Përkthimi i kuptimeve të Kuranit Fisnik - Përkthimi kanadezisht - Hamza Betur

external-link copy
64 : 5

وَقَالَتِ الْیَهُوْدُ یَدُ اللّٰهِ مَغْلُوْلَةٌ ؕ— غُلَّتْ اَیْدِیْهِمْ وَلُعِنُوْا بِمَا قَالُوْا ۘ— بَلْ یَدٰهُ مَبْسُوْطَتٰنِ ۙ— یُنْفِقُ كَیْفَ یَشَآءُ ؕ— وَلَیَزِیْدَنَّ كَثِیْرًا مِّنْهُمْ مَّاۤ اُنْزِلَ اِلَیْكَ مِنْ رَّبِّكَ طُغْیَانًا وَّكُفْرًا ؕ— وَاَلْقَیْنَا بَیْنَهُمُ الْعَدَاوَةَ وَالْبَغْضَآءَ اِلٰی یَوْمِ الْقِیٰمَةِ ؕ— كُلَّمَاۤ اَوْقَدُوْا نَارًا لِّلْحَرْبِ اَطْفَاَهَا اللّٰهُ ۙ— وَیَسْعَوْنَ فِی الْاَرْضِ فَسَادًا ؕ— وَاللّٰهُ لَا یُحِبُّ الْمُفْسِدِیْنَ ۟

“ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆ” ಎಂದು ಯಹೂದಿಗಳು ಹೇಳಿದರು.[1] ಅವರ ಕೈಗಳನ್ನೇ ಸಂಕೋಲೆಯಿಂದ ಬಂಧಿಸಲಾಗಿದೆ ಮತ್ತು ಅವರ ಈ ಮಾತಿನಿಂದಾಗಿ ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅಲ್ಲ, ವಾಸ್ತವವಾಗಿ ಅಲ್ಲಾಹನ ಎರಡು ಕೈಗಳೂ ಚಾಚಿಕೊಂಡಿವೆ. ಅವನು ಇಚ್ಛಿಸುವಂತೆ ಅವನು ಖರ್ಚು ಮಾಡುತ್ತಾನೆ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟು ಮಾಡಿದ್ದೇವೆ. ಅವರು ಯುದ್ಧಕ್ಕೆ ಬೆಂಕಿ ಉರಿಸಿದಾಗಲೆಲ್ಲಾ ಅಲ್ಲಾಹು ಅದನ್ನು ನಂದಿಸುತ್ತಾನೆ. ಅವರು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಪರಿಶ್ರಮಿಸುತ್ತಾರೆ. ಆದರೆ ಅಲ್ಲಾಹು ಕಿಡಿಗೇಡಿಗಳನ್ನು ಇಷ್ಟಪಡುವುದಿಲ್ಲ. info

[1] ಬರಗಾಲ ಮತ್ತು ಸಂಕಷ್ಟಗಳು ಸಂಭವಿಸಿದಾಗ, ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆಯೆಂದು ಯಹೂದಿಗಳು ಹೇಳುತ್ತಿದ್ದರು.

التفاسير: