د قرآن کریم د معناګانو ژباړه - کنادي ژباړه - بشیر ميسوري

د مخ نمبر:close

external-link copy
64 : 12

قَالَ هَلْ اٰمَنُكُمْ عَلَیْهِ اِلَّا كَمَاۤ اَمِنْتُكُمْ عَلٰۤی اَخِیْهِ مِنْ قَبْلُ ؕ— فَاللّٰهُ خَیْرٌ حٰفِظًا ۪— وَّهُوَ اَرْحَمُ الرّٰحِمِیْنَ ۟

ಆಗ ಯಾಕೂಬ್‌ರವರು ಹೇಳಿದರು ಇದಕ್ಕೆ ಮೊದಲು ಅವನ ಸಹೋದರನ ವಿಚಾರದಲ್ಲಿ ನಿಮ್ಮನ್ನು ನಂಬಿದAತೆ ಇವನ ವಿಚಾರದಲ್ಲಿಯೂ ನಾನು ನಿಮ್ಮನ್ನು ನಂಬಬೇಕೆ? ಹಾಗೆಯೇ ಅಲ್ಲಾಹನೇ ಅತ್ಯುತ್ತಮ ಸಂರಕ್ಷಕನಾಗಿರುವನು, ಮತ್ತು ಅವನು ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ. info
التفاسير:

external-link copy
65 : 12

وَلَمَّا فَتَحُوْا مَتَاعَهُمْ وَجَدُوْا بِضَاعَتَهُمْ رُدَّتْ اِلَیْهِمْ ؕ— قَالُوْا یٰۤاَبَانَا مَا نَبْغِیْ ؕ— هٰذِهٖ بِضَاعَتُنَا رُدَّتْ اِلَیْنَا ۚ— وَنَمِیْرُ اَهْلَنَا وَنَحْفَظُ اَخَانَا وَنَزْدَادُ كَیْلَ بَعِیْرٍ ؕ— ذٰلِكَ كَیْلٌ یَّسِیْرٌ ۟

ಅವರು ತಮ್ಮ ಸರಕುಗಳನ್ನು ಬಿಚ್ಚಿದಾಗ ಅವರ ಬಂಡವಾಳವು ಅವರೆಡೆಗೆ ಹಿಂದಿರುಗಿಸಲಾಗಿರುವುದನ್ನು ಕಂಡು ಹೇಳಿದರು; ನಮ್ಮ ತಂದೆಯೇ ನಮಗೆ ಇನ್ನೇನು ಬೇಕು? ಇದೋ ನಮ್ಮ ಬಂಡವಾಳವನ್ನು ಸಹ ನಮಗೆ ಹಿಂದಿರುಗಿಸಲಾಗಿದೆ. ನಾವು ನಮ್ಮ ಕುಟುಂಬವನ್ನು ಪೋಷಿಸುವೆವು ಮತ್ತು ಸಹೋದರನನ್ನು ನೋಡಿಕೊಳ್ಳುವೆವು ಹಾಗೂ ಒಂದು ಒಂಟೆಯ ಹೊರೆಯಷÀÄ್ಟ ಧಾನ್ಯವನ್ನು ಹೆಚ್ಚಾಗಿ ತರುವೆವು, ಇದು ನಮಗೆ ಸುಲಭವಾಗಿ ದೊರಕುವ ಧಾನ್ಯವಾಗಿದೆ. info
التفاسير:

external-link copy
66 : 12

قَالَ لَنْ اُرْسِلَهٗ مَعَكُمْ حَتّٰی تُؤْتُوْنِ مَوْثِقًا مِّنَ اللّٰهِ لَتَاْتُنَّنِیْ بِهٖۤ اِلَّاۤ اَنْ یُّحَاطَ بِكُمْ ۚ— فَلَمَّاۤ اٰتَوْهُ مَوْثِقَهُمْ قَالَ اللّٰهُ عَلٰی مَا نَقُوْلُ وَكِیْلٌ ۟

ಅವರ ತಂದೆಯೂ ಹೇಳಿದರು; ನಾನು ಖಂಡಿತವಾಗಿ ಅವನನ್ನು ನಿಮ್ಮೊಂದಿಗೆ ಕಳುಹಿಸಲಾರೆ. ಖಂಡಿತ ನೀವು ಅವನನ್ನು ನನ್ನಲ್ಲಿಗೆ ತಲುಪಿಸಿಕೊಡುವಿರಿ ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ಮಾತು ಕೊಡಬೇಕು. ಆದರೆ ನೀವು ಯಾವುದಾದರೂ ವಿಪತ್ತಿನಲ್ಲಿ ಸಿಲುಕಿದರೆ ಬೇರೆ ಮಾತು. ಆಗವರು ದೃಢವಾದ ಭರವಸೆ ಕೊಟ್ಟಾಗ ಯಾಕೂಬರು ಹೇಳಿದರು; ನಾವು ಹೇಳುತ್ತಿರುವುದರ ಮೇಲೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ. info
التفاسير:

external-link copy
67 : 12

وَقَالَ یٰبَنِیَّ لَا تَدْخُلُوْا مِنْ بَابٍ وَّاحِدٍ وَّادْخُلُوْا مِنْ اَبْوَابٍ مُّتَفَرِّقَةٍ ؕ— وَمَاۤ اُغْنِیْ عَنْكُمْ مِّنَ اللّٰهِ مِنْ شَیْءٍ ؕ— اِنِ الْحُكْمُ اِلَّا لِلّٰهِ ؕ— عَلَیْهِ تَوَكَّلْتُ ۚ— وَعَلَیْهِ فَلْیَتَوَكَّلِ الْمُتَوَكِّلُوْنَ ۟

ಅವರ ತಂದೆಯು ಹೇಳಿದರು ಓ ನನ್ನ ಮಕ್ಕಳೇ, ನೀವೆಲ್ಲರೂ ಒಂದೇ ದ್ವಾರದ ಮೂಲಕ ಪ್ರವೇಶಿಸದೆ ವಿವಿಧ ದ್ವಾರಗಳ ಮೂಲಕ ಪ್ರವೇಶಿಸಿರಿ. ನಾನು ಅಲ್ಲಾಹನಿಂದ ಇರುವ ಯಾವ ವಿಧಿಯನ್ನು ನಿಮ್ಮಿಂದ ಸರಿಸಲಾರೆ. ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ನಾನು ಅವನ ಮೇಲೆಯೇ ಭರವಸೆಯನ್ನು ಇಟ್ಟಿದ್ದೇನೆ ಮತ್ತು ಭರವಸೆಯನ್ನಿರಿಸಿಕೊಳ್ಳುವ ಪ್ರತಿಯೊಬ್ಬನು ಅವನ ಮೇಲೆ ಭರವಸೆಯನ್ನಿಡಬೇಕು. info
التفاسير:

external-link copy
68 : 12

وَلَمَّا دَخَلُوْا مِنْ حَیْثُ اَمَرَهُمْ اَبُوْهُمْ ؕ— مَا كَانَ یُغْنِیْ عَنْهُمْ مِّنَ اللّٰهِ مِنْ شَیْءٍ اِلَّا حَاجَةً فِیْ نَفْسِ یَعْقُوْبَ قَضٰىهَا ؕ— وَاِنَّهٗ لَذُوْ عِلْمٍ لِّمَا عَلَّمْنٰهُ وَلٰكِنَّ اَكْثَرَ النَّاسِ لَا یَعْلَمُوْنَ ۟۠

ಅವರು ತಮ್ಮ ತಂದೆಯು ಆದೇಶಿಸಿದಂತೆ ವಿವಿಧ ದ್ವಾರಗಳಿಂದ ಪ್ರವೇಶಿಸಿದಾಗ ಅಲ್ಲಾಹನು ನಿಶ್ಚಯಿಸಿದಂತಹ ಸಂಗತಿಯಿAದ ಅವನು ಅವರನ್ನು ರಕ್ಷಿಸಿಕೊಳ್ಳುವ ಸಂಭವವೇ ಇರಲಿಲ್ಲ. ಆದರೆ ಯಾಕೂಬರ ಮನಸ್ಸಿನಲ್ಲಿ ಯೋಚನೆಯೊಂದು (ಉಂಟಾಯಿತು) ಅದನ್ನು ಅವರು ಪೂರ್ತಿಕರಿಸಿದರು. ನಿಸ್ಸಂಶಯವಾಗಿಯೂ ಅವರು ನಾವು ಕಲಿಸಿದ ಜ್ಞಾನದ ಸುಶಿಕ್ಷಿತರಾಗಿದ್ದರು. ಆದರೆ ಅಧಿಕ ಜನರು ಆರಿಯುವುದಿಲ್ಲ. info
التفاسير:

external-link copy
69 : 12

وَلَمَّا دَخَلُوْا عَلٰی یُوْسُفَ اٰوٰۤی اِلَیْهِ اَخَاهُ قَالَ اِنِّیْۤ اَنَا اَخُوْكَ فَلَا تَبْتَىِٕسْ بِمَا كَانُوْا یَعْمَلُوْنَ ۟

ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಅವರು ತನ್ನ ಸಹೋದರರನ್ನು (ಬಿನ್‌ಯಾಮಿನ್) ತನ್ನ ಬಳಿ ಇರಿಸಿದರು ಮತ್ತೆ ಹೇಳಿದರು ನಾನು ನಿನ್ನ ಸಹೋದರ (ಯೂಸುಫ್) ಆಗಿದ್ದೇನೆ. ಇನ್ನು ನೀನು ಅವರು ಮಾಡುತ್ತಿರುವ ಕೃತ್ಯಗಳ ಬಗ್ಗೆ ವ್ಯಥೆ ಪಡಬೇಡ. info
التفاسير: