د قرآن کریم د معناګانو ژباړه - کنادي ژباړه - بشیر ميسوري

د مخ نمبر:close

external-link copy
44 : 12

قَالُوْۤا اَضْغَاثُ اَحْلَامٍ ۚ— وَمَا نَحْنُ بِتَاْوِیْلِ الْاَحْلَامِ بِعٰلِمِیْنَ ۟

ಅವರು ಉತ್ತರಿಸಿದರು ಇವು ಗೊಂದಲಮಯವಾದ ಕನಸುಗಳ ಫಲ ನಮಗೆ ತಿಳಿಯದು. info
التفاسير:

external-link copy
45 : 12

وَقَالَ الَّذِیْ نَجَا مِنْهُمَا وَادَّكَرَ بَعْدَ اُمَّةٍ اَنَا اُنَبِّئُكُمْ بِتَاْوِیْلِهٖ فَاَرْسِلُوْنِ ۟

ಆ ಇಬ್ಬರು ಕೈದಿಗಳ ಪೈಕಿ ಬಿಡುಗಡೆ ಹೊಂದಿದವನಿಗೆ ಸುದೀರ್ಘ ಕಾಲದ ನಂತರ ಯೂಸುಫ್‌ರವರ ಮಾತು ನೆನಪಾಗಿ ಹೇಳಿದನು; ನಾನು ನಿಮಗೆ ಇದರ ವಿವರ ನೀಡುವೆನು ನನಗೆ ಯೂಸುಫ್‌ರವರ ಬಳಿ ಕಳುಹಿಸಿರಿ. info
التفاسير:

external-link copy
46 : 12

یُوْسُفُ اَیُّهَا الصِّدِّیْقُ اَفْتِنَا فِیْ سَبْعِ بَقَرٰتٍ سِمَانٍ یَّاْكُلُهُنَّ سَبْعٌ عِجَافٌ وَّسَبْعِ سُنْۢبُلٰتٍ خُضْرٍ وَّاُخَرَ یٰبِسٰتٍ ۙ— لَّعَلِّیْۤ اَرْجِعُ اِلَی النَّاسِ لَعَلَّهُمْ یَعْلَمُوْنَ ۟

ಓ ಸತ್ಯಸಂಧ ಯೂಸುಫ್, ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸಿರಾಗಿವೆ ಹಾಗೂ ಉಳಿದ ಏಳು ಒಣಗಿದವುಗಳಾಗಿವೆ. info
التفاسير:

external-link copy
47 : 12

قَالَ تَزْرَعُوْنَ سَبْعَ سِنِیْنَ دَاَبًا ۚ— فَمَا حَصَدْتُّمْ فَذَرُوْهُ فِیْ سُنْۢبُلِهٖۤ اِلَّا قَلِیْلًا مِّمَّا تَاْكُلُوْنَ ۟

ಯೂಸುಫ್ ಹೇಳಿದರು; ನೀವು ನಿರಂತರ ಏಳು ವರ್ಷಗಳ ಕಾಲ ಕೃಷಿ ಮಾಡಿರಿ ಆಮೇಲೆ ನೀವು ಕೊಯ್ಯುವ ಬೆಳೆಯಿಂದ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲಿ ಬಿಟ್ಟುಬಿಡಿರಿ. info
التفاسير:

external-link copy
48 : 12

ثُمَّ یَاْتِیْ مِنْ بَعْدِ ذٰلِكَ سَبْعٌ شِدَادٌ یَّاْكُلْنَ مَا قَدَّمْتُمْ لَهُنَّ اِلَّا قَلِیْلًا مِّمَّا تُحْصِنُوْنَ ۟

ಅದರ ತರುವಾಯ ಏಳು ವಷÀðಗಳ ಕಾಲ ಬರಗಾಲ ಬರಲಿದೆ. ನೀವು ಸಂಗ್ರಹಿಸಿಟ್ಟಿದ್ದನ್ನು ಅದು ತಿಂದುಬಿಡುವುದು. ಆದರೆ ನೀವು ಜೋಪಾನವಾಗಿರಿಸಿದ್ದ ಅಲ್ಪವನ್ನು ಬಿಟ್ಟು. info
التفاسير:

external-link copy
49 : 12

ثُمَّ یَاْتِیْ مِنْ بَعْدِ ذٰلِكَ عَامٌ فِیْهِ یُغَاثُ النَّاسُ وَفِیْهِ یَعْصِرُوْنَ ۟۠

ತರುವಾಯ ಬರುವ ಒಂದು ವರ್ಷದಲ್ಲಿ ಜನರಿಗೆ ಚೆನ್ನಾಗಿ ಮಳೆಯಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು. info
التفاسير:

external-link copy
50 : 12

وَقَالَ الْمَلِكُ ائْتُوْنِیْ بِهٖ ۚ— فَلَمَّا جَآءَهُ الرَّسُوْلُ قَالَ ارْجِعْ اِلٰی رَبِّكَ فَسْـَٔلْهُ مَا بَالُ النِّسْوَةِ الّٰتِیْ قَطَّعْنَ اَیْدِیَهُنَّ ؕ— اِنَّ رَبِّیْ بِكَیْدِهِنَّ عَلِیْمٌ ۟

ಮತ್ತು ರಾಜನು ಹೇಳಿದನು ಯೂಸುಫ್‌ರವರನ್ನು ನನ್ನ ಬಳಿಗೆ ಕರೆತನ್ನಿರಿ. ರಾಜದೂತ ಅವರ ಬಳಿಗೆ ಬಂದಾಗ ಅವರು ಹೇಳಿದರು ; ನೀನು ನಿನ್ನ ರಾಜನ ಬಳಿಗೆ ಮರಳಿ ಹೋಗು ಮತ್ತು ತಮ್ಮ ಕೈಗಳನ್ನು ಕೊಯ್ದುಕೊಂಡ ಆ ಸ್ತಿçÃಯರ ನಿಜಸ್ಥಿತಿ ಏನೆಂದು ಕೇಳು, ನಿಜವಾಗಿಯೂ ನನ್ನ ಪ್ರಭು ಅವರ ಕುತಂತ್ರಗಳನ್ನು ಚೆನ್ನಾಗಿ ಬಲ್ಲನು. info
التفاسير:

external-link copy
51 : 12

قَالَ مَا خَطْبُكُنَّ اِذْ رَاوَدْتُّنَّ یُوْسُفَ عَنْ نَّفْسِهٖ ؕ— قُلْنَ حَاشَ لِلّٰهِ مَا عَلِمْنَا عَلَیْهِ مِنْ سُوْٓءٍ ؕ— قَالَتِ امْرَاَتُ الْعَزِیْزِ الْـٰٔنَ حَصْحَصَ الْحَقُّ ؗ— اَنَا رَاوَدْتُّهٗ عَنْ نَّفْسِهٖ وَاِنَّهٗ لَمِنَ الصّٰدِقِیْنَ ۟

ರಾಜನು ಕೇಳಿದನು; ಸ್ತಿçÃಯರೇ ನೀವು ಯೂಸುಫ್‌ರವರನ್ನು ಪುಸಲಾಯಿಸಿದ ಸಂದರ್ಭದ ಸತ್ಯಸಂಗತಿ ಏನು? ಅವರು ಸ್ಪಷ್ಟವಾಗಿ ಉತ್ತರಿಸಿದರು; “ಹಾಶಲಿಲ್ಲಾಹ್!” ನಾವು ಯೂಸುಫ್‌ರವರಲ್ಲಿ ಯಾವ ಕೇಡನ್ನು ಕಂಡಿಲ್ಲ. ರಾಜನ ಪತ್ನಿಯೂ ಸಹ ಹೇಳಿದಳು; ಈಗಂತೂ ಸತ್ಯ ಸಂಗತಿಯು ಬಯಲಾಗಿದೆ. ನಾನೇ ಯೂಸುಫ್ ರವರನ್ನು ಪುಸಲಾಯಿಸಿ ಪಾಪಕ್ಕೆ ಪ್ರೇರೇಪಿಸಿದ್ದೆ ನಿಜವಾಗಿಯೂ ಅವರು ಸತ್ಯಸಂಧರಲ್ಲಾಗಿರುವರು. info
التفاسير:

external-link copy
52 : 12

ذٰلِكَ لِیَعْلَمَ اَنِّیْ لَمْ اَخُنْهُ بِالْغَیْبِ وَاَنَّ اللّٰهَ لَا یَهْدِیْ كَیْدَ الْخَآىِٕنِیْنَ ۟

(ಯೂಸುಫ್ ಹೇಳಿದರು) ಇದೇಕೆಂದರೆ ನಾನು ರಾಜನಿಗೆ ಅವನ ಅನುಪಸ್ಥಿತಿಯಲ್ಲಿ ದ್ರೋಹ ಮಾಡಿಲ್ಲವೆಂದು, ಅರಿತುಕೊಳ್ಳಲೆಂದಾಗಿದೆ ಮತ್ತು ಅಲ್ಲಾಹನು ದ್ರೋಹ ಬಗೆಯುವವರ ಕುತಂತ್ರವನ್ನು ನಡೆಯಲು ಬಿಡಲಾರನು info
التفاسير: