Përkthimi i kuptimeve të Kuranit Fisnik - Përkthimi kanadezisht - Hamza Betur

external-link copy
92 : 16

وَلَا تَكُوْنُوْا كَالَّتِیْ نَقَضَتْ غَزْلَهَا مِنْ بَعْدِ قُوَّةٍ اَنْكَاثًا ؕ— تَتَّخِذُوْنَ اَیْمَانَكُمْ دَخَلًا بَیْنَكُمْ اَنْ تَكُوْنَ اُمَّةٌ هِیَ اَرْبٰی مِنْ اُمَّةٍ ؕ— اِنَّمَا یَبْلُوْكُمُ اللّٰهُ بِهٖ ؕ— وَلَیُبَیِّنَنَّ لَكُمْ یَوْمَ الْقِیٰمَةِ مَا كُنْتُمْ فِیْهِ تَخْتَلِفُوْنَ ۟

ನೂಲನ್ನು ಗಟ್ಟಿಯಾಗಿ ಸುತ್ತಿದ ಬಳಿಕ ಅದನ್ನು ಎಳೆ ಎಳೆಯಾಗಿ ಬಿಡಿಸಿ ಎಸೆಯುವ ಮಹಿಳೆಯಂತೆ ನೀವಾಗಬೇಡಿ—ನಿಮ್ಮಲ್ಲೊಂದು ಗುಂಪು ಇನ್ನೊಂದು ಗುಂಪಿಗಿಂತ ಹೆಚ್ಚಾಗಿರುವ ಕಾರಣ ನೀವು ನಿಮ್ಮ ಆಣೆಗಳನ್ನು (ಕರಾರುಗಳನ್ನು) ಪರಸ್ಪರ ವಂಚನೆಯ ಮಾರ್ಗವಾಗಿ ಮಾಡುತ್ತಿದ್ದೀರಿ.[1] ಅಲ್ಲಾಹು ಅದರ ಮೂಲಕ ಕೇವಲ ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಯಾವ ವಿಷಯದಲ್ಲಿ ನೀವು ಭಿನ್ನಮತ ತಳೆದಿದ್ದಿರೋ ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಖಂಡಿತ ವಿವರಿಸಿಕೊಡುವನು. info

[1] ಅಂದರೆ ನಾವು ಯಾವುದೇ ಸ್ಥಿತಿಯಲ್ಲೂ ನಿಮಗೆ ಸಹಾಯ ಮಾಡುತ್ತೇವೆಂದು ಒಂದು ಗುಂಪಿಗೆ ವಾಗ್ದಾನ ಮಾಡಿ ಅವರೊಡನೆ ಮೈತ್ರಿಯ ಕರಾರು ಮಾಡುತ್ತೀರಿ. ನಂತರ ಅವರಿಗೆ ವಿರುದ್ಧವಾಗಿ ಅವರಿಗಿಂತಲೂ ಹೆಚ್ಚು ಜನಬಲ ಅಥವಾ ಧನಬಲವಿರುವ ಗುಂಪಿನೊಂದಿಗೆ ಮೈತ್ರಿ ಮಾಡುವ ಅವಕಾಶ ಸಿಕ್ಕಿದರೆ ಮೊದಲನೆ ಗುಂಪಿನೊಂದಿಗೆ ಮಾಡಿದ ಕರಾರನ್ನು ಎಸೆದು ಈ ಗುಂಪಿನೊಂದಿಗೆ ಮೈತ್ರಿಯ ಕರಾರು ಮಾಡಿಕೊಳ್ಳುತ್ತೀರಿ. ಇಂತಹ ಸ್ಥಿತಿಯು ಇಸ್ಲಾಮೀ ಪೂರ್ವ ಜಾಹಿಲೀ ಕಾಲದಲ್ಲಿ ಸಾಮಾನ್ಯವಾಗಿತ್ತು. ಇದನ್ನು ಇಸ್ಲಾಂ ವಿರೋಧಿಸುತ್ತದೆ.

التفاسير: