Përkthimi i kuptimeve të Kuranit Fisnik - Përkthimi kanadisht - Bashir Mysuri

Numri i faqes:close

external-link copy
260 : 2

وَاِذْ قَالَ اِبْرٰهٖمُ رَبِّ اَرِنِیْ كَیْفَ تُحْیِ الْمَوْتٰی ؕ— قَالَ اَوَلَمْ تُؤْمِنْ ؕ— قَالَ بَلٰی وَلٰكِنْ لِّیَطْمَىِٕنَّ قَلْبِیْ ؕ— قَالَ فَخُذْ اَرْبَعَةً مِّنَ الطَّیْرِ فَصُرْهُنَّ اِلَیْكَ ثُمَّ اجْعَلْ عَلٰی كُلِّ جَبَلٍ مِّنْهُنَّ جُزْءًا ثُمَّ ادْعُهُنَّ یَاْتِیْنَكَ سَعْیًا ؕ— وَاعْلَمْ اَنَّ اللّٰهَ عَزِیْزٌ حَكِیْمٌ ۟۠

(ಇಬ್ರಾಹೀಮ್(ಅ)) ಓ ನನ್ನ ಪ್ರಭು ನೀನು ಮೃತರನ್ನು ಹೇಗೆ ಜೀವಂತಗೊಳಿಸುವೆAಬುದನ್ನು ನನಗೆ ತೋರಿಸಿಕೊಡು ಎಂದು ನಿವೇದಿಸಿದರು. ಅವನು (ಅಲ್ಲಾಹ್)ಹೇಳಿದನು; ನಿನಗೆ ನಂಬಿಕೆಯಿಲ್ಲವೇ? ಅವರು ಹೇಳಿದರು; ಏಕಿಲ್ಲ ಆದರೆ ಇದು ನನ್ನ ಮನಸ್ಸಿಗೆ ಸಮಾಧಾನವಾಗಲೆಂದಾಗಿದೆ. ಅವನು (ಅಲ್ಲಾಹ್) ಹೇಳಿದನು; ನೀನು ನಾಲ್ಕು ಪಕ್ಷಿಗಳನ್ನು ಹಿಡಿದು ಅವುಗಳನ್ನು ಪಳಗಿಸಿ ನಂತರ ತುಂಡರಿಸಿ ಒಂದೊAದು ಭಾಗವನ್ನು ಪ್ರತಿಯೊಂದು ಬೆಟ್ಟದ ಮೇಲಿಡು. ಅನಂತರ ನೀನು ಅವುಗಳನ್ನು ಕೂಗಿ ಕರೆ. ಅವು ಧಾವಿಸುತ್ತಾ ನಿನ್ನೆಡೆಗೆ ಬರುವುವು ಮತ್ತು ನಿಶ್ಚಯವಾಗಿಯು ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ. info
التفاسير:

external-link copy
261 : 2

مَثَلُ الَّذِیْنَ یُنْفِقُوْنَ اَمْوَالَهُمْ فِیْ سَبِیْلِ اللّٰهِ كَمَثَلِ حَبَّةٍ اَنْۢبَتَتْ سَبْعَ سَنَابِلَ فِیْ كُلِّ سُنْۢبُلَةٍ مِّائَةُ حَبَّةٍ ؕ— وَاللّٰهُ یُضٰعِفُ لِمَنْ یَّشَآءُ ؕ— وَاللّٰهُ وَاسِعٌ عَلِیْمٌ ۟

ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತುಗಳನ್ನು ಖರ್ಚುಮಾಡುವವರ ಉಪಮೆಯು ಒಂದು ಕಾಳಿನಂತೆ ಅದನ್ನು ಬಿತ್ತಿ ಅದು ಮೊಳಕೆಯೊಡೆದು ಏಳುತೆನೆಗಳನ್ನು ಬೆಳೆಸಿತು ಪ್ರತಿಯೊಂದು ತೆನೆಯಲ್ಲೂ ನೂರು ಕಾಳುಗಳಿವೆ ಮತ್ತು ಅಲ್ಲಾಹನು ತಾನಿಚ್ಛಿಸಿದವರಿಗೆ ಪ್ರತಿಫಲವನ್ನು ಇನ್ನೂ ಹೆಚ್ಚಿಸುವನು ಮತ್ತು ಅಲ್ಲಾಹನು ಅತಿವಿಶಾಲನೂ, ಸರ್ವಜ್ಞಾನಿಯೂ ಆಗಿರುವನು. info
التفاسير:

external-link copy
262 : 2

اَلَّذِیْنَ یُنْفِقُوْنَ اَمْوَالَهُمْ فِیْ سَبِیْلِ اللّٰهِ ثُمَّ لَا یُتْبِعُوْنَ مَاۤ اَنْفَقُوْا مَنًّا وَّلَاۤ اَذًی ۙ— لَّهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟

ಯಾರು ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತುಗಳನ್ನು ಖರ್ಚು ಮಾಡುತ್ತಾರೋ ಬಳಿಕ ತಾವು ಖರ್ಚು ಮಾಡಿದ್ದನ್ನು ಔದಾರ್ಯವಾಗಿ ಹೇಳಿಕೊಳ್ಳುವುದನ್ನಾಗಲೀ ಅಥವಾ ತೊಂದರೆ ಕೊಡುವುದನ್ನಾಗಲೀ ಮಾಡುವುದಿಲ್ಲವೋ ಅವರ ಪ್ರತಿಫಲವು ಅವರ ಪ್ರಭುವಿನ ಬಳಿಯಿದೆ ಮತ್ತು ಅವರ ಮೇಲೆ ಯಾವುದೇ ಭಯವಾಗಲೀ, ವ್ಯಥೆಯಾಗಲೀ ಬಾಧಿಸದು. info
التفاسير:

external-link copy
263 : 2

قَوْلٌ مَّعْرُوْفٌ وَّمَغْفِرَةٌ خَیْرٌ مِّنْ صَدَقَةٍ یَّتْبَعُهَاۤ اَذًی ؕ— وَاللّٰهُ غَنِیٌّ حَلِیْمٌ ۟

ಮನ ನೋಯಿಸುವ ದಾನ ಧರ್ಮಕ್ಕಿಂತಲೂ ಸಭ್ಯವಾದ ಮಾತು ಮತ್ತು ಕ್ಷಮೆಯು ಉತ್ತಮವಾಗಿದೆ ಮತ್ತು ಅಲ್ಲಾಹನು ನಿರಪೇಕ್ಷನೂ, ಸಹನಶೀಲನೂ ಆಗಿರುವನು. info
التفاسير:

external-link copy
264 : 2

یٰۤاَیُّهَا الَّذِیْنَ اٰمَنُوْا لَا تُبْطِلُوْا صَدَقٰتِكُمْ بِالْمَنِّ وَالْاَذٰی ۙ— كَالَّذِیْ یُنْفِقُ مَالَهٗ رِئَآءَ النَّاسِ وَلَا یُؤْمِنُ بِاللّٰهِ وَالْیَوْمِ الْاٰخِرِ ؕ— فَمَثَلُهٗ كَمَثَلِ صَفْوَانٍ عَلَیْهِ تُرَابٌ فَاَصَابَهٗ وَابِلٌ فَتَرَكَهٗ صَلْدًا ؕ— لَا یَقْدِرُوْنَ عَلٰی شَیْءٍ مِّمَّا كَسَبُوْا ؕ— وَاللّٰهُ لَا یَهْدِی الْقَوْمَ الْكٰفِرِیْنَ ۟

ಓ ಸತ್ಯವಿಶ್ವಾಸಿಗಳೇ, ಔದಾರ್ಯವಾಗಿ ಹೇಳಿಕೊಂಡಾಗಲಿ ಮನ ನೋಯಿಸಿಯಾಗಲಿ ನೀವು ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದೆÀ ಜನರಿಗೆ ತೋರಿಸಲು ಖರ್ಚು ಮಾಡುವ ಒಬ್ಬನ ಹಾಗೆ ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅವನ ಉಪಮೆಯು ಒಂದು ನುಣುಪಾದ ಬಂಡೆಯ ಮೇಲಿನ ಮಣ್ಣಿನಂತಿದೆ ಅವನು ಆ ಮಣ್ಣಿನಲ್ಲಿ ಬಿತ್ತಿ ಫಸಲನ್ನು ನಿರೀಕ್ಷಿಸುತ್ತಾನೆ. ಆದರೆ ಅದರ ಮೇಲೆ ಧಾರಾಕಾರವಾದ ಮಳೆ ಸುರಿದರೆ ಮಣ್ಣು ಕೊಚ್ಚಿ ಹೋಗಿ ಬಂಡೆ ಬರಿದಾಗಿ ಬಿಡುತ್ತದೆ. ಈ ರೀತಿ (ತೋರಿಕೆಗೆ) ಖರ್ಚು ಮಾಡುವರು ತಮ್ಮ ಪುಣ್ಯ ಕಾರ್ಯಗಳ ಸ್ವಲ್ಪ ಪ್ರತಿಫಲವನ್ನು ಪಡೆಯಲಾರರು. ಮತ್ತು ಅಲ್ಲಾಹನು ಸತ್ಯನಿಷೇಧಿ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ. info
التفاسير: