Përkthimi i kuptimeve të Kuranit Fisnik - Përkthimi kanadezisht - Hamza Betur

external-link copy
90 : 5

یٰۤاَیُّهَا الَّذِیْنَ اٰمَنُوْۤا اِنَّمَا الْخَمْرُ وَالْمَیْسِرُ وَالْاَنْصَابُ وَالْاَزْلَامُ رِجْسٌ مِّنْ عَمَلِ الشَّیْطٰنِ فَاجْتَنِبُوْهُ لَعَلَّكُمْ تُفْلِحُوْنَ ۟

ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಮದ್ಯ, ಜೂಜು, ಬಲಿಪೀಠಗಳು ಮತ್ತು ಅದೃಷ್ಟ ಪರೀಕ್ಷಿಸುವ ಬಾಣಗಳು ಪೈಶಾಚಿಕವಾದ ಹೊಲಸು ಕೃತ್ಯಗಳಾಗಿವೆ. ಆದ್ದರಿಂದ ನೀವು ಅವುಗಳಿಂದ ದೂರವಿರಿ. ನೀವು ಯಶಸ್ವಿಯಾಗುವುದಕ್ಕಾಗಿ.[1] info

[1] ಅಮಲು ಪದಾರ್ಥಗಳೆಲ್ಲವೂ ಮದ್ಯದ ವ್ಯಾಪ್ತಿಯಲ್ಲಿ ಬರುತ್ತವೆ. ಲಾಟರಿ, ಮಟ್ಕಾ ಮುಂತಾದ ಹಣವಿಟ್ಟು ಆಡುವ ಆಟಗಳೆಲ್ಲವೂ ಜೂಜಿನ ವ್ಯಾಪ್ತಿಯಲ್ಲಿ ಬರುತ್ತವೆ. ಬಲಿಪೀಠಗಳು ಎಂದರೆ ಬಹುದೇವಾರಾಧಕರು ತಮ್ಮ ವಿಗ್ರಹಗಳಿಗೆ ಬಲಿ ನೀಡುವ ಪೀಠಗಳು. ಅದೃಷ್ಟ ಪರೀಕ್ಷಿಸುವ ಬಾಣಗಳು ಎಂದರೆ ಶುಭ ಮತ್ತು ಅಶುಭವನ್ನು ಪರೀಕ್ಷಿಸುವುದಕ್ಕಾಗಿ ಚೀಟಿಯೆತ್ತುವುದು. ಶುಭ ಎಂದು ಬಂದರೆ ಕೆಲಸದಲ್ಲಿ ಮುಂದುವರಿಯುವುದು ಮತ್ತು ಅಶುಭ ಎಂದು ಬಂದರೆ ಕೆಲಸವನ್ನು ಮೊಟಕುಗೊಳಿಸುವುದು.

التفاسير: