಿಕ್ಕಾರಿಗಳಾಗಿಯೇ ಕಂಡೆವು. info
التفاسير:

external-link copy
103 : 7

ثُمَّ بَعَثْنَا مِنْ بَعْدِهِمْ مُّوْسٰی بِاٰیٰتِنَاۤ اِلٰی فِرْعَوْنَ وَمَلَاۡىِٕهٖ فَظَلَمُوْا بِهَا ۚ— فَانْظُرْ كَیْفَ كَانَ عَاقِبَةُ الْمُفْسِدِیْنَ ۟

ನಂತರ ಅವರ ಬಳಿಕ ನಾವು ಮೂಸಾರವರನ್ನು ನಮ್ಮ ದೃಷ್ಟಾಂತಗಳೊAದಿಗೆ ಫಿರ್‌ಔನ್ ಮತ್ತು ಅವನ ಪ್ರಮುಖರೆಡೆಗೆ ಕಳುಹಿಸಿದೆವು. ಅದರೆ ಅವರು ಅವುಗಳೊಂದಿಗೆ ಅಕ್ರಮವೆಸಗಿದರು. ಆದ್ದರಿಂದ ಆ ವಿನಾಶಕಾರಿಗಳ ಪರಿಣಾಮ ಏನಾಯಿತೆಂಬುದನ್ನು ನೋಡಿರಿ. info
التفاسير:

external-link copy
104 : 7

وَقَالَ مُوْسٰی یٰفِرْعَوْنُ اِنِّیْ رَسُوْلٌ مِّنْ رَّبِّ الْعٰلَمِیْنَ ۟ۙ

ಮೂಸಾ ಹೇಳಿದರು: 'ಓ ಫಿರ್‌ಔನ್ ನಿಶ್ಚಯವಾಗಿಯು ನಾನು ಸರ್ವಲೋಕಗಳ ಪ್ರಭುವಿನ ಕಡೆಯ ಸಂದೇಶವಾಹಕನಾಗಿರುವೆನು. info
التفاسير: