แปล​ความหมาย​อัลกุรอาน​ - คำแปลภาษากันนาดา - โดยบะชีร มัยซูรี

หมายเลข​หน้า​:close

external-link copy
79 : 12

قَالَ مَعَاذَ اللّٰهِ اَنْ نَّاْخُذَ اِلَّا مَنْ وَّجَدْنَا مَتَاعَنَا عِنْدَهٗۤ ۙ— اِنَّاۤ اِذًا لَّظٰلِمُوْنَ ۟۠

ಯೂಸುಫ್ ಹೇಳಿದರು; ಯಾರ ಬಳಿ ನಮಗೆ ನಮ್ಮ ವಸ್ತುಸಿಕ್ಕಿದೆಯೋ ಅವನ ಹೊರತು ಇತರರನ್ನು ಸೆರೆಹಿಡಿಯುವುದರಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ, ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ನಾವು ಅಕ್ರಮಿಗಳಾಗಿಬಿಡುವೆವು. info
التفاسير:

external-link copy
80 : 12

فَلَمَّا اسْتَیْـَٔسُوْا مِنْهُ خَلَصُوْا نَجِیًّا ؕ— قَالَ كَبِیْرُهُمْ اَلَمْ تَعْلَمُوْۤا اَنَّ اَبَاكُمْ قَدْ اَخَذَ عَلَیْكُمْ مَّوْثِقًا مِّنَ اللّٰهِ وَمِنْ قَبْلُ مَا فَرَّطْتُّمْ فِیْ یُوْسُفَ ۚ— فَلَنْ اَبْرَحَ الْاَرْضَ حَتّٰی یَاْذَنَ لِیْۤ اَبِیْۤ اَوْ یَحْكُمَ اللّٰهُ لِیْ ۚ— وَهُوَ خَیْرُ الْحٰكِمِیْنَ ۟

ಅವರು ಅವನಿಂದ ನಿರಾಶರಾದಾಗ ಏಕಾಂತದಲ್ಲಿ ಕುಳಿತುಕೊಂಡು ಸಮಾಲೋಚನೆ ನಡೆಸಿದರು. ಅವರ ಪೈಕಿ ಹಿರಿಯನೆಂದನು ನಿಮ್ಮ ತಂದೆಯು ನಿಮ್ಮಿಂದ ಅಲ್ಲಾಹನ ಆಣೆ ಹಾಕಿ ಸದೃಢ ಕರಾರನ್ನು ಪಡೆದಿರುವರೆಂದು ನಿಮಗೆ ಗೊತ್ತಿಲ್ಲವೇ? ಮತ್ತು ಇದಕ್ಕೆ ಮೊದಲು ನೀವು ಯೂಸುಫ್‌ನ ವಿಚಾರದಲ್ಲಿ ನೀಚತನ ತೋರಿರುವಿರಿ. ಹಾಗಾಗಿ ಸ್ವತಃ ನನ್ನ ತಂದೆಯವರು ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹನು ನನ್ನ ವಿಚಾರದ ತೀರ್ಪನ್ನು ಮಾಡುವ ತನಕ ನಾನಂತೂ ಈ ಭೂಪ್ರದೇಶವನ್ನು ಬಿಟ್ಟು ಕದಲಲಾರೆ ಮತ್ತು ಅಲ್ಲಾಹನೇ ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ. info
التفاسير:

external-link copy
81 : 12

اِرْجِعُوْۤا اِلٰۤی اَبِیْكُمْ فَقُوْلُوْا یٰۤاَبَانَاۤ اِنَّ ابْنَكَ سَرَقَ ۚ— وَمَا شَهِدْنَاۤ اِلَّا بِمَا عَلِمْنَا وَمَا كُنَّا لِلْغَیْبِ حٰفِظِیْنَ ۟

ನೀವು ನಿಮ್ಮ ತಂದೆಯ ಬಳಿಗೆ ಮರಳಿ ಹೋಗಿ ಹೇಳಿರಿ; ಓ ನಮ್ಮ ತಂದೆಯೇ ತಮ್ಮ ಮಗನು ಕದ್ದಿದ್ದಾನೆ ಮತ್ತು ನಾವು ನಮಗೆ ಗೊತ್ತಿರುವುದನ್ನೇ ಸಾಕ್ಷಿ ವಹಿಸಿರುತ್ತೇವೆ ಮತ್ತು ಅಗೋಚರ ಸಂಗತಿಯ ಕುರಿತು ಎಚ್ಚರಿಕೆ ವಹಿಸುವರು ನಾವಲ್ಲ. info
التفاسير:

external-link copy
82 : 12

وَسْـَٔلِ الْقَرْیَةَ الَّتِیْ كُنَّا فِیْهَا وَالْعِیْرَ الَّتِیْۤ اَقْبَلْنَا فِیْهَا ؕ— وَاِنَّا لَصٰدِقُوْنَ ۟

ನಾವು ಇದ್ದಂತಹ ಆ ನಾಡಿನವರಲ್ಲಿ, ಮತ್ತು ನಾವು ಬಂದ ಯಾತ್ರಾ ತಂಡದವರೊAದಿಗೆ ವಿಚಾರಿಸಿ ನೋಡಿರಿ ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ. info
التفاسير:

external-link copy
83 : 12

قَالَ بَلْ سَوَّلَتْ لَكُمْ اَنْفُسُكُمْ اَمْرًا ؕ— فَصَبْرٌ جَمِیْلٌ ؕ— عَسَی اللّٰهُ اَنْ یَّاْتِیَنِیْ بِهِمْ جَمِیْعًا ؕ— اِنَّهٗ هُوَ الْعَلِیْمُ الْحَكِیْمُ ۟

ಅವರ ತಂದೆಯೂ ಹೇಳಿದರು; ನೀವು ನಿಮ್ಮಿಂದಲೇ ಒಂದು ಸಂಗತಿಯನ್ನು ಉಂಟುಮಾಡಿರುವಿರಿ. ಇನ್ನು ಉತ್ತಮ ಸಹನÉಯೇ ಲೇಸು. ಅಲ್ಲಾಹನು ಅವರೆಲ್ಲರನ್ನೂ ನನ್ನ ಬಳಿಗೆ ತಲುಪಿಸಬಹುದು ಅವನೇ ಸರ್ವಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
84 : 12

وَتَوَلّٰی عَنْهُمْ وَقَالَ یٰۤاَسَفٰی عَلٰی یُوْسُفَ وَابْیَضَّتْ عَیْنٰهُ مِنَ الْحُزْنِ فَهُوَ كَظِیْمٌ ۟

ಅನಂತರ ಯಾಕೂಬರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಹೇಳಿದರು “ಅಯ್ಯೋ ಓ ನನ್ನ ಯೂಸುಫ್" ದುಃಖ ಸಂಕಟದಿAದ ಅವರ ಕಣ್ಣುಗಳೆರಡು ಬಿಳುಪಾಗಿ ಬಿಟ್ಟಿದ್ದವು, ಮತ್ತು ಅವರು ತೀವ್ರ ದುಃಖವನ್ನು ಅದುಮಿಟ್ಟುಕೊಂಡಿದ್ದರು. info
التفاسير:

external-link copy
85 : 12

قَالُوْا تَاللّٰهِ تَفْتَؤُا تَذْكُرُ یُوْسُفَ حَتّٰی تَكُوْنَ حَرَضًا اَوْ تَكُوْنَ مِنَ الْهٰلِكِیْنَ ۟

ಅವರ ಮಕ್ಕಳು ಹೇಳಿದರು; ಅಲ್ಲಾಹನಾಣೆ ನೀವಂತು ಸದಾ ಯೂಸುಫ್‌ನನ್ನು ನೆನೆಸುತ್ತಲೇ ತಮ್ಮನ್ನು ಕರಗಿಸಿಬಿಡುವಿರಿ ಅಥವಾ ನಾಶಗೊಳಿಸಿಕೊಳ್ಳುವಿರಿ. info
التفاسير:

external-link copy
86 : 12

قَالَ اِنَّمَاۤ اَشْكُوْا بَثِّیْ وَحُزْنِیْۤ اِلَی اللّٰهِ وَاَعْلَمُ مِنَ اللّٰهِ مَا لَا تَعْلَمُوْنَ ۟

ಅವರು(ಯಾಕೂಬ್) ಹೇಳಿದರು ನಾನಂತೂ ನನ್ನ ತಳಮಳವನ್ನು ಮತ್ತು ಸಂಕಟವನ್ನು ಅಲ್ಲಾಹನಲ್ಲಿ ತೋಡಿಕೊಳ್ಳುತ್ತಿರುವೆನು ಮತ್ತು ನೀವು ತಿಳಿದಿಲ್ಲದ್ದನ್ನು ಅಲ್ಲಾಹನ ಕಡೆಯಿಂದ ನಾನು ತಿಳಿದಿದ್ದೇನೆ. info
التفاسير: