Përkthimi i kuptimeve të Kuranit Fisnik - Përkthimi kanadisht - Bashir Mysuri

external-link copy
15 : 47

مَثَلُ الْجَنَّةِ الَّتِیْ وُعِدَ الْمُتَّقُوْنَ ؕ— فِیْهَاۤ اَنْهٰرٌ مِّنْ مَّآءٍ غَیْرِ اٰسِنٍ ۚ— وَاَنْهٰرٌ مِّنْ لَّبَنٍ لَّمْ یَتَغَیَّرْ طَعْمُهٗ ۚ— وَاَنْهٰرٌ مِّنْ خَمْرٍ لَّذَّةٍ لِّلشّٰرِبِیْنَ ۚ۬— وَاَنْهٰرٌ مِّنْ عَسَلٍ مُّصَفًّی ؕ— وَلَهُمْ فِیْهَا مِنْ كُلِّ الثَّمَرٰتِ وَمَغْفِرَةٌ مِّنْ رَّبِّهِمْ ؕ— كَمَنْ هُوَ خَالِدٌ فِی النَّارِ وَسُقُوْا مَآءً حَمِیْمًا فَقَطَّعَ اَمْعَآءَهُمْ ۟

ಭಯಭಕ್ತಿಯುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಸ್ವರ್ಗೋದ್ಯಾನದ ಗುಣವಿಶೇಷ ಹೀಗಿದೆ – ಅದರಲ್ಲಿ ಬದಲಾವಣೆ ಹೊಂದದAತಹ ನೀರಿನ ನದಿಗಳಿವೆ. ರುಚಿ ಬದಲಾಗದಂತಹ ಹಾಲಿನ ನದಿಗಳಿವೆ. ಕುಡಿಯುವವರಿಗೆ ಅತ್ಯಂತ ಸ್ವಾದಿಷ್ಟವಾದ ಮದ್ಯದ ನದಿಗಳಿವೆ ಮತ್ತು ಪರಿಶುದ್ಧಗೊಳಿಸಲಾದ ಜೇನಿನ ನದಿಗಳು ಇವೆ. ಅದರಲ್ಲಿ ಅವರಿಗೆ ಎಲ್ಲ ವಿಧದ ಹಣ್ಣು ಹಂಪಲುಗಳಿವೆ ಮತ್ತು ಅವರಿಗೆ ಅವರ ಪ್ರಭುವಿನ ಕ್ಷಮೆಯೂ ಇದೆ. ಇಂತಹಾ ಸ್ವರ್ಗವಾಸಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುವ ವ್ಯಕ್ತಿಗಳಂತಾಗುವರೇ ? ಅವರಿಗೆ ಕರುಳುಗಳನ್ನು ಕತ್ತರಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವುದು. info
التفاسير: