Ibisobanuro bya qoran ntagatifu - Ibisobanuro bya Qur'an Ntagatifu mu rurimi rw'igikanada - Hamza Betur.

ಅತ್ತೌಬ

external-link copy
1 : 9

بَرَآءَةٌ مِّنَ اللّٰهِ وَرَسُوْلِهٖۤ اِلَی الَّذِیْنَ عٰهَدْتُّمْ مِّنَ الْمُشْرِكِیْنَ ۟ؕ

ಇದು ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯ ಘೋಷಣೆಯಾಗಿದೆ.[1] info

[1] ಮುಸಲ್ಮಾನರೊಡನೆ ತಾತ್ಕಾಲಿಕವಾಗಿ, ಅಥವಾ 4 ತಿಂಗಳಿಗಿಂತ ಕಡಿಮೆ, ಅಥವಾ 4 ತಿಂಗಳಿಗಿಂತ ಹೆಚ್ಚು ಅವಧಿಯ ತನಕ ಕರಾರು ಮಾಡಿಕೊಂಡಿದ್ದು ತಮ್ಮ ಕರಾರನ್ನು ಪಾಲಿಸದೆ ವಿಶ್ವಾಸದ್ರೋಹವೆಸಗಿದ ಬಹುದೇವವಿಶ್ವಾಸಿಗಳೊಡನೆ ಈ ಹೊಣೆಮುಕ್ತಿಯ ಘೋಷಣೆಯನ್ನು ಮಾಡಲಾಗಿದೆ.

التفاسير:

external-link copy
2 : 9

فَسِیْحُوْا فِی الْاَرْضِ اَرْبَعَةَ اَشْهُرٍ وَّاعْلَمُوْۤا اَنَّكُمْ غَیْرُ مُعْجِزِی اللّٰهِ ۙ— وَاَنَّ اللّٰهَ مُخْزِی الْكٰفِرِیْنَ ۟

ಆದ್ದರಿಂದ ನೀವು (ಬಹುದೇವವಿಶ್ವಾಸಿಗಳು) ನಾಲ್ಕು ತಿಂಗಳವರೆಗೆ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚರಿಸಿರಿ.[1] ತಿಳಿಯಿರಿ! ಅಲ್ಲಾಹನನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಅಪಮಾನಿತರನ್ನಾಗಿ ಮಾಡುವನು. info

[1] ಅವರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರ ಮೇಲೆ ಯಾವುದೇ ದಾಳಿ ಮಾಡಲಾಗುವುದಿಲ್ಲ.

التفاسير:

external-link copy
3 : 9

وَاَذَانٌ مِّنَ اللّٰهِ وَرَسُوْلِهٖۤ اِلَی النَّاسِ یَوْمَ الْحَجِّ الْاَكْبَرِ اَنَّ اللّٰهَ بَرِیْٓءٌ مِّنَ الْمُشْرِكِیْنَ ۙ۬— وَرَسُوْلُهٗ ؕ— فَاِنْ تُبْتُمْ فَهُوَ خَیْرٌ لَّكُمْ ۚ— وَاِنْ تَوَلَّیْتُمْ فَاعْلَمُوْۤا اَنَّكُمْ غَیْرُ مُعْجِزِی اللّٰهِ ؕ— وَبَشِّرِ الَّذِیْنَ كَفَرُوْا بِعَذَابٍ اَلِیْمٍ ۟ۙ

ಇದು ಜನರಿಗೆ ಮಹಾ ಹಜ್ಜ್‌ನ ದಿನದಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಘೋಷಣೆಯಾಗಿದೆ—ಏನೆಂದರೆ ಅಲ್ಲಾಹು ಮತ್ತು ಅವರ ಸಂದೇಶವಾಹಕರು ಬಹುದೇವವಿಶ್ವಾಸಿಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ನೀವು (ಬಹುದೇವವಿಶ್ವಾಸಿಗಳು) ಪಶ್ಚಾತ್ತಾಪಪಟ್ಟರೆ ಅದು ನಿಮಗೆ ಒಳಿತಾಗಿದೆ. ನೀವು ಲೆಕ್ಕಿಸದೆ ತಿರುಗಿ ನಡೆದರೆ ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆ ನೀಡಿರಿ. info
التفاسير:

external-link copy
4 : 9

اِلَّا الَّذِیْنَ عٰهَدْتُّمْ مِّنَ الْمُشْرِكِیْنَ ثُمَّ لَمْ یَنْقُصُوْكُمْ شَیْـًٔا وَّلَمْ یُظَاهِرُوْا عَلَیْكُمْ اَحَدًا فَاَتِمُّوْۤا اِلَیْهِمْ عَهْدَهُمْ اِلٰی مُدَّتِهِمْ ؕ— اِنَّ اللّٰهَ یُحِبُّ الْمُتَّقِیْنَ ۟

ಆದರೆ ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರು ಕರಾರು ಉಲ್ಲಂಘಿಸದಿದ್ದರೆ ಮತ್ತು ನಿಮಗೆ ವಿರುದ್ಧವಾಗಿ ನಿಮ್ಮ ಶತ್ರುಗಳಿಗೆ ಸಹಾಯ ಮಾಡದಿದ್ದರೆ ಅವರು ಇದರಿಂದ ಹೊರತಾಗಿದ್ದಾರೆ. ನೀವು ಅವರೊಡನೆ ಮಾಡಿದ ಕರಾರನ್ನು ಅವರ ಅವಧಿ ಮುಗಿಯುವವರೆಗೆ ಮುಂದುವರಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ. info
التفاسير:

external-link copy
5 : 9

فَاِذَا انْسَلَخَ الْاَشْهُرُ الْحُرُمُ فَاقْتُلُوا الْمُشْرِكِیْنَ حَیْثُ وَجَدْتُّمُوْهُمْ وَخُذُوْهُمْ وَاحْصُرُوْهُمْ وَاقْعُدُوْا لَهُمْ كُلَّ مَرْصَدٍ ۚ— فَاِنْ تَابُوْا وَاَقَامُوا الصَّلٰوةَ وَاٰتَوُا الزَّكٰوةَ فَخَلُّوْا سَبِیْلَهُمْ ؕ— اِنَّ اللّٰهَ غَفُوْرٌ رَّحِیْمٌ ۟

ಪವಿತ್ರ ತಿಂಗಳುಗಳು ಕಳೆದರೆ,[1] ಆ ಬಹುದೇವವಿಶ್ವಾಸಿಗಳನ್ನು ಕಂಡಲ್ಲಿ ಕೊಲ್ಲಿರಿ. ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗಾಗಿ ಹೊಂಚುಹಾಕಿರಿ. ಅವರು ಪಶ್ಚಾತ್ತಾಪಪಟ್ಟು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರನ್ನು ಅವರ ದಾರಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info

[1] ಅಂದರೆ ಮೇಲೆ ಸೂಚಿಸಲಾದ ನಾಲ್ಕು ತಿಂಗಳುಗಳು.

التفاسير:

external-link copy
6 : 9

وَاِنْ اَحَدٌ مِّنَ الْمُشْرِكِیْنَ اسْتَجَارَكَ فَاَجِرْهُ حَتّٰی یَسْمَعَ كَلٰمَ اللّٰهِ ثُمَّ اَبْلِغْهُ مَاْمَنَهٗ ؕ— ذٰلِكَ بِاَنَّهُمْ قَوْمٌ لَّا یَعْلَمُوْنَ ۟۠

ಬಹುದೇವವಿಶ್ವಾಸಿಗಳಲ್ಲಿ ಯಾರಾದರೂ ನಿಮ್ಮೊಡನೆ ಆಶ್ರಯ ಬೇಡಿದರೆ, ಅವನಿಗೆ ಆಶ್ರಯ ನೀಡಿರಿ—ಅವನು ಅಲ್ಲಾಹನ ವಚನಗಳನ್ನು ಕೇಳುವ ತನಕ. ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಅದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ. info
التفاسير: