Tradução dos significados do Nobre Qur’an. - Tradução canarim - Hamza Bator

Número de página:close

external-link copy
6 : 13

وَیَسْتَعْجِلُوْنَكَ بِالسَّیِّئَةِ قَبْلَ الْحَسَنَةِ وَقَدْ خَلَتْ مِنْ قَبْلِهِمُ الْمَثُلٰتُ ؕ— وَاِنَّ رَبَّكَ لَذُوْ مَغْفِرَةٍ لِّلنَّاسِ عَلٰی ظُلْمِهِمْ ۚ— وَاِنَّ رَبَّكَ لَشَدِیْدُ الْعِقَابِ ۟

ಅವರು ನಿಮ್ಮೊಡನೆ ಒಳಿತಿಗಿಂತ ಮೊದಲು ಕೆಡುಕನ್ನು (ಶಿಕ್ಷೆಯನ್ನು) ತರಲು ತ್ವರೆ ಮಾಡುತ್ತಾರೆ. ಮಾದರೀಯೋಗ್ಯ ಶಿಕ್ಷೆಗಳು ಅವರಿಗಿಂತ ಮೊದಲಿನ ತಲೆಮಾರುಗಳಿಗೆ ಈಗಾಗಲೇ ಸಂಭವಿಸಿಬಿಟ್ಟಿದೆ. ನಿಶ್ಚಯವಾಗಿಯೂ, ಜನರು ಅಕ್ರಮಿಗಳಾಗಿದ್ದೂ ಸಹ ನಿಮ್ಮ ಪರಿಪಾಲಕನು (ಅಲ್ಲಾಹು) ಅವರನ್ನು ಕ್ಷಮಿಸುವವನಾಗಿದ್ದಾನೆ. ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಅತಿಕಠೋರವಾಗಿ ಶಿಕ್ಷಿಸುವವನೂ ಆಗಿದ್ದಾನೆ. info
التفاسير:

external-link copy
7 : 13

وَیَقُوْلُ الَّذِیْنَ كَفَرُوْا لَوْلَاۤ اُنْزِلَ عَلَیْهِ اٰیَةٌ مِّنْ رَّبِّهٖ ؕ— اِنَّمَاۤ اَنْتَ مُنْذِرٌ وَّلِكُلِّ قَوْمٍ هَادٍ ۟۠

ಸತ್ಯನಿಷೇಧಿಗಳು ಕೇಳುತ್ತಾರೆ: “ಇವನಿಗೆ ಇವನ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಇಳಿಸಲಾಗಿಲ್ಲ?” ನೀವು ಮುನ್ನೆಚ್ಚರಿಕೆ ನೀಡುವವರು ಮಾತ್ರ. ಎಲ್ಲಾ ಜನರಿಗೂ ಒಬ್ಬ ಮಾರ್ಗದರ್ಶಕನಿದ್ದಾನೆ. info
التفاسير:

external-link copy
8 : 13

اَللّٰهُ یَعْلَمُ مَا تَحْمِلُ كُلُّ اُ وَمَا تَغِیْضُ الْاَرْحَامُ وَمَا تَزْدَادُ ؕ— وَكُلُّ شَیْءٍ عِنْدَهٗ بِمِقْدَارٍ ۟

ತಾಯಿ ತನ್ನ ಉದರದಲ್ಲಿ ಏನು ಹೊತ್ತಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗರ್ಭಾಶಯಗಳು ತಗ್ಗುವುದನ್ನು ಮತ್ತು ಉಬ್ಬುವುದನ್ನು ಅವನು ತಿಳಿಯುತ್ತಾನೆ. ಎಲ್ಲವೂ ಅವನ ಬಳಿ ಒಂದು ನಿರ್ಣಯದಂತೆ ಇವೆ. info
التفاسير:

external-link copy
9 : 13

عٰلِمُ الْغَیْبِ وَالشَّهَادَةِ الْكَبِیْرُ الْمُتَعَالِ ۟

ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನಾಗಿದ್ದಾನೆ. ಅವನು ಮಹಾನನು ಮತ್ತು ಅತ್ಯುನ್ನತನಾಗಿದ್ದಾನೆ. info
التفاسير:

external-link copy
10 : 13

سَوَآءٌ مِّنْكُمْ مَّنْ اَسَرَّ الْقَوْلَ وَمَنْ جَهَرَ بِهٖ وَمَنْ هُوَ مُسْتَخْفٍ بِالَّیْلِ وَسَارِبٌ بِالنَّهَارِ ۟

ನಿಮ್ಮಲ್ಲಿ ಮಾತನ್ನು ರಹಸ್ಯವಾಗಿ ಹೇಳುವವನು ಮತ್ತು ಅದನ್ನು ಬಹಿರಂಗವಾಗಿ ಹೇಳುವವನು, ರಾತ್ರಿಯಲ್ಲಿ ಅಡಗಿಕೊಳ್ಳುವವನು ಮತ್ತು ಹಗಲಲ್ಲಿ ನಡೆದಾಡುವವನು—ಎಲ್ಲರೂ ಅಲ್ಲಾಹನಿಗೆ ಸಂಬಂಧಿಸಿದಂತೆ ಸಮಾನರಾಗಿದ್ದಾರೆ. info
التفاسير:

external-link copy
11 : 13

لَهٗ مُعَقِّبٰتٌ مِّنْ بَیْنِ یَدَیْهِ وَمِنْ خَلْفِهٖ یَحْفَظُوْنَهٗ مِنْ اَمْرِ اللّٰهِ ؕ— اِنَّ اللّٰهَ لَا یُغَیِّرُ مَا بِقَوْمٍ حَتّٰی یُغَیِّرُوْا مَا بِاَنْفُسِهِمْ ؕ— وَاِذَاۤ اَرَادَ اللّٰهُ بِقَوْمٍ سُوْٓءًا فَلَا مَرَدَّ لَهٗ ۚ— وَمَا لَهُمْ مِّنْ دُوْنِهٖ مِنْ وَّالٍ ۟

ಮನುಷ್ಯನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಅವನ ಪಹರೆಗಾರರಿದ್ದಾರೆ.[1] ಅಲ್ಲಾಹನ ಆಜ್ಞೆಯಂತೆ ಅವರು ಅವನನ್ನು ಕಾಯುತ್ತಾರೆ. ಜನರು ಸ್ವಯಂ ತಮ್ಮಲ್ಲಿ ಬದಲಾವಣೆ ತರುವ ತನಕ ಅಲ್ಲಾಹು ಅವರ ಸ್ಥಿತಿಯನ್ನು ಖಂಡಿತ ಬದಲಾಯಿಸುವುದಿಲ್ಲ. ಯಾವುದಾದರೂ ಜನರನ್ನು ಶಿಕ್ಷಿಸಬೇಕೆಂದು ಅಲ್ಲಾಹು ಬಯಸಿದರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅವನ ಹೊರತು ಅವರಿಗೆ ಬೇರೆ ರಕ್ಷಕರೂ ಇಲ್ಲ. info

[1] ಪಹರೆಗಾರರು ಎಂದರೆ ದೇವದೂತರು.

التفاسير:

external-link copy
12 : 13

هُوَ الَّذِیْ یُرِیْكُمُ الْبَرْقَ خَوْفًا وَّطَمَعًا وَّیُنْشِئُ السَّحَابَ الثِّقَالَ ۟ۚ

ಅವನೇ ನಿಮಗೆ ಭಯ ಮತ್ತು ನಿರೀಕ್ಷೆಯಾಗಿ ಮಿಂಚನ್ನು ತೋರಿಸುವವನು. ಅವನು ಭಾರವಾದ ಮೋಡಗಳನ್ನು ಸೃಷ್ಟಿಸುತ್ತಾನೆ. info
التفاسير:

external-link copy
13 : 13

وَیُسَبِّحُ الرَّعْدُ بِحَمْدِهٖ وَالْمَلٰٓىِٕكَةُ مِنْ خِیْفَتِهٖ ۚ— وَیُرْسِلُ الصَّوَاعِقَ فَیُصِیْبُ بِهَا مَنْ یَّشَآءُ وَهُمْ یُجَادِلُوْنَ فِی اللّٰهِ ۚ— وَهُوَ شَدِیْدُ الْمِحَالِ ۟ؕ

ಸಿಡಿಲು ಅವನನ್ನು ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡುತ್ತದೆ ಮತ್ತು ದೇವದೂತರುಗಳು ಕೂಡ ಅವನ ಭಯದಿಂದ (ಅವನನ್ನು ಸ್ತುತಿಸುತ್ತಾರೆ). ಅವನು ಸಿಡಿಲುಗಳನ್ನು ಕಳುಹಿಸಿ, ಅವನು ಇಚ್ಛಿಸುವವರಿಗೆ ಅದು ಬಡಿಯುವಂತೆ ಮಾಡುತ್ತಾನೆ. ಸತ್ಯನಿಷೇಧಿಗಳು ಅಲ್ಲಾಹನ ವಿಷಯದಲ್ಲಿ ತರ್ಕಿಸುತ್ತಾರೆ. ಆದರೆ ಅಲ್ಲಾಹು ಮಹಾ ಶಕ್ತಿಶಾಲಿಯಾಗಿದ್ದಾನೆ. info
التفاسير: