แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี

หมายเลข​หน้า​: 356:350 close

external-link copy
54 : 24

قُلْ اَطِیْعُوا اللّٰهَ وَاَطِیْعُوا الرَّسُوْلَ ۚ— فَاِنْ تَوَلَّوْا فَاِنَّمَا عَلَیْهِ مَا حُمِّلَ وَعَلَیْكُمْ مَّا حُمِّلْتُمْ ؕ— وَاِنْ تُطِیْعُوْهُ تَهْتَدُوْا ؕ— وَمَا عَلَی الرَّسُوْلِ اِلَّا الْبَلٰغُ الْمُبِیْنُ ۟

ಹೇಳಿರಿ: ನೀವು ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಇನ್ನು ನೀವು ವಿಮುಖರಾದರೆ ಸಂದೇಶವನ್ನು ತಲುಪಿಸುವುದು ಸಂದೇಶವಾಹಕರ ಕರ್ತವ್ಯವಾಗಿದೆ ಮತ್ತು ಅದನ್ನು ಸ್ವೀಕರಿಸುವುದು ನಿಮ್ಮ ಮೇಲಿರುವ ಹೊಣೆಯಾಗಿದೆ. ಸಂದೇಶವಾಹಕರ ಅನುಸರಣೆಯಲ್ಲೇ ನಿಮಗೆ ಸನ್ಮಾರ್ಗ ಲಭಿಸುತ್ತದೆ. ಮತ್ತು ಸಂದೇಶವಾಹಕರ ಮೇಲೆ ಸ್ಪಷ್ಟವಾಗಿ ಆದೇಶಗಳನ್ನು ತಲುಪಿಸುವುದರ ಹೊರತು ಬೇರೆ ಜವಾಬ್ದಾರಿಯಿಲ್ಲ. info
التفاسير:

external-link copy
55 : 24

وَعَدَ اللّٰهُ الَّذِیْنَ اٰمَنُوْا مِنْكُمْ وَعَمِلُوا الصّٰلِحٰتِ لَیَسْتَخْلِفَنَّهُمْ فِی الْاَرْضِ كَمَا اسْتَخْلَفَ الَّذِیْنَ مِنْ قَبْلِهِمْ ۪— وَلَیُمَكِّنَنَّ لَهُمْ دِیْنَهُمُ الَّذِی ارْتَضٰی لَهُمْ وَلَیُبَدِّلَنَّهُمْ مِّنْ بَعْدِ خَوْفِهِمْ اَمْنًا ؕ— یَعْبُدُوْنَنِیْ لَا یُشْرِكُوْنَ بِیْ شَیْـًٔا ؕ— وَمَنْ كَفَرَ بَعْدَ ذٰلِكَ فَاُولٰٓىِٕكَ هُمُ الْفٰسِقُوْنَ ۟

ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಂಡವರಿಗೆ ಅವರ ಮುಂಚಿನವರನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಿದಂತೆಯೇ ಖಂಡಿತ ಅವರನ್ನೂ ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವನೆಂದು ಮತ್ತು ನಿಶ್ಚಯವಾಗಿಯೂ ಅವರಿಗೆ ಸಂತೃಪ್ತಿ ಹೊಂದಿರುವAತಹ ಧರ್ಮವನ್ನು ಸಧೃಢವಾಗಿ ಸ್ಥಾಪಿಸಿಕೊಡುವನೆಂದು ಮತ್ತು ಅವರ ಭಯಭೀತಿಯನ್ನು ಶಾಂತಿಯನ್ನಾಗಿ ಮಾರ್ಪಡಿಸುವನು ಎಂದು ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನೇ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸದಿರಲಿ ಇದರ ನಂತರವೂ ಯಾರಾದರೂ ಕೃತಘ್ನತೆ ಹಾಗೂ ಸತ್ಯನಿಷೇಧ ತೋರಿದರೆ ನಿಶ್ಚಯವಾಗಿಯೂ ಅವರು ಕರ್ಮ ಭ್ರಷ್ಟರಾಗಿದ್ದಾರೆ. info
التفاسير:

external-link copy
56 : 24

وَاَقِیْمُوا الصَّلٰوةَ وَاٰتُوا الزَّكٰوةَ وَاَطِیْعُوا الرَّسُوْلَ لَعَلَّكُمْ تُرْحَمُوْنَ ۟

(ಓ ಸತ್ಯವಿಶ್ವಾಸಿಗಳೇ) ನೀವು ನಮಾಝ್ ಸಂಸ್ಥಾಪಿಸಿರಿ. ಝಕಾತ್ ನೀಡಿರಿ ಮತ್ತು ಸಂದೇಶವಾಹಕರ ಆಜ್ಞಾನುಸರಣೆ ಮಾಡಿರಿ. ನಿಮ್ಮ ಮೇಲೆ ಕರುಣೆ ತೋರಬಹುದು. info
التفاسير:

external-link copy
57 : 24

لَا تَحْسَبَنَّ الَّذِیْنَ كَفَرُوْا مُعْجِزِیْنَ فِی الْاَرْضِ ۚ— وَمَاْوٰىهُمُ النَّارُ ؕ— وَلَبِئْسَ الْمَصِیْرُ ۟۠

(ಓ ಪೈಗಂಬರರೇ) ಸತ್ಯನಿಷೇಧಿಸಿದವರು ಭೂಮಿಯಲ್ಲಿ ನಮ್ಮನ್ನು ಸೋಲಿಸುವವರೆಂದು ನೀವು ಎಂದೂ ಭಾವಿಸಬೇಡಿರಿ ಮತ್ತು ಅವರ ನೈಜತಾಣವಂತು ನರಕಾಗ್ನಿಯಾಗಿದೆ. ಮತ್ತು ಅದು ಅದೆಷ್ಟೋ ನಿಕೃಷ್ಟ ತಾಣವಾಗಿದೆ. info
التفاسير:

external-link copy
58 : 24

یٰۤاَیُّهَا الَّذِیْنَ اٰمَنُوْا لِیَسْتَاْذِنْكُمُ الَّذِیْنَ مَلَكَتْ اَیْمَانُكُمْ وَالَّذِیْنَ لَمْ یَبْلُغُوا الْحُلُمَ مِنْكُمْ ثَلٰثَ مَرّٰتٍ ؕ— مِنْ قَبْلِ صَلٰوةِ الْفَجْرِ وَحِیْنَ تَضَعُوْنَ ثِیَابَكُمْ مِّنَ الظَّهِیْرَةِ وَمِنْ بَعْدِ صَلٰوةِ الْعِشَآءِ ۫ؕ— ثَلٰثُ عَوْرٰتٍ لَّكُمْ ؕ— لَیْسَ عَلَیْكُمْ وَلَا عَلَیْهِمْ جُنَاحٌ بَعْدَهُنَّ ؕ— طَوّٰفُوْنَ عَلَیْكُمْ بَعْضُكُمْ عَلٰی بَعْضٍ ؕ— كَذٰلِكَ یُبَیِّنُ اللّٰهُ لَكُمُ الْاٰیٰتِ ؕ— وَاللّٰهُ عَلِیْمٌ حَكِیْمٌ ۟

ಓ ಸತ್ಯವಿಶ್ವಾಸಿಗಳೇ, ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ಯೌವ್ವನಕ್ಕೆ ತಲುಪದ ನಿಮ್ಮ ಮಕ್ಕಳು ಮೂರು ಸಮಯಗಳಲ್ಲಿ (ನಿಮ್ಮ ಬಳಿ ಬರಲು) ನಿಮ್ಮೊಂದಿಗೆ ಅನುಮತಿಯನ್ನು ಪಡೆಯುವುದು ಅನಿವಾರ್ಯವಾಗಿದೆ. ಫಜ್ರ್ ನಮಾಝಿನ ಮೊದಲು ಮತ್ತು ಝೊಹರ್ ಸಮಯದಲ್ಲಿ ನೀವು ನಿಮ್ಮ ಉಡುಪನ್ನು ಕಳಚಿಡುವ ಸಂದರ್ಭದಲ್ಲಿ ಹಾಗೂ ಇಶಾ ನಮಾಝ್‌ನ ಬಳಿಕ. ಈ ಮೂರೂ ನಿಮ್ಮ ಖಾಸಗಿ ವೇಳೆಗಳಾಗಿವೆ. ಇವುಗಳ ನಂತರದ ವೇಳೆಗಳಲ್ಲಿ ನಿಮ್ಮ ಮೇಲಾಗಲೀ, ಅವರ ಮೇಲಾಗಲೀ ಯಾವ ದೋಷವು ಇರುವುದಿಲ್ಲ. ನೀವೆಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ಬಳಿ ಹೆಚ್ಚಾಗಿ ತಿರುಗಾಡುವವರಾಗಿರುತ್ತೀರಿ. ಇದೇ ಪ್ರಕಾರ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ. info
التفاسير: