Përkthimi i kuptimeve të Kuranit Fisnik - Përkthimi kanadezisht - Hamza Betur

ಅಲ್- ಆದಿಯಾತ್

external-link copy
1 : 100

وَالْعٰدِیٰتِ ضَبْحًا ۟ۙ

ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ! info
التفاسير:

external-link copy
2 : 100

فَالْمُوْرِیٰتِ قَدْحًا ۟ۙ

ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ! info
التفاسير:

external-link copy
3 : 100

فَالْمُغِیْرٰتِ صُبْحًا ۟ۙ

ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ! info
التفاسير:

external-link copy
4 : 100

فَاَثَرْنَ بِهٖ نَقْعًا ۟ۙ

ಆಗ ಅವು ಧೂಳನ್ನು ಹರಡುತ್ತವೆ. info
التفاسير:

external-link copy
5 : 100

فَوَسَطْنَ بِهٖ جَمْعًا ۟ۙ

ನಂತರ ಅದರ ಮೂಲಕ ಸೈನ್ಯಗಳ ನಡುಭಾಗಕ್ಕೆ ನುಗ್ಗುತ್ತವೆ. info
التفاسير:

external-link copy
6 : 100

اِنَّ الْاِنْسَانَ لِرَبِّهٖ لَكَنُوْدٌ ۟ۚ

ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ. info
التفاسير:

external-link copy
7 : 100

وَاِنَّهٗ عَلٰی ذٰلِكَ لَشَهِیْدٌ ۟ۚ

ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ. info
التفاسير:

external-link copy
8 : 100

وَاِنَّهٗ لِحُبِّ الْخَیْرِ لَشَدِیْدٌ ۟ؕ

ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ. info
التفاسير:

external-link copy
9 : 100

اَفَلَا یَعْلَمُ اِذَا بُعْثِرَ مَا فِی الْقُبُوْرِ ۟ۙ

ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ? info
التفاسير:

external-link copy
10 : 100

وَحُصِّلَ مَا فِی الصُّدُوْرِ ۟ۙ

ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ). info
التفاسير:

external-link copy
11 : 100

اِنَّ رَبَّهُمْ بِهِمْ یَوْمَىِٕذٍ لَّخَبِیْرٌ ۟۠

ನಿಶ್ಚಯವಾಗಿಯೂ ಅಂದು ಅವರ ಪರಿಪಾಲಕನು (ಅಲ್ಲಾಹು) ಅವರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ. info
التفاسير: