Ibisobanuro bya qoran ntagatifu - Ibisobanuro bya Qur'an Ntagatifu mu rurimi rw'igikanada - Hamza Betur.

numero y'urupapuro:close

external-link copy
73 : 9

یٰۤاَیُّهَا النَّبِیُّ جَاهِدِ الْكُفَّارَ وَالْمُنٰفِقِیْنَ وَاغْلُظْ عَلَیْهِمْ ؕ— وَمَاْوٰىهُمْ جَهَنَّمُ ؕ— وَبِئْسَ الْمَصِیْرُ ۟

ಓ ಪ್ರವಾದಿಯವರೇ! ಸತ್ಯನಿಷೇಧಿಗಳ ಮತ್ತು ಕಪಟವಿಶ್ವಾಸಿಗಳ ವಿರುದ್ಧ ಹೋರಾಡಿರಿ. ಅವರ ವಿಷಯದಲ್ಲಿ ಕಟುವಾಗಿ ವರ್ತಿಸಿರಿ. ಅವರ ವಾಸಸ್ಥಳವು ನರಕವಾಗಿದೆ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ. info
التفاسير:

external-link copy
74 : 9

یَحْلِفُوْنَ بِاللّٰهِ مَا قَالُوْا ؕ— وَلَقَدْ قَالُوْا كَلِمَةَ الْكُفْرِ وَكَفَرُوْا بَعْدَ اِسْلَامِهِمْ وَهَمُّوْا بِمَا لَمْ یَنَالُوْا ۚ— وَمَا نَقَمُوْۤا اِلَّاۤ اَنْ اَغْنٰىهُمُ اللّٰهُ وَرَسُوْلُهٗ مِنْ فَضْلِهٖ ۚ— فَاِنْ یَّتُوْبُوْا یَكُ خَیْرًا لَّهُمْ ۚ— وَاِنْ یَّتَوَلَّوْا یُعَذِّبْهُمُ اللّٰهُ عَذَابًا اَلِیْمًا فِی الدُّنْیَا وَالْاٰخِرَةِ ۚ— وَمَا لَهُمْ فِی الْاَرْضِ مِنْ وَّلِیٍّ وَّلَا نَصِیْرٍ ۟

ನಾವು (ಪ್ರವಾದಿಯ ವಿರುದ್ಧ ಏನೂ) ಹೇಳಿಲ್ಲವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಆದರೆ (ವಾಸ್ತವದಲ್ಲಿ) ಅವರು ಸತ್ಯನಿಷೇಧದ ಮಾತನ್ನೇ ಹೇಳಿದ್ದಾರೆ. ಇಸ್ಲಾಮ್ ಸ್ವೀಕರಿಸಿದ ಬಳಿಕ ಅವರು ಸತ್ಯನಿಷೇಧಿಗಳಾಗಿ ಮಾರ್ಪಟ್ಟಿದ್ದಾರೆ. ಅವರಿಗೆ ಮಾಡಲು ಸಾಧ್ಯವಾಗದ ಸಂಗತಿಗಾಗಿ (ಪ್ರವಾದಿಯ ಹತ್ಯೆಗಾಗಿ) ಅವರು ಹವಣಿಸಿದ್ದರು. ಅಲ್ಲಾಹು ಅವನ ಔದಾರ್ಯದಿಂದ ಅವರನ್ನು ಶ್ರೀಮಂತಗೊಳಿಸಿದನು ಮತ್ತು ಅವನ ಸಂದೇಶವಾಹಕರು ಕೂಡ (ಅವರನ್ನು ಶ್ರೀಮಂತಗೊಳಿಸಿದರು) ಎಂಬುದಲ್ಲದೆ ಅವರ ಪ್ರತೀಕಾರಕ್ಕೆ ಬೇರೇನು ಕಾರಣವಿದೆ? ಅವರು ಪಶ್ಚಾತ್ತಾಪಪಟ್ಟು ಮರಳಿದರೆ ಅದು ಅವರಿಗೇ ಒಳ್ಳೆಯದು. ಅವರು ಬೆನ್ನು ತೋರಿಸಿ ನಡೆದರೆ, ಅಲ್ಲಾಹು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ಯಾತನಾಮಯ ಶಿಕ್ಷೆಯನ್ನು ನೀಡುವನು. ಭೂಮಿಯಲ್ಲಿ ಅವರಿಗೆ ಯಾವುದೇ ರಕ್ಷಕರು ಅಥವಾ ಸಹಾಯಕರು ಇರಲಾರರು. info
التفاسير:

external-link copy
75 : 9

وَمِنْهُمْ مَّنْ عٰهَدَ اللّٰهَ لَىِٕنْ اٰتٰىنَا مِنْ فَضْلِهٖ لَنَصَّدَّقَنَّ وَلَنَكُوْنَنَّ مِنَ الصّٰلِحِیْنَ ۟

“ಅಲ್ಲಾಹು ಅವನ ಔದಾರ್ಯದಿಂದ ನಮಗೆ ದೌಲತ್ತು ನೀಡಿದರೆ ನಿಶ್ಚಯವಾಗಿಯೂ ನಾವು ದಾನಧರ್ಮ ಮಾಡುತ್ತೇವೆ ಮತ್ತು ನೀತಿವಂತರಲ್ಲಿ ಸೇರಿಕೊಳ್ಳುತ್ತೇವೆ” ಎಂದು ಅಲ್ಲಾಹನೊಡನೆ ಕರಾರು ಮಾಡಿದವರು ಅವರಲ್ಲಿದ್ದಾರೆ. info
التفاسير:

external-link copy
76 : 9

فَلَمَّاۤ اٰتٰىهُمْ مِّنْ فَضْلِهٖ بَخِلُوْا بِهٖ وَتَوَلَّوْا وَّهُمْ مُّعْرِضُوْنَ ۟

ಆದರೆ ಅವನು ಅವರಿಗೆ ಅವನ ಔದಾರ್ಯದಿಂದ ದೌಲತ್ತು ನೀಡಿದಾಗ ಅವರು ಜಿಪುಣತನ ತೋರಿದರು ಮತ್ತು ಕಡೆಗಣಿಸುತ್ತಾ ತಿರುಗಿ ನಡೆದರು. info
التفاسير:

external-link copy
77 : 9

فَاَعْقَبَهُمْ نِفَاقًا فِیْ قُلُوْبِهِمْ اِلٰی یَوْمِ یَلْقَوْنَهٗ بِمَاۤ اَخْلَفُوا اللّٰهَ مَا وَعَدُوْهُ وَبِمَا كَانُوْا یَكْذِبُوْنَ ۟

ಆದ್ದರಿಂದ ಅವರಿಗೆ ಶಿಕ್ಷೆಯಾಗಿ ಅಲ್ಲಾಹು ಅವರ ಹೃದಯಗಳಲ್ಲಿ ಕಪಟತೆಯನ್ನು ಹಾಕಿದನು. ಅವರು ಅವನನ್ನು ಭೇಟಿಯಾಗುವ ದಿನದ ತನಕ (ಅದು ಅವರ ಹೃದಯಗಳಲ್ಲಿರುವುದು). ಅದೇಕೆಂದರೆ, ಅವರು ಅಲ್ಲಾಹನಿಗೆ ನೀಡಿದ ಭರವಸೆಯನ್ನು ಮುರಿದರು. ಅದೇಕೆಂದರೆ, ಅವರು ಸುಳ್ಳು ಹೇಳುವವರಾಗಿದ್ದರು. info
التفاسير:

external-link copy
78 : 9

اَلَمْ یَعْلَمُوْۤا اَنَّ اللّٰهَ یَعْلَمُ سِرَّهُمْ وَنَجْوٰىهُمْ وَاَنَّ اللّٰهَ عَلَّامُ الْغُیُوْبِ ۟ۚ

ಅವರ ರಹಸ್ಯಗಳನ್ನು ಮತ್ತು ಅವರ ಗೂಢ ಸಂಭಾಷಣೆಗಳನ್ನು ಅಲ್ಲಾಹು ತಿಳಿಯುತ್ತಾನೆಂದು, ಮತ್ತು ಅಲ್ಲಾಹು ಅಗೋಚರ ಸಂಗತಿಗಳನ್ನು ಬಹಳ ಚೆನ್ನಾಗಿ ತಿಳಿಯುತ್ತಾನೆಂದು ಅವರಿಗೆ ಗೊತ್ತಿಲ್ಲವೇ? info
التفاسير:

external-link copy
79 : 9

اَلَّذِیْنَ یَلْمِزُوْنَ الْمُطَّوِّعِیْنَ مِنَ الْمُؤْمِنِیْنَ فِی الصَّدَقٰتِ وَالَّذِیْنَ لَا یَجِدُوْنَ اِلَّا جُهْدَهُمْ فَیَسْخَرُوْنَ مِنْهُمْ ؕ— سَخِرَ اللّٰهُ مِنْهُمْ ؗ— وَلَهُمْ عَذَابٌ اَلِیْمٌ ۟

ಸ್ವಯಂಪ್ರೇರಣೆಯಿಂದ ದಾನ ಮಾಡುವ ಸತ್ಯವಿಶ್ವಾಸಿಗಳನ್ನು ಮತ್ತು ದಾನ ಮಾಡಲು ತಮ್ಮ ದಿನಗೂಲಿಯ ಹೊರತು ಬೇರೇನೂ ಇಲ್ಲದವರನ್ನು ಅವರು ಟೀಕಿಸುತ್ತಾರೆ. ಅವರು ಅವರನ್ನು ತಮಾಷೆ ಮಾಡುತ್ತಾರೆ. ಅಲ್ಲಾಹು ಕೂಡ ಅವರನ್ನು (ಕಪಟವಿಶ್ವಾಸಿಗಳನ್ನು) ತಮಾಷೆ ಮಾಡುವನು. ಅವರಿಗೆ ಯಾತನಾಮಯ ಶಿಕ್ಷೆಯಿದೆ. info
التفاسير: