د قرآن کریم د معناګانو ژباړه - کنادي ژباړه - بشیر ميسوري

د مخ نمبر:close

external-link copy
5 : 12

قَالَ یٰبُنَیَّ لَا تَقْصُصْ رُءْیَاكَ عَلٰۤی اِخْوَتِكَ فَیَكِیْدُوْا لَكَ كَیْدًا ؕ— اِنَّ الشَّیْطٰنَ لِلْاِنْسَانِ عَدُوٌّ مُّبِیْنٌ ۟

ಆಗ ಅವರ ತಂದೆ ಹೇಳಿದರು; ಪ್ರಿಯ ಪುತ್ರ ನಿನ್ನ ಈ ಕನಸಿನ ವಿಚಾರವನ್ನು ನಿನ್ನ ಸಹೋದರರ ಮುಂದೆ ಪ್ರಸ್ತಾಪಿಸಬೇಡ, ಅವರು ನಿನ್ನ ವಿರುದ್ಧ ಯಾವುದಾದರೂ ಕುತಂತ್ರವನ್ನು ಪ್ರಯೋಗಿಸಬಹುದು. ನಿಶ್ಚಯವಾಗಿಯೂ ಶೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿದ್ದಾನೆ. info
التفاسير:

external-link copy
6 : 12

وَكَذٰلِكَ یَجْتَبِیْكَ رَبُّكَ وَیُعَلِّمُكَ مِنْ تَاْوِیْلِ الْاَحَادِیْثِ وَیُتِمُّ نِعْمَتَهٗ عَلَیْكَ وَعَلٰۤی اٰلِ یَعْقُوْبَ كَمَاۤ اَتَمَّهَا عَلٰۤی اَبَوَیْكَ مِنْ قَبْلُ اِبْرٰهِیْمَ وَاِسْحٰقَ ؕ— اِنَّ رَبَّكَ عَلِیْمٌ حَكِیْمٌ ۟۠

ಇದೇ ಪ್ರಕಾರ (ಸ್ವಪ್ನದಲ್ಲಿ ಕಂಡAತೆ) ನಿನ್ನ ಪ್ರಭು ನಿನ್ನನ್ನು( ಪ್ರವಾದಿತ್ವಕ್ಕಾಗಿ) ಆಯ್ದುಕೊಳ್ಳುವನು ಮತ್ತು ಸ್ವಪ್ನವ್ಯಾಖ್ಯಾನಗಳ ಆಳಕ್ಕೆ ತಲುಪುವ ಜ್ಞಾನವನ್ನು ಸಹ ಕಲಿಸುವನು. ಮತ್ತು ಇದಕ್ಕೆ ಮೊದಲು ನಿನ್ನ ಪೂರ್ವಜರಾದ ಇಬ್ರಾಹೀಮ್ ಇಸ್‌ಹಾಕ್‌ರವರ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದಂತೆಯೇ ನಿನ್ನ ಮೇಲೂ ಮತ್ತು ಯಾಕೂಬರ ಕುಟುಂಬದ ಮೇಲೂ ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ ಪ್ರಭು ಸರ್ವಜ್ಞಾನಿಯು ಮಹಾ ಯುಕ್ತಿವಂತನೂ ಆಗಿದ್ದಾನೆ. info
التفاسير:

external-link copy
7 : 12

لَقَدْ كَانَ فِیْ یُوْسُفَ وَاِخْوَتِهٖۤ اٰیٰتٌ لِّلسَّآىِٕلِیْنَ ۟

ನಿಶ್ಚಯವಾಗಿಯೂ ಯೂಸುಫ್ ಮತ್ತು ಅವರ ಸಹೋದರರ ಚರಿತ್ರೆಯಲ್ಲಿ ವಿಚಾರಿಸುವವರಿಗೆ ನಿದರ್ಶನಗಳಿವೆ. info
التفاسير:

external-link copy
8 : 12

اِذْ قَالُوْا لَیُوْسُفُ وَاَخُوْهُ اَحَبُّ اِلٰۤی اَبِیْنَا مِنَّا وَنَحْنُ عُصْبَةٌ ؕ— اِنَّ اَبَانَا لَفِیْ ضَلٰلٍ مُّبِیْنِ ۟ۙۖ

ಅವರ ಸಹೋದರರು ಪರಸ್ಪರ ಹೇಳಿದ ಸಂದರ್ಭವನ್ನು ಸ್ಮರಿಸಿರಿ ನಾವು (ಬಲಿಷ್ಠ) ತಂಡವಾಗಿದ್ದರೂ ಯೂಸುಫ್ ಮತ್ತು ಅವರ ಸಹೋದರ ನಮ್ಮ ತಂದೆಗೆ ನಮಗಿಂತಲೂ ಹೆಚ್ಚು ಪ್ರಿಯರಾಗಿದ್ದಾರೆ, ನಿಸ್ಸಂಶಯವಾಗಿಯೂ ನಮ್ಮ ತಂದೆಯು ಸ್ಪಷ್ಟ ತಪ್ಪಿನಲ್ಲಿದ್ದಾರೆ. info
التفاسير:

external-link copy
9 : 12

١قْتُلُوْا یُوْسُفَ اَوِ اطْرَحُوْهُ اَرْضًا یَّخْلُ لَكُمْ وَجْهُ اَبِیْكُمْ وَتَكُوْنُوْا مِنْ بَعْدِهٖ قَوْمًا صٰلِحِیْنَ ۟

(ಈಗ ನಿಮಗಿರುವ ದಾರಿ) ನೀವು ಯೂಸುಫ್ ರವರನ್ನು ಕೊಂದು ಹಾಕಿರಿ ಅಥವ ಅವನನ್ನು ಎಲ್ಲಾದರೂ ದೂರ ಪ್ರದೇಶದಲ್ಲಿ ಎಸೆದು ಬಿಡಿರಿ ಆಗ ನಿಮ್ಮ ತಂದೆಯ ಒಲವು ಕೇವಲ ನಿಮ್ಮೆಡೆಗೆ ಇರುವುದು ಮತ್ತು ಅದರ ನಂತರ ನೀವು(ಪಶ್ಚಾತಾಪ ಪಟ್ಟು) ಸಜ್ಜನರಾಗಿಬಿಡಿರಿ. info
التفاسير:

external-link copy
10 : 12

قَالَ قَآىِٕلٌ مِّنْهُمْ لَا تَقْتُلُوْا یُوْسُفَ وَاَلْقُوْهُ فِیْ غَیٰبَتِ الْجُبِّ یَلْتَقِطْهُ بَعْضُ السَّیَّارَةِ اِنْ كُنْتُمْ فٰعِلِیْنَ ۟

ಅವರ ಪೈಕಿ ಒಬ್ಬನು ಹೇಳಿದನು; ನೀವು ಯೂಸುಫ್‌ನನ್ನು ಕೊಲ್ಲಬೇಡಿರಿ. ನಿಮಗೇನಾದರೂ ಮಾಡುವುದೇ ಇದ್ದರೆ ಅವನನ್ನು ಯಾವುದಾದರೂ ಪಾಳು ಬಾವಿಯಲ್ಲಿ ಹಾಕಿಬಿಡಿರಿ. ಯಾವುದಾದರೂ ಯಾತ್ರಿಕ ತಂಡವು ಅವನನ್ನು ಎತ್ತಿ ಕೊಂಡೊಯ್ಯುವುದು. info
التفاسير:

external-link copy
11 : 12

قَالُوْا یٰۤاَبَانَا مَا لَكَ لَا تَاْمَنَّا عَلٰی یُوْسُفَ وَاِنَّا لَهٗ لَنٰصِحُوْنَ ۟

ಅವರು ಹೇಳಿದರು; ನಮ್ಮ ತಂದೆಯೇ! ನೀವು ಯೂಸುಫ್‌ರವರ ವಿಚಾರದಲ್ಲಿ ನಮ್ಮನ್ನು ಏಕೆ ನಂಬುವುದಿಲ್ಲ ? ನಿಶ್ಚಯವಾಗಿಯೂ ನಾವು ಅವನ ಹಿತೈಷಿಗಳಾಗಿದ್ದೇವೆ. info
التفاسير:

external-link copy
12 : 12

اَرْسِلْهُ مَعَنَا غَدًا یَّرْتَعْ وَیَلْعَبْ وَاِنَّا لَهٗ لَحٰفِظُوْنَ ۟

ನಾಳೆ ಅವನನ್ನು ನಮ್ಮೊಂದಿಗೆ ಕಳುಹಿಸಿರಿ. ಅವನು ತಿನ್ನಲಿ ಕುಡಿಯಲಿ ಹಾಗೂ ಆಟವಾಡಲಿ ಅವನ ಸಂರಕ್ಷಣೆಯ ಹೊಣೆಗಾರರು ನಾವಾಗಿದ್ದೇವೆ. info
التفاسير:

external-link copy
13 : 12

قَالَ اِنِّیْ لَیَحْزُنُنِیْۤ اَنْ تَذْهَبُوْا بِهٖ وَاَخَافُ اَنْ یَّاْكُلَهُ الذِّئْبُ وَاَنْتُمْ عَنْهُ غٰفِلُوْنَ ۟

ಅವರ ತಂದೆ ಹೇಳಿದರು ; ಅವನನ್ನು ನೀವು ಕರೆದುಕೊಂಡು ಹೋಗುವ ವಿಚಾರವು ನನಗೆ ತುಂಬಾ ವ್ಯಥೆಪಡಿಸುವಂತಹದ್ದಾಗಿದೆ, ಮತ್ತು ನೀವು ಅವನ ಬಗ್ಗೆ ನಿರ್ಲಕ್ಷö್ಯಕರಾಗಿರುವಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನಾನು ಭಯಪಡುತ್ತೇನೆ. info
التفاسير:

external-link copy
14 : 12

قَالُوْا لَىِٕنْ اَكَلَهُ الذِّئْبُ وَنَحْنُ عُصْبَةٌ اِنَّاۤ اِذًا لَّخٰسِرُوْنَ ۟

ಅವರು ಉತ್ತರಿಸಿದರು; ನಮ್ಮಂತಹ ಬಲಿಷ್ಠ ತಂಡದ ಉಪಸ್ಥಿತಿಯಲ್ಲಿ ಅವನÀನ್ನು ತೋಳವು ತಿಂದು ಬಿಡುವುದಾದರೆ ಖಂಡಿತ ನಾವು ಅಸಮರ್ಥರೇ ಆಗಿರುವೆವು. info
التفاسير: