Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
34 : 40

وَلَقَدْ جَآءَكُمْ یُوْسُفُ مِنْ قَبْلُ بِالْبَیِّنٰتِ فَمَا زِلْتُمْ فِیْ شَكٍّ مِّمَّا جَآءَكُمْ بِهٖ ؕ— حَتّٰۤی اِذَا هَلَكَ قُلْتُمْ لَنْ یَّبْعَثَ اللّٰهُ مِنْ بَعْدِهٖ رَسُوْلًا ؕ— كَذٰلِكَ یُضِلُّ اللّٰهُ مَنْ هُوَ مُسْرِفٌ مُّرْتَابُ ۟ۚۖ

ಇದಕ್ಕೆ ಮೊದಲು ಯೂಸುಫರು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಆದರೂ ಅವರು ನಿಮ್ಮ ಬಳಿಗೆ ತಂದ (ಸಾಕ್ಷ್ಯಾಧಾರಗಳ) ಬಗ್ಗೆ ನೀವು ಸಂದೇಹದಲ್ಲೇ ಇದ್ದಿರಿ. ಎಲ್ಲಿಯವರೆಗೆಂದರೆ ಅವರು ನಿಧನರಾದಾಗ, “ಇವರ ಬಳಿಕ ಅಲ್ಲಾಹು ಇನ್ನೊಬ್ಬ ಸಂದೇಶವಾಹಕರನ್ನು ಕಳುಹಿಸುವುದಿಲ್ಲ” ಎಂದು ನೀವು ಹೇಳಿದಿರಿ. ಈ ರೀತಿ ಅಲ್ಲಾಹು ಎಲ್ಲೆ ಮೀರಿದವರನ್ನು ಮತ್ತು ಸಂಶಯಗ್ರಸ್ಥರನ್ನು ದಾರಿತಪ್ಪಿಸುತ್ತಾನೆ. info
التفاسير:

external-link copy
35 : 40

١لَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ؕ— كَبُرَ مَقْتًا عِنْدَ اللّٰهِ وَعِنْدَ الَّذِیْنَ اٰمَنُوْا ؕ— كَذٰلِكَ یَطْبَعُ اللّٰهُ عَلٰی كُلِّ قَلْبِ مُتَكَبِّرٍ جَبَّارٍ ۟

ಅವರು ತಮ್ಮ ಬಳಿಗೆ ಬಂದ ಯಾವುದೇ ಸ್ಪಷ್ಟ ಪುರಾವೆಯಿಲ್ಲದೆ ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರು. ಇದು ಅಲ್ಲಾಹನ ಬಳಿ ಮತ್ತು ಸತ್ಯವಿಶ್ವಾಸಿಗಳ ಬಳಿ ಮಹಾ ಅಸಂತೃಪ್ತಿಯ ವಿಷಯವಾಗಿದೆ. ಈ ರೀತಿ ಅಲ್ಲಾಹು ಎಲ್ಲಾ ಅಹಂಕಾರಿಗಳ ಮತ್ತು ಗರ್ವಿಷ್ಠರ ಹೃದಯಗಳಿಗೆ ಮೊಹರು ಹಾಕುತ್ತಾನೆ. info
التفاسير:

external-link copy
36 : 40

وَقَالَ فِرْعَوْنُ یٰهَامٰنُ ابْنِ لِیْ صَرْحًا لَّعَلِّیْۤ اَبْلُغُ الْاَسْبَابَ ۟ۙ

ಫರೋಹ ಹೇಳಿದನು: “ಓ ಹಾಮಾನ್! ನನಗೆ ಒಂದು ಗೋಪುರವನ್ನು ನಿರ್ಮಿಸಿಕೊಡು. ನಾನು ಆ ಬಾಗಿಲುಗಳಿಗೆ ತಲುಪುವುದಕ್ಕಾಗಿ. info
التفاسير:

external-link copy
37 : 40

اَسْبَابَ السَّمٰوٰتِ فَاَطَّلِعَ اِلٰۤی اِلٰهِ مُوْسٰی وَاِنِّیْ لَاَظُنُّهٗ كَاذِبًا ؕ— وَكَذٰلِكَ زُیِّنَ لِفِرْعَوْنَ سُوْٓءُ عَمَلِهٖ وَصُدَّ عَنِ السَّبِیْلِ ؕ— وَمَا كَیْدُ فِرْعَوْنَ اِلَّا فِیْ تَبَابٍ ۟۠

ಅಂದರೆ ಆಕಾಶಗಳ ಬಾಗಿಲುಗಳಿಗೆ. ನನಗೆ ಮೂಸಾನ ದೇವನನ್ನು ಇಣುಕಿ ನೋಡಬೇಕು. ನಿಶ್ಚಯವಾಗಿಯೂ ಅವನು ಸುಳ್ಳು ಹೇಳುತ್ತಿದ್ದಾನೆಂದು ನಾನು ಭಾವಿಸುತ್ತಿದ್ದೇನೆ.” ಈ ರೀತಿ ಫರೋಹ‍ನಿಗೆ ಅವನ ದುಷ್ಕೃತ್ಯವನ್ನು ಅಲಂಕರಿಸಿ ತೋರಿಸಲಾಗಿದೆ ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಗಿದೆ. ಫರೋಹನ (ಎಲ್ಲಾ) ತಂತ್ರಗಾರಿಕೆಗಳು ನಷ್ಟದಲ್ಲೇ ಇವೆ. info
التفاسير:

external-link copy
38 : 40

وَقَالَ الَّذِیْۤ اٰمَنَ یٰقَوْمِ اتَّبِعُوْنِ اَهْدِكُمْ سَبِیْلَ الرَّشَادِ ۟ۚ

ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ನನ್ನನ್ನು ಅನುಸರಿಸಿರಿ! ನಾನು ನಿಮಗೆ ಒಳಿತನ ಮಾರ್ಗವನ್ನು ತೋರಿಸುತ್ತೇನೆ. info
التفاسير:

external-link copy
39 : 40

یٰقَوْمِ اِنَّمَا هٰذِهِ الْحَیٰوةُ الدُّنْیَا مَتَاعٌ ؗ— وَّاِنَّ الْاٰخِرَةَ هِیَ دَارُ الْقَرَارِ ۟

ಓ ನನ್ನ ಜನರೇ! ಈ ಇಹಲೋಕ ಜೀವನವು ಒಂದು (ತಾತ್ಕಾಲಿಕ) ಆನಂದವಾಗಿದೆ. ನಿಶ್ಚಯವಾಗಿಯೂ ಶಾಶ್ವತ ವಾಸದ ಭವನವು ಪರಲೋಕವಾಗಿದೆ. info
التفاسير:

external-link copy
40 : 40

مَنْ عَمِلَ سَیِّئَةً فَلَا یُجْزٰۤی اِلَّا مِثْلَهَا ۚ— وَمَنْ عَمِلَ صَالِحًا مِّنْ ذَكَرٍ اَوْ اُ وَهُوَ مُؤْمِنٌ فَاُولٰٓىِٕكَ یَدْخُلُوْنَ الْجَنَّةَ یُرْزَقُوْنَ فِیْهَا بِغَیْرِ حِسَابٍ ۟

ಯಾರು ಒಂದು ಕೆಡುಕು ಮಾಡುತ್ತಾರೋ ಅವನಿಗೆ ಅದಕ್ಕೆ ಸಮಾನವಾದ ಪ್ರತಿಫಲವನ್ನೇ ನೀಡಲಾಗುತ್ತದೆ. ಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾರೋ ಅವರು—ಪುರುಷರಾಗಿದ್ದರೂ ಸ್ತ್ರೀಯರಾಗಿದ್ದರೂ—ಸ್ವರ್ಗವನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಲೆಕ್ಕವಿಲ್ಲದೆ ಉಪಜೀವನವನ್ನು ಒದಗಿಸಲಾಗುವುದು. info
التفاسير: