Ibisobanuro bya qoran ntagatifu - Ibisobanuro bya Quran Ntagatifu mu rurimi rw'igikanada - Bashir Misuri

numero y'urupapuro: 286:282 close

external-link copy
50 : 17

قُلْ كُوْنُوْا حِجَارَةً اَوْ حَدِیْدًا ۟ۙ

ಹೇಳಿರಿ: ನೀವು ಕಲ್ಲಾಗಿರಿ ಅಥವಾ ಕಬ್ಬಿಣವೇ ಆಗಿಬಿಡಿರಿ. info
التفاسير:

external-link copy
51 : 17

اَوْ خَلْقًا مِّمَّا یَكْبُرُ فِیْ صُدُوْرِكُمْ ۚ— فَسَیَقُوْلُوْنَ مَنْ یُّعِیْدُنَا ؕ— قُلِ الَّذِیْ فَطَرَكُمْ اَوَّلَ مَرَّةٍ ۚ— فَسَیُنْغِضُوْنَ اِلَیْكَ رُءُوْسَهُمْ وَیَقُوْلُوْنَ مَتٰی هُوَ ؕ— قُلْ عَسٰۤی اَنْ یَّكُوْنَ قَرِیْبًا ۟

ಅಥವಾ ನಿಮ್ಮ ಹೃದಯಗಳಲ್ಲಿ ಅತ್ಯಂತ ಕಠಿಣವೆಂದು ತೋರುವ ಯಾವುದೇ ಸೃಷ್ಟಿಯಾಗಿರಿ. ನಂತರ ಅವರು ತಕ್ಷಣ ಕೇಳುವರು: ನಮ್ಮನ್ನು ಮರಳಿಸುವವರಾರು? ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದವನೆಂದು ಉತ್ತರಿಸಿರಿ. ಆಗ ಅವರು ತಮ್ಮ ತಲೆಗಳನ್ನು ತೂಗುತ್ತಾ ಹೇಳುವರು. ಸರಿ ಅದು ಯಾವಾಗ ಸಂಭವಿಸುವುದು? ಆಗ ನೀವು ಹೇಳಿರಿ: ಅದು ಸಮೀಪವೇ ಇರಬಹುದು. info
التفاسير:

external-link copy
52 : 17

یَوْمَ یَدْعُوْكُمْ فَتَسْتَجِیْبُوْنَ بِحَمْدِهٖ وَتَظُنُّوْنَ اِنْ لَّبِثْتُمْ اِلَّا قَلِیْلًا ۟۠

ಅವನು ನಿಮ್ಮನ್ನು ಕರೆಯುವ ದಿನದಂದು ನೀವು ಅವನ ಸ್ತುತಿಯೊಂದಿಗೆ ಓ ಗೊಡುವಿರಿ ಮತ್ತು ಇಹದಲ್ಲಿ ಅಲ್ಪಕಾಲ ಮಾತ್ರ ವಾಸಿಸಿದ್ದೀರಿ ಎಂದು ನೀವು ಭಾವಿಸಿಕೊಳ್ಳುವಿರಿ. info
التفاسير:

external-link copy
53 : 17

وَقُلْ لِّعِبَادِیْ یَقُوْلُوا الَّتِیْ هِیَ اَحْسَنُ ؕ— اِنَّ الشَّیْطٰنَ یَنْزَغُ بَیْنَهُمْ ؕ— اِنَّ الشَّیْطٰنَ كَانَ لِلْاِنْسَانِ عَدُوًّا مُّبِیْنًا ۟

(ಓ ಪೈಗಂಬರರೇ) ನೀವು ನನ್ನ ದಾಸರಿಗೆ: ಅವರು ಅತ್ಯುತ್ತಮ ಮಾತನ್ನಾಡಲು ಹೇಳಿರಿ. ವಾಸ್ತವದಲ್ಲಿ ಶೈತಾನನು ಅವರ ನಡುವೆ ಒಡಕು ಹಾಕುತ್ತಾನೆ. ನಿಸ್ಸಂಶಯವಾಗಿಯೂ ಶೈತಾನನು ಮನುಷ್ಯನಿಗೆ ಸ್ಪಷ್ಟ ಶತ್ರುವಾಗಿದ್ದಾನೆ. info
التفاسير:

external-link copy
54 : 17

رَبُّكُمْ اَعْلَمُ بِكُمْ ؕ— اِنْ یَّشَاْ یَرْحَمْكُمْ اَوْ اِنْ یَّشَاْ یُعَذِّبْكُمْ ؕ— وَمَاۤ اَرْسَلْنٰكَ عَلَیْهِمْ وَكِیْلًا ۟

. ನಿಮ್ಮ ಪ್ರಭುವು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಇಚ್ಛಿಸಿದರೆ ನಿಮ್ಮ ಮೇಲೆ ಕರುಣೆ ತೋರುವನು ಅಥವಾ ಅವನು ಇಚ್ಛಿಸಿದರೆ ನಿಮ್ಮನ್ನು ಶಿಕ್ಷಿಸುವನು. ನಾವು ನಿಮ್ಮನ್ನು ಅವರ ಮೇಲೆ ಮೇಲ್ನೋಟಗಾರರನ್ನಾಗಿ ಮಾಡಿ ಕಳುಹಿಸಿರುವುದಿಲ್ಲ. info
التفاسير:

external-link copy
55 : 17

وَرَبُّكَ اَعْلَمُ بِمَنْ فِی السَّمٰوٰتِ وَالْاَرْضِ ؕ— وَلَقَدْ فَضَّلْنَا بَعْضَ النَّبِیّٖنَ عَلٰی بَعْضٍ وَّاٰتَیْنَا دَاوٗدَ زَبُوْرًا ۟

ಮತ್ತು ನಿಮ್ಮ ಪ್ರಭುವು ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲವನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. ನಿಶ್ಚಯವಾಗಿಯೂ ನಾವು ಕೆಲವು ಪೈಗಂಬರರನ್ನು ಇನ್ನು ಕೆಲವರ ಮೇಲೆ ಶ್ರೇಷ್ಟತೆಯನ್ನು ನೀಡಿದ್ದೇವೆ. ಮತ್ತು ನಾವು ದಾವೂದರವರಿಗೆ ಝಬೂರನ್ನು ದಯಪಾಲಿಸಿರುತ್ತೇವೆ. info
التفاسير:

external-link copy
56 : 17

قُلِ ادْعُوا الَّذِیْنَ زَعَمْتُمْ مِّنْ دُوْنِهٖ فَلَا یَمْلِكُوْنَ كَشْفَ الضُّرِّ عَنْكُمْ وَلَا تَحْوِیْلًا ۟

ಹೇಳಿರಿ: ನೀವು ಅಲ್ಲಾಹನ ಹೊರತು ಯಾರನ್ನು ಆರಾಧ್ಯರೆಂದು ಭಾವಿಸುತ್ತಿರುವಿರೋ ಅವರನ್ನು ಕರೆದುಬೇಡಿಕೊಳ್ಳಿರಿ. ಆದರೆ ಅವರು ನಿಮ್ಮಿಂದ ಯಾವುದೇ ಸಂಕಷ್ಟವನ್ನು ನೀಗಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ. info
التفاسير:

external-link copy
57 : 17

اُولٰٓىِٕكَ الَّذِیْنَ یَدْعُوْنَ یَبْتَغُوْنَ اِلٰی رَبِّهِمُ الْوَسِیْلَةَ اَیُّهُمْ اَقْرَبُ وَیَرْجُوْنَ رَحْمَتَهٗ وَیَخَافُوْنَ عَذَابَهٗ ؕ— اِنَّ عَذَابَ رَبِّكَ كَانَ مَحْذُوْرًا ۟

ಇವರು ಯಾರನ್ನು ಕರೆದು ಬೇಡುತ್ತಿದ್ದಾರೋ ಸ್ವತಃ ಅವರೇ ತಮ್ಮ ಪ್ರಭುವಿನ ಸಾಮಿಪ್ಯ ಪಡೆಯುವ ಸಾಧನವನ್ನು ಅರಸುತ್ತಾರೆ ತಮ್ಮಲ್ಲಿ ಯಾರು ಅತ್ಯಂತ ನಿಕಟನಾಗುವನೆಂದು. ಸ್ವತಃ ಅವರೇ ಅವನ ಕಾರುಣ್ಯವನ್ನು ಆಶಿಸುತ್ತಿದ್ದಾರೆ ಹಾಗೂ ಅವರು ಯಾತನೆಯನ್ನು ಭಯಪಡುತ್ತಿದ್ದಾರೆ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಯಾತನೆಯು ಭಯಪಡಬೇಕಾದುದ್ದೆ ಆಗಿದೆ. info
التفاسير:

external-link copy
58 : 17

وَاِنْ مِّنْ قَرْیَةٍ اِلَّا نَحْنُ مُهْلِكُوْهَا قَبْلَ یَوْمِ الْقِیٰمَةِ اَوْ مُعَذِّبُوْهَا عَذَابًا شَدِیْدًا ؕ— كَانَ ذٰلِكَ فِی الْكِتٰبِ مَسْطُوْرًا ۟

ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ನಾಡಿರುವುದಿಲ್ಲ. ಇದು ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ. info
التفاسير: