[1] ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಿಕ್ಕಪ್ಪ ಅಬೂತಾಲಿಬ್ ಮುಸ್ಲಿಂ ಆಗಿರಲಿಲ್ಲ. ಅವರು ಇಸ್ಲಾಂ ಸ್ವೀಕರಿಸಬೇಕೆಂದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತೀವ ಆಸೆಯಿತ್ತು. ಅದಕ್ಕಾಗಿ ಅವರು ಬಹಳ ಪ್ರಯತ್ನ ಪಟ್ಟಿದ್ದರು. ಚಿಕ್ಕಪ್ಪ ಮರಣಶಯ್ಯೆಯಲ್ಲಿ ಮಲಗಿರುವಾಗಲೂ ಸಹ ಅವರು ಹತ್ತಿರ ಕುಳಿತು ನಾನಾ ರೀತಿಯಲ್ಲಿ ತಿಳಿಹೇಳುತ್ತಿದ್ದರು. ಆದರೆ ಅಬೂತಾಲಿಬ್ ಇಸ್ಲಾಂ ಸ್ವೀಕರಿಸದೆ ಸತ್ಯನಿಷೇಧಿಯಾಗಿಯೇ ನಿಧನರಾದರು. ಇದರಿಂದ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಹಳ ದುಃಖವಾಯಿತು. ಆಗ ಈ ವಚನವು ಅವತೀರ್ಣವಾಯಿತು.