Përkthimi i kuptimeve të Kuranit Fisnik - Përkthimi kanadisht - Bashir Mysuri

ಹೂದ್

external-link copy
1 : 11

الٓرٰ ۫— كِتٰبٌ اُحْكِمَتْ اٰیٰتُهٗ ثُمَّ فُصِّلَتْ مِنْ لَّدُنْ حَكِیْمٍ خَبِیْرٍ ۟ۙ

ಅಲಿಫ್ ಲಾಮ್ ರಾ, ಇದೊಂದು ಉನ್ನತವಾದಂತಹ ಗ್ರಂಥ, ಇದರ ಸೂಕ್ತಿಗಳಲ್ಲಿ ಯುಕ್ತಿಯನ್ನು ತುಂಬಲಾಗಿದೆ ಅನಂತರ ಇವು ಸುಜ್ಞಾನಿಯು ಯುಕ್ತಿ ಪೂರ್ಣನು ಆದ ಅಲ್ಲಾಹನ ಕಡೆಯಿಂದ ಸ್ಪಷ್ಟವಾಗಿ ವಿವರಿಸಲ್ಪಟ್ಟಿವೆ. info
التفاسير:

external-link copy
2 : 11

اَلَّا تَعْبُدُوْۤا اِلَّا اللّٰهَ ؕ— اِنَّنِیْ لَكُمْ مِّنْهُ نَذِیْرٌ وَّبَشِیْرٌ ۟ۙ

ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ. ನಿಶ್ಚಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಮುನ್ನೆಚ್ಚರಿಕೆ ನೀಡುವವನೂ ಶುಭವಾರ್ತೆ ಕೊಡುವವನು ಆಗಿದ್ದೇನೆ. info
التفاسير:

external-link copy
3 : 11

وَّاَنِ اسْتَغْفِرُوْا رَبَّكُمْ ثُمَّ تُوْبُوْۤا اِلَیْهِ یُمَتِّعْكُمْ مَّتَاعًا حَسَنًا اِلٰۤی اَجَلٍ مُّسَمًّی وَّیُؤْتِ كُلَّ ذِیْ فَضْلٍ فَضْلَهٗ ؕ— وَاِنْ تَوَلَّوْا فَاِنِّیْۤ اَخَافُ عَلَیْكُمْ عَذَابَ یَوْمٍ كَبِیْرٍ ۟

ನೀವು ನಿಮ್ಮ ಪ್ರಭುವಿನಿಂದ ನಿಮ್ಮ ಪಾಪಗಳ ಕ್ಷಮೆಯಾಚಿಸಿರಿ ಅನಂತರ ಪಶ್ಚಾತ್ತಾಪ ಪಟ್ಟು ಅವನೆಡೆಗೆ ಮರಳಿರಿ. ಅವನು ನಿಮಗೆ ನಿರ್ದಿಷ್ಟ ಅವಧಿಯವರೆಗೆ ಉತ್ತಮ ಜೀವನ ಅನುಕೂಲತೆಯನ್ನು ದಯಪಾಲಿಸುವನು ಮತ್ತು ಪ್ರತಿಯೊಬ್ಬ ಅಧಿಕ ಕರ್ಮಗಳುಳ್ಳವನಿಗೆ ಅವನು ಪ್ರತಿಫಲವನ್ನು ನೀಡುವನು. ಇನ್ನು ನೀವು ವಿಮುಖರಾದರೆ ನನಗೆ ನಿಮ್ಮ ಮೇಲೆ ಒಂದು ಮಹಾ ದಿನದ ಯಾತನೆಯ ಭಯವಿದೆ. info
التفاسير:

external-link copy
4 : 11

اِلَی اللّٰهِ مَرْجِعُكُمْ ۚ— وَهُوَ عَلٰی كُلِّ شَیْءٍ قَدِیْرٌ ۟

ನಿಮಗೆ ಅಲ್ಲಾಹನೆಡೆಗೇ ಮರಳಬೇಕಾಗಿದೆ ಮತ್ತು ಅವನು ಸರ್ವ ವಸ್ತುಗಳ ಮೇಲೆ ಸಾಮರ್ಥ್ಯ ಉಳ್ಳವನಾಗಿದ್ದಾನೆ. info
التفاسير:

external-link copy
5 : 11

اَلَاۤ اِنَّهُمْ یَثْنُوْنَ صُدُوْرَهُمْ لِیَسْتَخْفُوْا مِنْهُ ؕ— اَلَا حِیْنَ یَسْتَغْشُوْنَ ثِیَابَهُمْ ۙ— یَعْلَمُ مَا یُسِرُّوْنَ وَمَا یُعْلِنُوْنَ ۚ— اِنَّهٗ عَلِیْمٌۢ بِذَاتِ الصُّدُوْرِ ۟

ಎಚ್ಚರಿಕೆ ನಿಜವಾಗಿಯೂ ಅವರು ತಮ್ಮ ವಿದ್ವೇಷ ಹಾಗೂ ಸತ್ಯ ನಿಷೇಧವನ್ನು(ಅಲ್ಲಾಹನಿಂದ) ಮುಚ್ಚಿಡಲೆಂದು ತಮ್ಮ ಎದೆಗಳನ್ನು ಮುದುಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ! ಅವರು ತಮ್ಮ ಉಡುಪುಗಳಿಂದ ತಮ್ಮನ್ನು ಮುಚ್ಚಿಕೊಳ್ಳುವಾಗಲೂ ಅಲ್ಲಾಹನು ಅವರು ರಹಸ್ಯವಾಗಿಡುವುದನ್ನು ಬಹಿರಂಗಗೊಳಿಸುವುದನ್ನೂ ಅರಿಯುತ್ತಾನೆ. ಖಂಡಿತವಾಗಿಯೂ ಅವನು ಹೃದಯಾಂತರಾಳದಲ್ಲಿರುವುದನ್ನು ಚೆನ್ನಾಗಿ ಅರಿಯುತ್ತಾನೆ. info
التفاسير: