Përkthimi i kuptimeve të Kuranit Fisnik - Përkthimi kanadisht - Bashir Mysuri

Numri i faqes:close

external-link copy
10 : 59

وَالَّذِیْنَ جَآءُوْ مِنْ بَعْدِهِمْ یَقُوْلُوْنَ رَبَّنَا اغْفِرْ لَنَا وَلِاِخْوَانِنَا الَّذِیْنَ سَبَقُوْنَا بِالْاِیْمَانِ وَلَا تَجْعَلْ فِیْ قُلُوْبِنَا غِلًّا لِّلَّذِیْنَ اٰمَنُوْا رَبَّنَاۤ اِنَّكَ رَءُوْفٌ رَّحِیْمٌ ۟۠

ಮತ್ತು ಆ ಸೊತ್ತು ಅವರ ನಂತರ ಬಂದವರಿಗೂ ಆಗಿದೆ, ಅವರು ಹೀಗೆ ಪ್ರಾರ್ಥಿಸುತ್ತಾರೆ, ಓ ನಮ್ಮ ಪ್ರಭುವೇ ನಮ್ಮನ್ನು ಮತ್ತು ನಮಗಿಂತ ಮೊದಲು ಸತ್ಯವಿಶ್ವಾಸ ಸ್ವೀಕರಿಸಿದ ಆ ನಮ್ಮ ಸಹೋದರರನ್ನು ಕ್ಷಮಿಸಿಬಿಡು ಹಾಗೂ ನಮ್ಮ ಹೃದಯಗಳಲ್ಲಿ ಸತ್ಯ ವಿಶ್ವಾಸಿಗಳ ಬಗ್ಗೆ ಯಾವುದೇ ಹಗೆತನವನ್ನು ಇರಿಸದಿರು, ಓ ನಮ್ಮ ಪ್ರಭುವೇ ನಿಸ್ಸಂಶಯವಾಗಿಯೂ ನೀನು ಕೃಪಾಳು, ಕರುಣಾನಿಧಿಯು ಆಗಿರುವೆ. info
التفاسير:

external-link copy
11 : 59

اَلَمْ تَرَ اِلَی الَّذِیْنَ نَافَقُوْا یَقُوْلُوْنَ لِاِخْوَانِهِمُ الَّذِیْنَ كَفَرُوْا مِنْ اَهْلِ الْكِتٰبِ لَىِٕنْ اُخْرِجْتُمْ لَنَخْرُجَنَّ مَعَكُمْ وَلَا نُطِیْعُ فِیْكُمْ اَحَدًا اَبَدًا ۙ— وَّاِنْ قُوْتِلْتُمْ لَنَنْصُرَنَّكُمْ ؕ— وَاللّٰهُ یَشْهَدُ اِنَّهُمْ لَكٰذِبُوْنَ ۟

(ಓ ಪೈಗಂಬರರೇ) ನೀವು ಕಪಟ ವಿಶ್ವಾಸಿಗಳನ್ನು ನೋಡಲಿಲ್ಲವೇ ? ಅವರು ಗ್ರಂಥದವರಾದ ತಮ್ಮ ಸತ್ಯನಿಷೇಧಿ ಸಹೋದರರಿಗೆ ಹೇಳುತ್ತಾರೆ; ನೀವು ಗಡಿಪಾರುಗೊಳಿಸಲ್ಪಟ್ಟರೆ ಖಂಡಿತ ನಾವು ಸಹ ನಿಮ್ಮೊಂದಿಗೆ ಹೊರಡುತ್ತೇವೆ ಹಾಗೂ ನಿಮ್ಮ ವಿಚಾರದಲ್ಲಿ ಎಂದಿಗೂ ಯಾರನ್ನು ಅನುಸರಿಸಲಾರೆವು ಇನ್ನು ನಿಮ್ಮೊಂದಿಗೆ ಯುದ್ಧ ಮಾಡಲಾದರೆ ಖಂಡಿತ ನಾವು ನಿಮಗೆ ಸಹಾಯಮಾಡುತ್ತೇವೆ, ಆದರೆ ಇವರು ನಿಜವಾಗಿಯೂ ಸುಳ್ಳುಗಾರರಾಗಿದ್ದಾರೆಂದು ಅಲ್ಲಾಹನು ಸಾಕ್ಷö್ಯವಹಿಸುತ್ತಾನೆ. info
التفاسير:

external-link copy
12 : 59

لَىِٕنْ اُخْرِجُوْا لَا یَخْرُجُوْنَ مَعَهُمْ ۚ— وَلَىِٕنْ قُوْتِلُوْا لَا یَنْصُرُوْنَهُمْ ۚ— وَلَىِٕنْ نَّصَرُوْهُمْ لَیُوَلُّنَّ الْاَدْبَارَ ۫— ثُمَّ لَا یُنْصَرُوْنَ ۟

ಅವರೇನಾದರೂ ಗಡಿಪಾರುಗೊಳಿಸಲ್ಪಟ್ಟರೆ ಇವರು ಅವರೊಂದಿಗೆ ಹೊರಡಲಾರರು ಮತ್ತು ಅವರೊಂದಿಗೆ ಯುದ್ಧ ಮಾಡಲಾರದೆ ಇವರು ಅವರಿಗೆ ಸಹಾಯವನ್ನೂ ಮಾಡಲಾರರು ಮತ್ತು ಇವರು ಅವರಿಗೆ ಸಹಾಯ ಮಾಡಲು ಮುಂದೆ ಬಂದರೂ ಖಂಡಿತ ಬೆನ್ನು ತಿರುಗಿಸಿ ಓಡುವರು ಬಳಿಕ ಅವರಿಗೆ ಯಾವ ಸಹಾಯವೂ ದೊರಕಲಾರದು. info
التفاسير:

external-link copy
13 : 59

لَاَنْتُمْ اَشَدُّ رَهْبَةً فِیْ صُدُوْرِهِمْ مِّنَ اللّٰهِ ؕ— ذٰلِكَ بِاَنَّهُمْ قَوْمٌ لَّا یَفْقَهُوْنَ ۟

( ಓ ಸತ್ಯ ವಿಶ್ವಾಸಿಗಳೇ) ಅವರ ಹೃದಯಗಳಲ್ಲಿ ಅಲ್ಲಾಹನ ಭಯಕ್ಕಿಂತಲೂ ನಿಮ್ಮ ಭಯವಿದೆ. ಇದೇಕೆಂದರೆ ಅವರು ಅವಿವೇಕಿಗಳಾಗಿದ್ದಾರೆ. info
التفاسير:

external-link copy
14 : 59

لَا یُقَاتِلُوْنَكُمْ جَمِیْعًا اِلَّا فِیْ قُرًی مُّحَصَّنَةٍ اَوْ مِنْ وَّرَآءِ جُدُرٍ ؕ— بَاْسُهُمْ بَیْنَهُمْ شَدِیْدٌ ؕ— تَحْسَبُهُمْ جَمِیْعًا وَّقُلُوْبُهُمْ شَتّٰی ؕ— ذٰلِكَ بِاَنَّهُمْ قَوْمٌ لَّا یَعْقِلُوْنَ ۟ۚ

ಕೋಟೆಗಳಿಂದ ಆವೃತವಾದ ಪ್ರದೇಶಗಳಿಂದ ಅಥವ ಗೋಡೆಗಳ ಮರೆಯಲ್ಲಿ ಅವಿತುಕೊಂಡು ಮಾತ್ರವಲ್ಲದೆ ಅವರು ಒಟ್ಟಾಗಿ ನಿಮ್ಮೊಂದಿಗೆ ಯುದ್ಧ ಮಾಡಲಾರರು. ಅವರ ಒಳಗೊಳಗಿನ ಜಗಳವು ಪ್ರಬಲವಾಗಿದೆ; ನೀವು ಅವರನ್ನು ಒಟ್ಟಾಗಿರುವರೆಂದು ಭಾವಿಸಿ ಕೊಂಡಿದ್ದೀರಾ. ಆದರೆ ಅವರ ಹೃದಯಗಳು ಪರಸ್ಪರ ಭಿನ್ನವಾಗಿವೆ, ಇದೇಕೆಂದರೆ ಅವರು ಬುದ್ಧಿ ಇಲ್ಲದ ಜನರಾಗಿದ್ದಾರೆ. info
التفاسير:

external-link copy
15 : 59

كَمَثَلِ الَّذِیْنَ مِنْ قَبْلِهِمْ قَرِیْبًا ذَاقُوْا وَبَالَ اَمْرِهِمْ ۚ— وَلَهُمْ عَذَابٌ اَلِیْمٌ ۟ۚ

ಇವರ ಸ್ಥಿತಿಯು ಇವರಿಗಿಂತ ಮೊದಲು ಹತ್ತಿರದಲ್ಲೇ ಗತಿಸಿದವರ ಸ್ಥಿತಿಯಂತಿದೆ. ಅವರು ತಮ್ಮ ಕೃತ್ಯಗಳ ದುಷ್ಪರಿಣಾಮವನ್ನು ಸವಿದಿದ್ದರು ಮತ್ತು ಅವರಿಗೆ ವೇದನಾಜನಕ ಯಾತನೆಯು ಸಿದ್ಧವಿದೆ. info
التفاسير:

external-link copy
16 : 59

كَمَثَلِ الشَّیْطٰنِ اِذْ قَالَ لِلْاِنْسَانِ اكْفُرْ ۚ— فَلَمَّا كَفَرَ قَالَ اِنِّیْ بَرِیْٓءٌ مِّنْكَ اِنِّیْۤ اَخَافُ اللّٰهَ رَبَّ الْعٰلَمِیْنَ ۟

ಇವರ (ಕಪಟಿಗಳ) ಉದಾಹರಣೆಯು ಶೈತಾನನಂತಿದೆ ಅವನು ಮನುಷ್ಯನಿಗೆ ನೀನು ಸತ್ಯವನ್ನು ನಿಷೇಧಿಸು ಎಂದನು. ಅವನು ಸತ್ಯವನ್ನು ನಿಷೇಧಿಸಿದಾಗ ಹೇಳಿದನು; ನಾನಂತೂ ನಿನ್ನಿಂದ ಸಂಬAಧ ಮುಕ್ತನಾಗಿದ್ದೇನೆ. ನಾನು ಸಕಲ ಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ. info
التفاسير: