Ibisobanuro bya qoran ntagatifu - Ibisobanuro bya Quran Ntagatifu mu rurimi rw'igikanada - Bashir Misuri

numero y'urupapuro:close

external-link copy
101 : 3

وَكَیْفَ تَكْفُرُوْنَ وَاَنْتُمْ تُتْلٰی عَلَیْكُمْ اٰیٰتُ اللّٰهِ وَفِیْكُمْ رَسُوْلُهٗ ؕ— وَمَنْ یَّعْتَصِمْ بِاللّٰهِ فَقَدْ هُدِیَ اِلٰی صِرَاطٍ مُّسْتَقِیْمٍ ۟۠

ನಿಮಗೆ ಅಲ್ಲಾಹನ ಸೂಕ್ತಿಗಳನ್ನು ಓದಿ ಕೊಡಲಾಗುತ್ತಿದ್ದೂ (ನಿಮ್ಮ ಮಾರ್ಗದರ್ಶನಕ್ಕಾಗಿ) ನಿಮ್ಮ ಮಧ್ಯೆ ಅಲ್ಲಾಹನ ಸಂದೇಶವಾಹಕರಿದ್ದೂ ಕೂಡ ನೀವು ಸತ್ಯನಿಷೇಧಿಸುವುದಾದರೂ ಹೇಗೆ? ಯಾರು ಅಲ್ಲಾಹನ ಧರ್ಮವನ್ನು ಸದೃಢವಾಗಿ ಹಿಡಿಯುತ್ತಾನೋ ನಿಸ್ಸಂದೇಹವಾಗಿಯು ಅವನನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಾಯಿತು. info
التفاسير:

external-link copy
102 : 3

یٰۤاَیُّهَا الَّذِیْنَ اٰمَنُوا اتَّقُوا اللّٰهَ حَقَّ تُقٰتِهٖ وَلَا تَمُوْتُنَّ اِلَّا وَاَنْتُمْ مُّسْلِمُوْنَ ۟

ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ ಮತ್ತು ಮುಸ್ಲಿಮರಾಗಿಯೇ ವಿನಃ ನೀವು ಖಂಡಿತ ಮರಣ ಹೊಂದಬಾರದು. info
التفاسير:

external-link copy
103 : 3

وَاعْتَصِمُوْا بِحَبْلِ اللّٰهِ جَمِیْعًا وَّلَا تَفَرَّقُوْا ۪— وَاذْكُرُوْا نِعْمَتَ اللّٰهِ عَلَیْكُمْ اِذْ كُنْتُمْ اَعْدَآءً فَاَلَّفَ بَیْنَ قُلُوْبِكُمْ فَاَصْبَحْتُمْ بِنِعْمَتِهٖۤ اِخْوَانًا ۚ— وَكُنْتُمْ عَلٰی شَفَا حُفْرَةٍ مِّنَ النَّارِ فَاَنْقَذَكُمْ مِّنْهَا ؕ— كَذٰلِكَ یُبَیِّنُ اللّٰهُ لَكُمْ اٰیٰتِهٖ لَعَلَّكُمْ تَهْتَدُوْنَ ۟

ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಪಾಶವನ್ನು ಸದೃಢವಾಗಿ ಹಿಡಿದುಕೊಳ್ಳಿರಿ. ನೀವು ಭಿನ್ನರಾಗದಿರಿ ಮತ್ತು ಅಲ್ಲಾಹನು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅವನು ನಿಮ್ಮ ಹೃದಯಗಳನ್ನು ಬೆಸೆದನು. ಹಾಗೆಯೇ ಅವನ ಔದಾರ್ಯದಿಂದ ನೀವು ಸಹೋದರರಾಗಿ ಬಿಟ್ಟಿರಿ. ನೀವು ನರಕಾಗ್ನಿಯ ಅಂಚಿಗೆ ತಲುಪಿಬಿಟ್ಟಿದ್ದೀರಿ. ಅವನು ನಿಮ್ಮನ್ನು ರಕ್ಷಿಸಿದನು. ಇದೇ ಪ್ರಕಾರ ಅಲ್ಲಾಹನು ತನ್ನ ದೃಷ್ಟಾಂತಗಳನ್ನು ನೀವು ಸನ್ಮಾರ್ಗಪಡೆಯಲೆಂದು ನಿಮಗೆ ವಿವರಿಸಿಕೊಡುತ್ತಾನೆ. info
التفاسير:

external-link copy
104 : 3

وَلْتَكُنْ مِّنْكُمْ اُمَّةٌ یَّدْعُوْنَ اِلَی الْخَیْرِ وَیَاْمُرُوْنَ بِالْمَعْرُوْفِ وَیَنْهَوْنَ عَنِ الْمُنْكَرِ ؕ— وَاُولٰٓىِٕكَ هُمُ الْمُفْلِحُوْنَ ۟

ಒಳಿತಿನೆಡೆಗೆ ಆಹ್ವಾನಿಸುವ, ಸದಾಚಾರವನ್ನು ಆದೇಶಿಸುವ ಮತ್ತು ದುಷ್ಕೃತ್ಯಗಳಿಂದ ತಡೆಯುವಂತಹ ಒಂದು ಸಮುದಾಯವು ನಿಮ್ಮಲ್ಲಿರುವುದು ಅವಶ್ಯವಾಗಿದೆ ಮತ್ತು ಅವರೇ ವಿಜಯ ಹೊಂದುವವರಾಗಿದ್ದಾರೆ. info
التفاسير:

external-link copy
105 : 3

وَلَا تَكُوْنُوْا كَالَّذِیْنَ تَفَرَّقُوْا وَاخْتَلَفُوْا مِنْ بَعْدِ مَا جَآءَهُمُ الْبَیِّنٰتُ ؕ— وَاُولٰٓىِٕكَ لَهُمْ عَذَابٌ عَظِیْمٌ ۟ۙ

ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ನಂತರವೂ ಛಿನ್ನಭಿನ್ನರಾಗಿ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದವರAತೆ ನೀವಾಗಬಾರದು. ಅವರಿಗೇ ಅತ್ಯುಗ್ರ ಶಿಕ್ಷೆಯಿರುವುದು. info
التفاسير:

external-link copy
106 : 3

یَّوْمَ تَبْیَضُّ وُجُوْهٌ وَّتَسْوَدُّ وُجُوْهٌ ۚ— فَاَمَّا الَّذِیْنَ اسْوَدَّتْ وُجُوْهُهُمْ ۫— اَكَفَرْتُمْ بَعْدَ اِیْمَانِكُمْ فَذُوْقُوا الْعَذَابَ بِمَا كُنْتُمْ تَكْفُرُوْنَ ۟

ಅಂದು ಕೆಲವು ಮುಖಗಳು ಬೆಳಗಲಿವೆ ಮತ್ತು ಕೆಲವು ಮುಖಗಳು ಕಪ್ಪಾಗಲಿವೆ. ಕಪ್ಪಾದ ಮುಖದವರೊಂದಿಗೆ ಹೇಳಲಾಗುವುದು: ನೀವು ವಿಶ್ವಾಸವನ್ನು ಸ್ವೀಕರಿಸಿದ ನಂತರ ನಿಷೇಧವನ್ನು ಕೈಗೊಂಡಿರಾ? ಇದೀಗ ನಿಮ್ಮ ಸತ್ಯನಿಷೇಧದ ಫಲವನ್ನು ಅನುಭವಿಸಿರಿ. info
التفاسير:

external-link copy
107 : 3

وَاَمَّا الَّذِیْنَ ابْیَضَّتْ وُجُوْهُهُمْ فَفِیْ رَحْمَةِ اللّٰهِ ؕ— هُمْ فِیْهَا خٰلِدُوْنَ ۟

ಇನ್ನು ಬೆಳಗಿದ ಮುಖದವರು ಅಲ್ಲಾಹನ ಕಾರಣ್ಯದಲ್ಲಿರುವರು ಮತ್ತು ಅವರದರಲ್ಲಿ ಶಾಶ್ವತವಾಗಿರುವರು. info
التفاسير:

external-link copy
108 : 3

تِلْكَ اٰیٰتُ اللّٰهِ نَتْلُوْهَا عَلَیْكَ بِالْحَقِّ ؕ— وَمَا اللّٰهُ یُرِیْدُ ظُلْمًا لِّلْعٰلَمِیْنَ ۟

ಓ ಪೈಗಂಬರರೇ ಇವು ಅಲ್ಲಾಹನ ಸೂಕ್ತಿಗಳಾಗಿವೆ ಇದನ್ನು ನಾವು ನಿಮಗೆ ಸತ್ಯಪೂರ್ಣವಾಗಿ ಓದಿ ಕೇಳಿಸುತ್ತಿದ್ದೇವೆ ಮತ್ತು ಅಲ್ಲಾಹನು ಸರ್ವಲೋಕವಾಸಿಗಳೊಂದಿಗೆ ಅನ್ಯಾಯ ಮಾಡುವುದನ್ನು ಬಯಸುವುದಿಲ್ಲ. info
التفاسير: